Advertisement
ಮೊದಲೇ ಚಂದನ ಶೆಟ್ಟಿ ಕಾರ್ಯಕ್ರಮ ನಿಗದಿಯಾಗದಿದ್ದರೂ, ನಿಗದಿತ ಕಾರ್ಯಕ್ರಮ ಪಟ್ಟಿಯಂತೆ ಅಂತಾರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಡ್ಯಾನ್ಸ್ ಮಸ್ತಿ-2018 ಹಾಗೂ ಇತರ ಕಾರ್ಯಕ್ರಮ ಜೊತೆಯಲ್ಲಿ ಬಿಗ್‌ಬಾಸ್ ವಿಜೇತ ಚಂದನ್ ಶೆಟ್ಟಿಯವರ ಪ್ರದರ್ಶನ ಜೋಡಿಸುವಲ್ಲಿ ಕೊನೆಯಕ್ಷಣದಲ್ಲಿ ಕುಮಟಾ ಉತ್ಸವ ಸಮಿತಿ ಯಶಸ್ವಿಯಾಗಿದ್ದು ವ್ಯರ್ಥವಾಗಲಿಲ್ಲ. ಕುಮಟಾ ಉತ್ಸವಕ್ಕೆ ಚಂದನ ಶೆಟ್ಟಿ ಬರುತ್ತಾರೆಂದು ಎರಡು ದಿನ ಮುಂಚೆ ಪ್ರಚಾರ ಪಡೆಯುತ್ತಿದ್ದಂತೆಯೇ ಉತ್ಸವದ ಕಾರ್ಯಕ್ರಮಗಳಿಗೆ ಹೊಸರಂಗು ಬಂದಿತ್ತು. ಡ್ಯಾನ್ಸ್ ಮಸ್ತಿ ಕಾರ್ಯಕ್ರಮಗಳ ತರಾವರಿ ನೃತ್ಯ ಪ್ರದರ್ಶನದ ನಡುವೆ ರ್ಯಾಪರ್ ಚಂದನ್ ಶೆಟ್ಟಿ , ಚಿನ್ನಾರಿ ಮುತ್ತ ಖ್ಯಾತಿಯ ನಟ ವಿಜಯ ರಾಘವೇಂದ್ರ, ಮುಗುಳುನಗೆ ಚಲನಚಿತ್ರದ ನಟಿ ನಿಖೀತಾ, ತುಳು ನಟ ನಾಗರಾಜ ಹಂಬರ್, ಶ್ರೇಯಾ ಅಂಚನ್ ಮುಂತಾದವರ ಜೊತೆ ಹಾಡಿ ಕುಣಿದರು.