Advertisement

ಫಿಫಾ ಅಂಡರ್‌ 17 ವಿಶ್ವಕಪ್‌: ಘಾನಾ –ಅಮೆರಿಕ

06:25 AM Oct 09, 2017 | Team Udayavani |

ಹೊಸದಿಲ್ಲಿ: ಸೋಮವಾರ ನಡೆಯುವ “ಎ’ ಬಣದ ಮೊದಲ ಪಂದ್ಯದಲ್ಲಿ ಘಾನಾ ತಂಡವು ಅಮೆರಿಕ ತಂಡವನ್ನು ಎದರಿಸಲಿದೆ. ತಮ್ಮ ಮೊದಲ ಪಂದ್ಯಗಳಲ್ಲಿ ಅನುಕ್ರಮವಾಗಿ ಕೊಲಂಬಿಯ (1 0) ಮತ್ತು ಭಾರತ (3 0) ವಿರುದ್ಧ ಗೆದ್ದಿರುವ ಘಾನಾ ಮತ್ತು ಅಮೆರಿಕ ಇನ್ನೊಂದು ಗೆಲುವಿಗಾಗಿ ಪ್ರಬಲ ಹೋರಾಟ ನೀಡುವ ಸಾಧ್ಯತೆಯಿದೆ. ಗೆದ್ದ ತಂಡ ಅಂತಿಮ 16ರ ಸುತ್ತಿಗೇರುವುದು ಖಚಿತವಾಗಲಿದೆ.

Advertisement

ಒಂದು ವೇಳೆ ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೆ ಎರಡೂ ತಂಡಕ್ಕೆ ಮುನ್ನಡೆಯುವ ಅವಕಾಶವಿದೆ. ಯಾಕೆಂದರೆ ಪ್ರತಿ ಬಣದ ಅಗ್ರ ಎರಡು ತಂಡಗಳು ಮತ್ತು ಎಲ್ಲ ಬಣಗಳಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ ನಾಲ್ಕು ಮೂರನೇ ಸ್ಥಾನಿ ತಂಡಗಳು ಮುಂದಿನ ಸುತ್ತಿಗೇರಲಿದೆ.

ಅಮೆರಿಕ ಆತಿಥೇಯ ಭಾರತವನ್ನು ಸುಲಭವಾಗಿ ಮಣಿಸಿದ್ದರೆ ಘಾನಾ ತಂಡವು ಕೊಲಂಬಿಯಾದ ಕಠಿನ ಸವಾಲನ್ನು ಎದುರಿಸಿತ್ತು. ಮೊದಲ ಅವಧಿಯಲ್ಲಿ ಕೊಲಂಬಿಯವೇ ಮೇಲುಗೈ ಸಾಧಿಸಿತ್ತು. ಆದರೆ ಮುನ್ನಡೆ ಪಡೆದ ಘಾನಾ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಯಶಸ್ವಿಯಾಗಿತ್ತು. 39ನೇ ನಿಮಿಷದಲ್ಲಿ ಸಾದಿಕ್‌ ಇಬ್ರಾಹಿಂ ಗೆಲುವಿನ ಗೋಲು ಹೊಡೆದಿದ್ದರು.

ಘಾನಾ ಮತ್ತು ಅಮೆರಿಕ ಈ ಹಿಂದೆ ಎರಡು ಬಾರಿ ಪರಸ್ಪರ ಮುಖಾಮುಖೀಯಾಗಿದ್ದವು. ಎರಡೂ ಬಾರಿಯೂ (1995 ಕ್ವಿಟೊ ಮತ್ತು 1999 ಆಕ್ಲಂಡ್‌)  ಘಾನಾ ಗೆಲುವು ದಾಖಲಿಸಿತ್ತು. ಎರಡು ಬಾರಿಯ ಅಂಡರ್‌ 17 ವಿಶ್ವಕಪ್‌ ವಿಜೇತ ಘಾನಾ ತಂಡವು 22 ವರ್ಷಗಳ ಟ್ರೋಫಿ ಬರವನ್ನು ನೀಗಿಸಲು ಎದುರು ನೋಡುತ್ತಿದೆ. ಘಾನಾ ಈ ಹಿಂದೆ 1991 ಮತ್ತು 1995ರಲ್ಲಿ ಈ ಪ್ರಶಸ್ತಿ ಜಯಿಸಿತ್ತು ದ್ವಿತೀಯ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ನಾವು ಮುಂದಿನ ಸುತ್ತಿಗೇರಲು ಬಯಸಿದ್ದೇವೆ. ಹಾಗಾಗಿ ಗೆಲುವಿನೊಂದಿಗೆ ಮೂರಂಕ ಪಡೆದು ಮುಂದಿನ ಹಂತಕ್ಕೇರುವುದನ್ನು ಖಚಿತಪಡಿಸುವುದೇ ನಮ್ಮ ಗುರಿಯಾಗಿದೆ ಎಂದು ಘಾನಾ ಕೋಚ್‌ ಪಾ ಕ್ವೇಸಿ ಫಾಬಿನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next