Advertisement

ಕುಮ್ಮಟದುರ್ಗ ಪುನರುತ್ಥಾನಕ್ಕೆ ಹೋರಾಟ ಅಗತ್ಯ

04:14 PM Nov 14, 2020 | Suhan S |

ಗಂಗಾವತಿ: ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ದೆಹಲಿ ಸುಲ್ತಾನರನ್ನು ಸೋಲಿಸಿದ ಕುಮ್ಮಟದುರ್ಗದ ಗಂಡುಗಲಿಕುಮಾರ ರಾಮನ ಕುರಿತು ಜನತೆಗೆ ತಿಳಿಸುವ ಅಗತ್ಯವಿದೆ. ಕುಮ್ಮಟದುರ್ಗದ ಇತಿಹಾಸಪುನರುತ್ಥಾನಕ್ಕಾಗಿ ಸಂಘಟಿತ ಹೋರಾಟಅಗತ್ಯ ಎಂದು ವಾಲ್ಮೀಕಿ ಗುರುಕುಲದ ಬ್ರಹ್ಮಾನಂದ ಸ್ವಾಮಿಗಳು ಹೇಳಿದರು.

Advertisement

ನಗರದ ಐಎಂಎ ಭವನದಲ್ಲಿ ಕುಮ್ಮಟದುರ್ಗದಲ್ಲಿ ಅಭಿವೃದ್ಧಿ ಕಾರ್ಯಗಳು ಮತ್ತು ಹೋರಾಟ ಸಮಿತಿರಚನೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ದೆಹಲಿ ಸುಲ್ತಾನರು ದಕ್ಷಿಣ ಭಾರತದಲ್ಲಿದ್ದ ಎಲ್ಲ ಸಾಮ್ರಾಜ್ಯಗಳು ಸಂಸ್ಥಾನಗಳನ್ನುಗೆದ್ದು ನಂತರ ಕುಮ್ಮಟದುರ್ಗದಲ್ಲಿ ಗಂಡುಗಲಿ ಕುಮಾರ ರಾಮ ಸಾಮ್ರಾಜ್ಯ ನಿರ್ಮಿಸಿ ಆಳ್ವಿಕೆ ನಡೆಸಿದರು. ಕನ್ನಡ ಭಾಷೆ ನೆಲ ಜಲದ ಬಗ್ಗೆ ಕುಮಾರರಾಮ ಅನೇಕ ಕಾರ್ಯ ಮಾಡಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರಕಾರಗಳು ಇದುವರೆಗೂ ಕುಮ್ಮಟ ದುರ್ಗ ಗಂಡುಗಲಿ ಕುಮಾರರಾಮನ ಇತಿಹಾಸ ಹಾಗೂ ಕುಮ್ಮಟದುರ್ಗ ಸ್ಮಾರಕ ಸಂರಕ್ಷಣೆ ಮಾಡಿಲ್ಲ. ಪ್ರಾಚ್ಯವಸ್ತು, ಪುರಾತತ್ವ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಕುಮ್ಮಟ ದುರ್ಗದ ಅಸ್ತಿತ್ವದ ಕುರಿತು ಮಾಹಿತಿ ಪ್ರಚಾರ ಮಾಡಿಲ್ಲ. ಜಿಲ್ಲಾಡಳಿತ ಕುಮ್ಮಟದುರ್ಗದ ಕುರಿತು ನಿರ್ಲಕ್ಷ್ಯ ಭಾವನೆ ತಾಳಿದೆ. ಎಲ್ಲ ಸಮುದಾಯದವರು ಸೇರಿ ಕುಮ್ಮಟ ದುರ್ಗ ಅಭಿವೃದ್ಧಿ ಸಮಿತಿ ಹೆಸರಿನಲ್ಲಿ ಸಂಘಟಿತರಾಗಿ ಹೋರಾಟ ನಡೆಸಬೇಕಿದೆ ಎಂದರು.

ಡಾ| ಶಿವಕುಮಾರ ಮಾಲಿಪಾಟೀಲ್‌, ಪಂಪಣ್ಣನಾಯಕ, ಹರನಾಯಕ, ರಾಜೇಶ ನಾಯಕ, ಡಾ| ವಿಶ್ವನಾಥ, ಈರಣ್ಣ ಪೂಜಾರಿ ಅನಿಸಿಕೆ ವ್ಯಕ್ತಪಡಿಸಿ ಕುಮ್ಮಟದುರ್ಗದ ಅಭಿವೃದ್ಧಿ ಕುರಿತು ಸಲಹೆ ನೀಡಿದರು. ಶರಣೇಗೌಡ, ಸಿ. ಪ್ರಭಾಕರ, ಶಿವಾನಂದಗೌಡ, ಮೈಲಾರಪ್ಪ ಬೂದಿಹಾಳ, ಸೋಮುಕುದ್ರಿಹಾಳ, ದುರುಗೇಶ, ಪ್ರಲ್ಹಾದ ಕುಲಕರ್ಣಿ, ಪತ್ರಕರ್ತ ಕೆ. ನಿಂಗಜ್ಜ, ಸಿ. ಮಹಾಲಕ್ಷ್ಮೀ, ಮಲ್ಲಿಕಾರ್ಜುನ ಸಿದ್ದಾಪುರ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next