ಶಿವಮೊಗ್ಗ: ಎರಡು ಕುಟುಂಬಗಳ ನಡುವಿನ ಜಗಳ ವ್ಯಕ್ತಿಯೋರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ನಡೆದಿದೆ.
ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, 50 ವರ್ಷದ ಕರಿಯಪ್ಪ ಕೊಲೆಯಾದ ವ್ಯಕ್ತಿ.
ಗ್ರಾಮದಲ್ಲಿ ಜಮೀನಿಗೆ ನೀರು ಹಾಯಿಸುವ ವಿಚಾರದ ಹಿನ್ನಲೆಯಲ್ಲಿ ಗಲಾಟೆಯಾಗಿದೆ ಎನ್ನಲಾಗಿದೆ. ಇದೇ ವಿಚಾರವಾಗಿ ನಿನ್ನೆ ರಾತ್ರಿ ಗಲಾಟೆಯಾಗಿದ್ದು, ಕರಿಯಪ್ಪ ಮತ್ತು ಕುಟುಂಬದ ಐವರ ಮೇಲೆ ಹಲ್ಲೆ ಮಾಡಲಾಗಿದೆ.
ಜಗದೀಶ್ ಮಂಜಪ್ಪ ರಮೇಶಪ್ಪ ಸೇರಿ ಹತ್ತು ಜನರು ಕರಿಯಪ್ಪ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಘಟನೆ ನಂತರ ಇವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಕರಿಯಪ್ಪ ಕುಟುಂಬದ ಐವರಿಗೆ ಗಾಯಗೊಂಡಿದ್ದು, ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆ ಗೆ ದಾಖಲಿಸಲಾಗಿದೆ.
ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.