ಬಾಕು (ಅಜರ್ ಬೈಜಾನ್): ಚಂದ್ರಯಾನ-3 ರೊಂದಿಗೆ ಇಡೀ ಭಾರತವೇ ಕುತೂಹಲದೊಂದಿಗೆ ಕಾಯುತ್ತಿರುವ ಫಿಡೆ ವಿಶ್ವಕಪ್ ಚೆಸ್ ಫೈನಲ್ ನ ಎರಡನೇ ಪಂದ್ಯವೂ ಡ್ರಾನಲ್ಲಿ ಅಂತ್ಯವಾಗಿದೆ. ಭಾರತದ ಆರ್. ಪ್ರಜ್ಞಾನಂದ ಮತ್ತು ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲಸನ್ ಗುರುವಾರ ಅಂತಿಮ ಟೈ ಬ್ರೇಕರ್ ಆಡಲಿದ್ದಾರೆ.
ಒಂದು ಗಂಟೆಗೂ ಹೆಚ್ಚು ಕಾಲ ನಡೆದ ತೀವ್ರ ಪೈಪೋಟಿಯ ನಂತರ, ಆರ್.ಪ್ರಜ್ಞಾನಂದ ಮತ್ತು ಮ್ಯಾಗ್ನಸ್ ಕಾರ್ಲಸನ್ ಚೆಸ್ ವಿಶ್ವಕಪ್ ಫೈನಲ್ ನ ಎರಡನೇ ಪಂದ್ಯವನ್ನು ಡ್ರಾ ಮಾಡಲು ನಿರ್ಧರಿಸಿದರು.
ಆರಂಭಿಕ ನಡೆಗಳಿಂದ, ಗುರುವಾರ ಪಂದ್ಯವನ್ನು ಟೈ ಬ್ರೇಕರ್‌ಗಳಿಗೆ ಕೊಂಡೊಯ್ಯಲು ಕಾರ್ಲ್‌ಸನ್ ಡ್ರಾಗಾಗಿ ಆಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿತ್ತು.
ಇದನ್ನೂ ಓದಿ:Chandrayaan 3: ಇಸ್ರೋ ಛಲಕ್ಕೆ ಚಂದ್ರ ಬಲಂ; ಭಾರತಕ್ಕೆ ಐತಿಹಾಸಿಕ ಯಶಸ್ಸು
ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಬಿಳಿ ಕಾಯಿಯೊಂದಿಗೆ ಆಡಿದ್ದ ಆರ್.ಪ್ರಜ್ಞಾನಂದ ಇಂದು ಕಪ್ಪು ಕಾಯಿಗಳೊಂದಿಗೆ ಆಡಿದರು. ಇಬ್ಬರೂ ಗ್ರ್ಯಾಂಡ್ ಮಾಸ್ಟರ್ ಗಳು ತಮ್ಮ ಚೊಚ್ಚಲ ವಿಶ್ವಕಪ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.