ವಿಜಯಪುರ: ಕಳೆದ 5 ತಿಂಗಳಿನಿಂದ ದೇಶದಲ್ಲಿ ಕೋವಿಡ್ ಸೋಂಕಿನಿಂದ ಜನರು ತತ್ತರಿಸಿದ್ದಾರೆ. ರೈತರು, ಕೃಷಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ರಾಜ್ಯ ಸರಕಾರ ಪ್ರಜಾತಾಂತ್ರಿಕತೆ ಗಾಳಿಗೆ ತೂರಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿರುವುದು, ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ ಎಂದು ರೈತ ಕೃಷಿ ಕಾರ್ಮಿಕರ ಸಂಘಟನೆ ರಾಜ್ಯ ಖಜಾಂಚಿ ವಿ. ನಾಗಮ್ಮಾಳ್ ವಾಗ್ಧಾಳಿ ನಡೆಸಿದರು.
ರೈತ ಕೃಷಿ ಕಾರ್ಮಿಕರ ಸಂಘಟನೆ ಹಮ್ಮಿಕೊಂಡಿದ್ದ ಫೇಸ್‌ಬುಕ್ ಲೈವ್ ಕಾರ್ಯಕ್ರಮದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ, ರೈತರ ಮೇಲಿನ ಪರಿಣಾಮ ವಿಷಯದ ಬಗ್ಗೆ ಅವರು ಮಾತನಾಡಿದರು. ಪ್ರಜಾತಾಂತ್ರಿಕವಾಗಿ ಯಾವುದೇ ಚರ್ಚೆಗೂ ಅವಕಾಶ ನೀಡದೇ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿರುವುದು ತೀವ್ರ ಖಂಡನೀಯ. ಈ ಜನ ವಿರೋಧ ಕಾಯ್ದೆ ವಿರುದ್ಧ ಸಂಘಟಿತವಾದ ಬಲಿಷ್ಠ ಹೋರಾಟದ ಅಗತ್ಯವಿದೆ ಎಂದರು.
ಯಾವುದೆ ಕೃಷಿ ಉತ್ಪನ್ನದ ಮಾರಾಟ ಮತ್ತು ಖರೀದಿ ಪಕ್ರಿಯೆ ಎಪಿಎಂಸಿ ಮೂಲಕವೇ ನಡೆಯಬೇಕು ಎಂದಿದ್ದ ಹಳೆ ಪದ್ಧತಿ ಗಾಳಿಗೆ ತೂರಿ, ಖಾಸಗಿ ಒಡೆತನದ ಮಾರುಕಟ್ಟೆಗೆ ಹೊಸ ತಿದ್ದುಪಡಿ ಮಣೆ ಹಾಕಿದೆ. ಇದರಿಂದ ಯಾವುದೆ ವ್ಯಕ್ತಿ ಒಂದು ಮತ್ತು ಒಂದಕ್ಕಿಂತ ಹೆಚ್ಚು ಮಾರುಕಟ್ಟೆ ತೆರೆದು ಅಲ್ಲಿನ ಸಂಪೂರ್ಣ ವಹಿವಾಟಿನ ಮೇಲೆ ಲಾಭ ಪಡೆಯುವಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ಪದನಾ ವೆಚ್ಚದ ಹೊರೆ ಅನುಭವಿಸುತ್ತಿರುವ ರೈತರ ಹೊಲಗಳಿಗೆ ಬಂದು ಹಣವಂತರು ಭೂಮಿ ಖರೀದಿಸುವ ಅವಕಾಶ ನೀಡಿರುವುದು ಬಹುರಾಷ್ಟ್ರೀಯ ಕಂಪನಿಗಳು ಅಧಿಕ ಬೆಲೆಗೆ ಭೂಮಿ ಖರೀ ದಿಸಿ ರೈತರ ಹಕ್ಕನ್ನು ಕಸಿಯುವ ಹುನ್ನಾರ ನಡೆಸಿದೆ. ರೈತರು ಆಳವಾದ ಪಾತಳಕ್ಕೆ ತಳ್ಳುವ ಸಬೂಬು ಹೇಳುತ್ತಿರುವ ಸರ್ಕಾರ, ಭವಿಷ್ಯದ ದಿನಗಳಲ್ಲಿ ಭೂಮಿ ಹಾಗೂ ರೈತರ ಉತ್ಪನ್ನಗಳನ್ನು ಕೊಳ್ಳುವ ಬಹುರಾಷ್ಟ್ರೀಯ ಕಂಪನಿಗಳು ಕೃಷಿ ಉತ್ಪನ್ನ ಮಾರುಕಟ್ಟೆಯನ್ನೇ ನಿರ್ನಾಮ ಮಾಡಲಿದೆ. ರೈತರು ಬಹುರಾಷ್ಟ್ರೀಯ ಕಂಪನಿಗಳ ದಾಸರಾಗುವ ದುಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಖಾಸಗಿ ಮಾರುಕಟ್ಟೆ ಅಸ್ತಿತ್ವದಿಂದ ಎಪಿಎಂಸಿಗೆ ತೊಂದರೆ ಇಲ್ಲವೆಂದು ಸರಕಾರಸ ಮಜಾಯಿಸಿ ನೀಡಿದರೂ ವಾಸ್ತವದಲ್ಲಿ ಕ್ರಮೇಣ ಖಾಸಗಿ ಒಡೆತನದ ಮಾರುಕಟ್ಟೆ ವಿಸ್ತರಣೆಗೂಂಡು ಎಪಿಎಂಸಿಗಳೂ ನಶಿಸಿ ಹೋಗಲಿವೆ. ಸದರಿ ತಿದ್ದುಪಡಿ ರೈತರ ಜಮೀನಿನಲ್ಲಿನ ಬೆಳೆ ಕಟವಾಟು ಹಂತದಿಂದ ದಾಸ್ತಾನು, ಸಾರಿಗೆ, ಸಂಸ್ಕರಣೆ ಮತ್ತು ಮಾರಟದ ಮೇಲೆ ತಮ್ಮ ಹಿಡಿತ ಸಾಧಿ ಸಿ ಬಂಡಾವಾಳಶಾಹಿ, ಸಾಮ್ರಾಜ್ಯಶಾಹಿ ವ್ಯವಸ್ಥೆಯ ಕೈಗೆ ಸಿಲಕುಲಿದೆ.
ಬಂಡಾವಾಳಶಾಹಿ ಹಿತಾಸಕ್ತಿ ಕಾಪಾಡುವ ಸರಕಾರಗಳ ರೈತ ವಿರೋ ನೀತಿ, ಹುನ್ನಾರ ಅರಿಯಬೇಕು. ಕೇವಲ ಪಕ್ಷಗಳ ಬದಲಾವಣೆ ನಾಟಕವಾಗಿರುವ ಚುನಾವಣೆಗಳಲ್ಲಿ ಪರಿಹಾರ ಹುಡುಕದೇ ಎಪಿಎಂಸಿ ಕಾಯ್ದೆ ತಿದ್ದುಪಡಿ ಒಳಗೊಂಡು ರೈತ ವಿರೋಧಿನೀತಿ ವಿರುದ್ಧ ಬಲಿಷ್ಠ ಹೋರಾಟ ಕಟ್ಟುವ ಸವಾಲು ರೈತ ಸಮುದಾಯದ ಮುಂದಿದೆ ಎಂದರು. ಸಂಘಟನೆಯ ಧಾರವಾಡ ಜಿಲ್ಲಾಧ್ಯಕ್ಷ ಲಕ್ಷ್ಮಣ ಜಡಗನ್ನವರ ಪ್ರಾಸ್ತಾವಿಕ ಮಾತನಾಡಿದರು.