ಮಾಸ್ಕೊ: ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಫುಟ್‌ಬಾಲ್ ಕೂಟದ ಲೈವ್ ವರದಿ ನೀಡುತ್ತಿದ್ದ ಕೊಲಂಬಿಯಾದ ಪತ್ರಕರ್ತೆಯೊಬ್ಬರಿಗೆ ಫುಟ್‌ಬಾಲ್ ಅಭಿಮಾನಿಯೊಬ್ಬ ಏಕಾಏಕಿ ಮುತ್ತಿಕ್ಕಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ.
ಜರ್ಮನ್‌ನ ಸುದ್ದಿ ಚಾನೆಲ್‌ಗೆ ವರದಿ ಮಾಡುತ್ತಿದ್ದ ವೇಳೆ ಫ್ರೇಮ್‌ಗೆ ಏಕಾಏಕಿ ಬಂದ ವ್ಯಕ್ತಿ ಪತ್ರಕರ್ತೆ ಜುಲಿಯೆತ್ ಗೊಂಝಾಲೆಜ್ ಎದೆ ಭಾಗದ ಮೇಲೆ ಕೈಯಿಟ್ಟು ಕೆನ್ನೆಗೆ ಮುತ್ತಿಕ್ಕಿ ಪರಾರಿಯಾಗಿದ್ದಾನೆ.
ವ್ಯಕ್ತಿಯ ಹೇಯ ವರ್ತನೆಯ ನಡುವೆಯೂ ಕರ್ತವ್ಯ ಪ್ರಜ್ಞೆ ಮೆರೆದ ಪತ್ರಕರ್ತೆ ವಿಚಲಿತರಾಗದೆ ವರದಿ ಮುಂದುವರಿಸಿದ್ದಾರೆ. ವರದಿ ಮುಗಿದ ಬಳಿಕ ಕಾಮುಕನಿಗಾಗಿ ಹುಡುಕಾಡಿದ್ದು ಆತನನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಈ ಘಟನೆ ವಿರುದ್ಧ ವಿಶ್ವಾದ್ಯಂತ ಪತ್ರಕರ್ತರು ಮತ್ತು ಕ್ರೀಡಾ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕೀಳು ಮಟ್ಟದ ವರ್ತನೆ ತೋರಿದ ವ್ಯಕ್ತಿ ಸ್ಥಳೀಯನೋ,ವಿದೇಶಿಗನೋ ಎನ್ನುವುದು ತಿಳಿದು ಬಂದಿಲ್ಲ. ಯಾವ ಕಾರಣಕ್ಕಾಗಿ ಹೀಗೆ ಮಾಡಿದ, ಯಾವ ತಂಡದ ಅಭಿಮಾನಿ ಎನ್ನುವುದೂ ತಿಳಿದು ಬಂದಿಲ್ಲ.