Advertisement

ರೈತ ವಿರೋಧಿ ಕಾಯ್ದೆಗಳ ವಿರುದ್ಧ ಹೋರಾಟ

05:10 AM Jun 23, 2020 | Lakshmi GovindaRaj |

ಮೈಸೂರು: ರೈತರಿಗೆ ಮರಣ ಶಾಸನವಾಗಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಜೂ.23ರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್‌ ಚಳವಳಿ ನಡೆಸಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ  ರಾಜ್ಯ ರೈತ ವಿರೋಧಿ ಕಾಯ್ದೆ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಕುರುಬೂರು ಶಾಂತಕುಮಾರ್‌ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರಿಗೆ ಮಾರಕವಾದ ಭೂ ಸುಧಾರಣೆ ಕಾಯ್ದೆ ಹಾಗೂ  ಎಪಿಎಂಸಿ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ.

Advertisement

ವಿದ್ಯುತ್‌ ಖಾಸಗೀಕರಣ ಮಾಡುವ ಮೂಲಕ ಪಂಪ್‌ ಸೆಟ್‌ ಗಳಿಗೆ ಉಚಿತ ವಿದ್ಯುತ್‌ ನಿಲ್ಲಿಸಲು ಕಾಯ್ದೆ ತಿದ್ದುಪಡಿ ಮಾಡುತ್ತಿದೆ. ರೈತರಿಗೆ ಮಾರಕ ಕಾಯ್ದೆಗಳ ವಿರುದದ್ಧ ಹೋರಾಡಲು ರಾಜ್ಯ  ರೈತ ವಿರೋಧಿ ಕಾಯ್ದೆ ಹೋರಾಟ ಸಮಿತಿ ರಚಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಸಮಿತಿಯ ಹೊನ್ನೂರು ಪ್ರಕಾಶ್‌, ಡಾ.ಗುರುಪ್ರಸಾದ್‌, ವಿದ್ಯಾಸಾಗರ್‌, ಹತ್ತಳ್ಳಿ ದೇವರಾಜ್‌, ಹಳ್ಳಿಕೆರೆ ಹುಂಡಿ ಭಾಗ್ಯರಾಜ್‌, ಮಂಜೇಶ್‌ಗೌಡ,  ಸುಧೀರ್‌ ಕುಮಾರ್‌, ಹೆಮ್ಮಿಗೆ ಚಂದ್ರಶೇಖರ್‌ ಉಪಸ್ಥಿತರಿದ್ದರು.

ಬಾರ್‌ಕೋಲ್‌ ಚಳವಳಿ: ಜೂ.24ರಂದು ರಾಜ್ಯದ ಎಲ್ಲಾ ಶಾಸಕರ ಮನೆ ಅಥವಾ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು. 29ರಂದು ರೈತರ ಬೃಹತ್‌ ಪ್ರತಿಭಟನೆ ಸಾಗಿ, ವಿಭಾಗಾಧಿಕಾರಿ ಕಚೇರಿ ಮುಂದೆ ಬಾರ್‌ಕೋಲ್‌ ಚಳವಳಿ ಮೂಲಕ ಮುತ್ತಿಗೆ ಹಾಕಲಾಗುವುದು. ಬಳಿಕ ರಾಜ್ಯ ರೈತ ಮುಖಂಡರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಶಾಂತಕುಮಾರ್‌ ತಿಳಿಸಿದರು.

ದಿಕ್ಕು ತಪ್ಪಿಸುವ ಯತ್ನ: ರೈತ ಹೋರಾಟವನ್ನು ದಿಕ್ಕು ತಪ್ಪಿಸಲು ರಾಜ್ಯ ಸರ್ಕಾರ ಯತ್ನಿಸುತ್ತಿದೆ. ಬಗರ್‌ ಹುಕುಂ ಸಾಗುವಳಿ ಅಕ್ರಮ ಸಕ್ರಮ ಮಾಡುವುದಾಗಿ ಕಂದಾಯ ಸಚಿವರು ಹೇಳುತ್ತಲೇ ರೈತರ ದಿಕ್ಕು ತಪ್ಪಿಸುವ ಕೆಲಸ  ಮಾಡುತ್ತಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ಸರ್ಕಾರ ರೈತ ಶಕ್ತಿ ಕುಗ್ಗಿಸಲು ಇಂತಹ ಶಾಸನಗಳನ್ನು ಜಾರಿಗೆ ತರುತ್ತಿದೆ. ರೈತರು ಎಚ್ಚೆತ್ತುಕೊಂಡು ಹೋರಾಟಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next