Advertisement

ಭಾಷಣಕ್ಕೆ ಸೀಮಿತವಾಗದಿರಲಿ ಹೋರಾಟ

11:16 AM Dec 01, 2018 | Team Udayavani |

ಕಲಬುರಗಿ: ಹೋರಾಟಗಳು ಕೇವಲ ಭಾಷಣಕ್ಕೆ ಸೀಮಿತವಾಗದೆ ಸಮಾಜದ ತಳ ಸಮುದಾಯ, ಶೋಷಿತರ ವರ್ಗ ಮತ್ತು ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುವಂತೆ ಆಗಬೇಕೆಂದು ಚಿತ್ರನಟ ಚೇತನ ಹೇಳಿದರು.

Advertisement

ನಗರದ ಸರ್ಕಾರಿ ಅಂಧ ಬಾಲಕ ವಸತಿ ಶಾಲೆಯಲ್ಲಿ ಜೈ ಕನ್ನಡಿಗರ ರಕ್ಷಣಾ ವೇದಿಕೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 63ನೇ ಕನ್ನಡ ರಾಜೋತ್ಯವ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಗತಿಪರ ಹೋರಾಟದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ಕಾರ್ಮಿಕರು, ಶ್ರಮಿಕರು, ಅಲೆಮಾರಿಗಳು, ತಳ ಸಮುದಾಯದ ಅಭಿವೃದ್ಧಿಗಾಗಿ ಧ್ವನಿ ಎತ್ತಬೇಕು ಎಂದರು.
 
ಅಲೆಮಾರಿ, ಲಂಬಾಣಿ, ಹಕ್ಕಿ-ಪಿಕ್ಕಿ ಸಮುದಾಯಗಳ ಆಚರಣೆಗಳು ಅಸ್ತಿತ್ವದಲ್ಲಿ ಇರಲು ಅದೇ ಸಮುದಾಯಗಳ ಹೋರಾಟದಿಂದ ಹೊರತು, ಆಡಳಿತ ಅಥವಾ ಮೇಲ್ವರ್ಗದವರಿಂದಲ್ಲ. ವೈವಿಧ್ಯತೆಯೇ ಭಾರತದ ಶಕ್ತಿಯಾಗಿದ್ದು, ದೇಶದಲ್ಲಿ ಏಕರೂಪತೆ ಸ್ಥಾಪಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಹಿಂದಿ, ಹಿಂದೂತ್ವ ಹೇರಿಕೆಯ ಹುನ್ನಾರ ತಡೆಯುವ ಕಾರ್ಯವಾಗಬೇಕು ಎಂದು
ಹೇಳಿದರು. 

ಕಾಂಗ್ರೆಸ್‌ ಮುಖಂಡ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಕನ್ನಡ ನಾಡು, ನುಡಿ, ಜಲಕ್ಕಾಗಿ ಹೋರಾಡುತ್ತಿರುವ ಸಂಘಟನೆಗಳಿಗೆ ಪ್ರಗತಿಪರ ಶಕ್ತಿಗಳು ಬೆಂಬಲ ನೀಡಬೇಕೆಂದು ಕರೆ ನೀಡಿದರು. ಇದೇ ವೇಳೆ ವೈದ್ಯರು, ವಕೀಲರು, ಪತ್ರಿಕಾ ಮತ್ತು ದೃಶ್ಯ ಮಾಧ್ಯಮದ ಛಾಯಾಗ್ರಾಹಕರನ್ನು ಸನ್ಮಾನಿಸಲಾಯಿತು.

ಶ್ರೀಶೈಲ ಸಾರಂಗಮಂಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಕಂಬಳೇಶ್ವರ ಸಂಸ್ಥಾನದ ಸೋಮಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮಹಾನಗರ ಪಾಲಿಕೆ ಮೇಯರ್‌ ಮಲ್ಲಮ್ಮ ವಳಕೇರಿ, ಕಾಂಗ್ರೆಸ್‌ ಮುಖಂಡ ನೀಲಕಂಠ ಮಾಲಗೆ, ಚಂದ್ರಕಾಂತ ಅಷ್ಟಗಿ, ಜೈಕನ್ನಡಿಗರ ವೇದಿಕೆ ಅಧ್ಯಕ್ಷ ಸಚಿನ ಫರತಾಬಾದ, ದತ್ತು ಭಾಸಗಿ, ಕಾಶಿನಾಥ ಮಾಳಗಿ, ಅಮೃತ ಪಾಟೀಲ, ಮಂಜುನಾಥ ನಾಲವಾರಕರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next