Advertisement

ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ ಮುಂದು ; ಪರೀಕ್ಷೆ ಪ್ರಮಾಣದಲ್ಲಿ ದ್ವಿತೀಯ ಸ್ಥಾನ

11:10 AM Apr 18, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ವೈರಸ್ ವಿರುದ್ಧದ ಸಮರದಲ್ಲಿ ಭಾರತ ಕೈಗೊಂಡಿರುವ ಕ್ರಮಗಳು ವಿಶ್ವದಲ್ಲೇ ಅತ್ಯಂತ ಪರಿಣಾಮಕಾರಿ ಎಂಬ ಹೆಗ್ಗಳಿಕೆ ಪಡೆದಿರುವುದರ ಜೊತೆಗೆ, ಕಟ್ಟುನಿಟ್ಟಿನ ಕ್ರಮಗಳು ಹೀಗೇ ಮುಂದುವರಿದರೆ ಆದಷ್ಟು ಬೇಗನೆ ಕೋವಿಡ್ 19 ವೈರಸ್ ಪಿಡುಗು ದೇಶದಿಂದ ತೊಲಗುವ ಆತ್ಮವಿಶ್ವಾಸವನ್ನು ಸರಕಾರಕ್ಕೆ ತಂದುಕೊಟ್ಟಿವೆ.

Advertisement

ಪರೀಕ್ಷೆಗೊಳಗಾದವರ ಸಂಖ್ಯೆ: ಭಾರತದಲ್ಲಿ 10,000 ಸೋಂಕಿತರು ಪತ್ತೆಯಾಗುವಷ್ಟರಲ್ಲಿ 2.17 ಲಕ್ಷ ಜನರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈ ರೋಗ ಅಗ್ರವಾಗಿ ಕಾಡುತ್ತಿರುವ ಅಮೆರಿಕ, ಯು.ಕೆ.ಗಳಲ್ಲಿ 10,000 ಸೋಂಕಿತರು ಪತ್ತೆಯಾಗುವಷ್ಟರಲ್ಲಿ ಕ್ರಮವಾಗಿ 1.39 ಲಕ್ಷ ಹಾಗೂ 1.13 ಲಕ್ಷ ಮಂದಿಯನ್ನು ಪರೀಕ್ಷೆ ಮಾಡಲಾಗಿತ್ತು.

ಇನ್ನು, ಇಟಲಿಯಲ್ಲಿ 73,000 ಜನರನ್ನು ಪರೀಕ್ಷೆ ಮಾಡಲಾಗಿತ್ತು. ಕೆನಡಾದಲ್ಲಿ ಮಾತ್ರ 2.95 ಲಕ್ಷ ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು.

ಪ್ರತಿ 10 ಲಕ್ಷ ಜನರಲ್ಲಿ ಸೋಂಕಿತರ ಲೆಕ್ಕ: ಭಾರತದಲ್ಲಿ ಪ್ರತಿ 10 ಲಕ್ಷ ಜನರಲ್ಲಿ 9 ಜನರು ಸೋಂಕಿತರಾಗಿದ್ದಾರೆ. ಇದೇ ಪ್ರಮಾಣ ಅಮೆರಿಕದಲ್ಲಿ 1,946, ಸ್ಪೇನ್‌ನಲ್ಲಿ 3,864, ಇಟಲಿಯಲ್ಲಿ 2,732, ಫ್ರಾನ್ಸ್‌ನಲ್ಲಿ 2,265 ಹಾಗೂ ಯು.ಕೆ. 1,451ರಷ್ಟಿದೆ. ಜಪಾನ್‌ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚೇನಿಲ್ಲ ಎನ್ನುವಂತಿದ್ದರೂ ಪ್ರತಿ 10 ಲಕ್ಷಕ್ಕೆ 68 ಸೋಂಕಿತರು ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next