Advertisement

ಉತ್ತರಾಧಿಕಾರಕ್ಕಾಗಿ ಅಲ್ಲ, ಆಸ್ತಿ ಉಳಿವಿಗೆ ಹೋರಾಟ

02:06 PM Jan 28, 2021 | Team Udayavani |

ಹುಬ್ಬಳ್ಳಿ: ಮೂರುಸಾವಿರ ಮಠದ ಉನ್ನತ ಸಮಿತಿಯವರಿಂದಲೇ ಶ್ರೀಮಠವು ಸರ್ವನಾಶವಾಗುತ್ತಿದ್ದು, ಇದನ್ನು ತಪ್ಪಿಸಲು ಹಾಗೂ ಮಠದ ಆಸ್ತಿ ಉಳಿಸುವ ಸಲುವಾಗಿ ನಾನು ಹೋರಾಟ ಮಾಡುತ್ತಿದ್ದೇನೆ ಹೊರತು ಉತ್ತರಾಧಿಕಾರಕ್ಕಾಗಿ ಅಲ್ಲ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಾನುಮಾಡುತ್ತಿರುವ ಹೋರಾಟ ವ್ಯರ್ಥ ಪ್ರಯತ್ನವೆಂದು ಮೋಹನ ಲಿಂಬಿಕಾಯಿ  ಹೇಳಿದ್ದಾರೆ. ಒಂದು ವೇಳೆ ಮಠದ ಆಸ್ತಿ ಉಳಿಸಿಕೊಳ್ಳಲು ಆಗದಿದ್ದರೆ ಹಾಗೂ ನನ್ನ ಈ ಹೋರಾಟದ ಪ್ರಯತ್ನ ವ್ಯರ್ಥವಾದರೆ 36 ವರ್ಷದಿಂದ ತೊಟ್ಟ ಕಾವಿ ಬಟ್ಟೆ ತ್ಯಜಿಸುವೆ ಎಂದರು.

ಮಠದಲ್ಲಿ ಎಷ್ಟು ಅವ್ಯವಹಾರ ಆಗಿದೆ ಎಂಬುದರ ಬಗ್ಗೆ ನನ್ನ ಬಳಿ ದಾಖಲಿಗಳಿವೆ. ಅವ್ಯವಹಾರ ಆಗಿಲ್ಲಾ ಎನ್ನುವುದಾದರೆ ಲಿಂಬಿಕಾಯಿ ಮತ್ತು ಶಂಕರಣ್ಣ ಮುನವಳ್ಳಿ ಮಠದ ಕತೃì ಗದ್ದುಗೆಗೆ ಬರಲಿ. ನಾನುಅಲ್ಲಿಗೆ ದಾಖಲೆಗಳೊಂದಿಗೆ ಬಂದು ಬಿಡುಗಡೆ  ಮಾಡುತ್ತೇನೆ ಎಂದರು.

ನಾನು ಮಠದ ಆಸ್ತಿ ಉಳಿಸಲು ಹೋರಾಟ ನಡೆಸಿದಾಗ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಯಾರು ಎಂದು ರಾಜ್ಯದ ಜನರಿಗೆ ಗೊತ್ತೆ ಇರಲಿಲ್ಲ.ಮಾಜಿ ಸಚಿವ ಸಿ.ಎಂ. ಉದಾಸಿ, ಮೋಹನ  ಲಿಂಬಿಕಾಯಿ, ಶಂಕರಣ್ಣ ಮುನವಳ್ಳಿ ಈ ಮೂವರ ಕುತಂತ್ರದಿಂದ ನಾನುಉತ್ತರಾಧಿಕಾರಿಯಾಗಲು ಹಿನ್ನಡೆಯಾಯಿತು. ಇವರೇ ಅದಕ್ಕೆ ಅಡ್ಡಗಾಲು ಹಾಕಿದರು ಎಂದು ಆರೋಪಿಸಿದರು.

ಇದನ್ನೂ ಓದಿ:ಸಿರಿಧಾನ್ಯ ಬೆಳೆವ ರೈತರಿಗೆ ಉತ್ತೇಜನ

Advertisement

ಮೂರುಸಾವಿರಮಠದ ಜತೆಗೆ ಹಾನಗಲ್ಲ ಕುಮಾರಸ್ವಾಮಿಗಳ  ಮಠವನ್ನು ಸಿ.ಎಂ. ಉದಾಸಿ ಹಾಳು ಮಾಡಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುವೆ ಎಂದರು. ಉನ್ನತ ಸಮಿತಿ ಸದಸ್ಯ ಬಸವರಾಜ ಹೊರಟ್ಟಿಯವರಿಗೆ ಮಠದ ಬಗ್ಗೆ ಕಾಳಜಿ ಇದ್ದರೆ ಕೆಎಲ್‌ಇ ಸಂಸ್ಥೆಗೆ ದಾನವಾಗಿ ನೀಡಿದ ಮಠದ 24 ಎಕರೆ ಜಾಗವನ್ನು ಮರಳಿಸಲು ಮುಂದಾಗಲಿ. ಅದನ್ನು ಬಿಟ್ಟು ಕೆಎಲ್‌ಇಯವರನ್ನು ಮನವೊಲಿಸುವ ಕಾರ್ಯ ಮಾಡಬೇಡಿ ಎಂದರು.

ಮಂಟೂರನ ಶಿವಲಿಂಗೇಶ್ವರ ಸ್ವಾಮೀಜಿ, ಬೊಮ್ಮನಹಳ್ಳಿಯ ಶಿವಯೋಗೀಶ್ವರ ಸ್ವಾಮೀಜಿ, ಚಿಕ್ಕೇರೂರನ ಚಂದ್ರಶೇಖರ ಸ್ವಾಮೀಜಿ, ಸದಾಶಿವಪೇಟೆಯ ಗದಿಗೇಶ್ವರ ಸ್ವಾಮೀಜಿ, ಸವಣೂರ ಬಾಳೂರನ ಕುಮಾರ ಸ್ವಾಮೀಜಿ, ಸವಣೂರ ಕಲ್ಮಠದ ಮಹಾಂತಸ್ವಾಮೀಜಿ, ಹನುಮನಹಳ್ಳಿಯ ಶಿವಬಸವ ಸ್ವಾಮೀಜಿ, ಅಣ್ಣಿಗೇರಿ- ನೀಲಗುಂದದ ಪ್ರಭುಲಿಂಗ ಸ್ವಾಮೀಜಿ ಹಾಗೂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next