Advertisement

ಫಿಫಾ ವನಿತಾ ವಿಶ್ವಕಪ್‌-2023ರ ದಿನಾಂಕ ಪ್ರಕಟ :ಭಾರತದಲ್ಲಿ ನಡೆಯಲಿದೆ ಅಂಡರ್‌-17 ವಿಶ್ವಕಪ್‌

11:46 PM May 21, 2021 | Team Udayavani |

ಜ್ಯೂರಿಚ್‌ (ಸ್ವಿಜರ್‌ಲ್ಯಾಂಡ್‌) : ಭಾರತದಲ್ಲಿ ನಡೆಯಲಿರುವ ಫಿಫಾ ಅಂಡರ್‌- 17 ವನಿತಾ ವಿಶ್ವಕಪ್‌ ಹಾಗೂ ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ಜಂಟಿ ಆತಿಥ್ಯದಲ್ಲಿ ಸಾಗುವ ವನಿತಾ ಸೀನಿಯರ್‌ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯ ದಿನಾಂಕವನ್ನು ಫಿಫಾ ಪ್ರಕಟಿಸಿದೆ. ಅಂಡರ್‌-17 ವಿಶ್ವಕಪ್‌ 2022ರ ಅಕ್ಟೋಬರ್‌ 10ರಿಂದ 30ರ ತನಕ; ಸೀನಿಯರ್‌ ವಿಶ್ವಕಪ್‌ 2023ರ ಜುಲೈ 20ರಿಂದ ಆಗಸ್ಟ್‌ 20ರ ತನಕ ಸಾಗಲಿದೆ.

Advertisement

ಅಂಡರ್‌-20 ವಿಶ್ವಕಪ್‌ ಆತಿಥ್ಯ ಕೋಸ್ಟಾರಿಕಾಗೆ ಒಲಿದಿದೆ. ಇದು 2022ರ ಆಗಸ್ಟ್‌ 10ರಿಂದ 28ರ ತನಕ ನಡೆಯಲಿದೆ.

ಆಕ್ಲೆಂಡ್‌ನ‌ಲ್ಲಿ ಉದ್ಘಾಟನೆ
ಆಕ್ಲೆಂಡ್‌ನ‌ “ಈಡನ್‌ ಪಾರ್ಕ್‌ ಸ್ಟೇಡಿಯಂ’ನಲ್ಲಿ ವಿಶ್ವಕಪ್‌ ಉದ್ಘಾ ಟನಾ ಪಂದ್ಯ ನಡೆಯಲಿದ್ದು, ಫೈನಲ್‌ ಆತಿಥ್ಯ ಸಿಡ್ನಿ ಸ್ಟೇಡಿಯಂ ಪಾಲಾಗಿದೆ. ಒಟ್ಟು 9 ಕೇಂದ್ರಗಳಲ್ಲಿ ಪಂದ್ಯಗಳು ಸಾಗಲಿವೆ. ಇವುಗಳೆಂದರೆ ಆಸ್ಟ್ರೇಲಿ ಯದ ಮೆಲ್ಬರ್ನ್, ಬ್ರಿಸ್ಬೇನ್‌, ಅಡಿಲೇಡ್‌, ಪರ್ತ್‌ ಮತ್ತು ಸಿಡ್ನಿ; ನ್ಯೂಜಿಲ್ಯಾಂಡಿನ ಡ್ಯುನೆಡಿನ್‌, ಹ್ಯಾಮಿಲ್ಟನ್‌, ವೆಲ್ಲಿಂಗ್ಟನ್‌ ಮತ್ತು ಆಕ್ಲೆಂಡ್‌. ಎರಡೂ ದೇಶಗಳು ಒಂದೊಂದು ಸೆಮಿಫೈನಲ್‌ ಪಂದ್ಯವನ್ನು ಆಯೋಜಿಸಲಿವೆ.

ಮೊದಲ ಸಲ 32 ತಂಡಗಳು ಪಾಲ್ಗೊಳ್ಳುತ್ತಿರುವುದು ಈ ಪಂದ್ಯಾವಳಿಯ ವಿಶೇಷ. ಇಲ್ಲಿಯ ತನಕ 24 ತಂಡಗಳ ನಡುವೆ ಸ್ಪರ್ಧೆ ಏರ್ಪಡುತ್ತಿತ್ತು.

ಕೊರೊನಾದಿಂದ ರದ್ದು
ಅಂಡರ್‌-17 ವಿಶ್ವಕಪ್‌ ಫ‌ುಟ್‌ಬಾಲ್‌ ಇದೇ ವರ್ಷ ಭಾರತದಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್‌ ಕಾರಣದಿಂದ ಇದನ್ನು ರದ್ದುಗೊಳಿಸಲಾಯಿತು. ಇದಕ್ಕೂ ಮೊದಲು 2017ರಲ್ಲಿ ಭಾರತ ಈ ಕೂಟವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿತ್ತು. ದೇಶದ 6 ತಾಣಗಳಲ್ಲಿ ನಡೆದ ಮುಖಾಮುಖೀಯಲ್ಲಿ ಇಂಗ್ಲೆಂಡ್‌ ಚಾಂಪಿಯನ್‌ ಆಗಿ ಮೂಡಿಬಂದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next