Advertisement
24ನೇ ರ್‍ಯಾಂಕಿಂಗ್ ಹೊಂದಿರುವ ಜಪಾನ್, 11ನೇ ಶ್ರೇಯಾಂಕದ ಬಲಿಷ್ಠ ಜರ್ಮನಿಯನ್ನು 2-1 ಗೋಲುಗಳಿಂದ ಮಣಿಸಿದೆ. ನಾಲ್ಕು ಬಾರಿ ವಿಶ್ವಕಪ್ ಗೆದ್ದಿರುವ ಜರ್ಮನಿಗೆ, ಒಮ್ಮೆಯೂ ಕಪ್ ಗೆಲ್ಲದ ಜಪಾನ್ ಈ ಪರಿಯ ಹೊಡೆತ ನೀಡಿದ್ದು ಅಚ್ಚರಿಯೆಂದು ಹೇಳಬಹುದು.
Related Articles
Advertisement
ಮಿನಾಮಿನೊ ಬಳಿಯಿಂದ ಚೆಂಡು ಪಡೆದ ಮಿತೊಮ ಅದನ್ನು ತಳ್ಳಿಕೊಂಡು ವೇಗವಾಗಿ ಮುನ್ನುಗ್ಗಿದರು. ಅವರು ಜೋರಾಗಿ ಒದ್ದ ಚೆಂಡು ಜರ್ಮನಿಯ ಖ್ಯಾತ ಆಟಗಾರ ನೀಯರ್ ಮುಖವನ್ನೇ ದಾಟಿಕೊಂಡು ಮುನ್ನುಗ್ಗಿತು. ಆ ಹಂತದಲ್ಲಿ ನುಗ್ಗಿ ಬಂದ ಜಪಾನೀ ಸ್ಟ್ರೈಕರ್ ರಿತ್ಸು ಡೋನ್ ನೋಡನೋಡುವಷ್ಟರಲ್ಲಿ ಜರ್ಮನಿಯ ಗೋಲುಪೆಟ್ಟಿಗೆಯೊಳಕ್ಕೆ ಚೆಂಡನ್ನು ನುಗ್ಗಿಸಿದ್ದರು. ಅಲ್ಲಿಗೆ 1-1 ಗೋಲುಗಳಿಂದ ಪಂದ್ಯ ಸಮವಾಯಿತು.ಈ ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದ ಜರ್ಮನಿಗೆ ಇನ್ನೊಂದು ಆಘಾತ ಸದ್ಯದಲ್ಲೇ ಇದೆ ಎಂಬ ಸುಳಿವೂ ಇರಲಿಲ್ಲ. ಅದು ಸಂಭವಿಸಿದ್ದು 83ನೇ ನಿಮಿಷದಲ್ಲಿ. ಜಪಾನ್ ಆಟಗಾರರು ಒಂದು ಫ್ರೀಕಿಕ್ ಅವಕಾಶ ಪಡೆದರು. ತಮ್ಮದೇ ಅಂಕಣದಿಂದ ಇತಕುರ ಜೋರಾಗಿ ಚೆಂಡನ್ನು ಒದ್ದರು. ಅದನ್ನು ಇನ್ನೊಬ್ಬ ಜಪಾನೀ ಸ್ಟ್ರೈಕರ್ ಟಕುಮ ಅಸಾನೊ ಪಡೆದುಕೊಂಡು ಲೀಲಾಜಾಲವಾಗಿ ಜರ್ಮನಿಯ ನೀಯರ್‌ರನ್ನು ದಾಟಿ ಮುನ್ನಡೆದರು. ಅವರ ಜೋರಾದ ಹೊಡೆತ ಜರ್ಮನಿಯ ಕೋಟೆಯನ್ನು ಇನ್ನೊಮ್ಮೆ ಭೇದಿಸಿತು. ಜರ್ಮನಿ ಆಟಗಾರರು ಹತಾಶೆಗೊಂಡರು. ಅಷ್ಟರಲ್ಲಾಗಲೇ ಜಪಾನ್ ಗೆಲುವಿನ ಸ್ಪಷ್ಟ ನಂಬಿಕೆಯನ್ನು ಪಡೆದಾಗಿತ್ತು. ಇನ್ನುಳಿದಂತೆ ಜಪಾನ್ ಮಾಡಬೇಕಾಗಿದ್ದು ಬಾಕಿ ಸಮಯದಲ್ಲಿ ಚೆಂಡನ್ನು ಜರ್ಮನಿಯ ಕೈಗೆ ಸಿಗದಂತೆ ತಡೆಯುವ ಅಥವಾ ಸಮಯ ವ್ಯರ್ಥ ಮಾಡುವ ಕೆಲಸವನ್ನು ಮಾತ್ರ. ಅದರಲ್ಲಿ ಅದಕ್ಕೆ ಯಶಸ್ಸು ಸಿಕ್ಕಿತು ಎನ್ನುವುದನ್ನು ಮರೆಯುವಂತಿಲ್ಲ.