Advertisement
ಎರಡು ದಿನ ಕಾಲ ಕಾರಂಜಿ ಕೆರೆ ಹಬ್ಬ: ಕಳೆದ ಬಾರಿ ನೀರಿಲ್ಲದೇ ಸಂಪೂರ್ಣ ಬತ್ತಿ ಹೋಗಿದ್ದ ಕೆರೆಗೆ ಚಾಮುಂಡಿ ಬೆಟ್ಟದಿಂದ ಮಳೆ ನೀರು ಕಾರಂಜಿ ಕೆರೆಗೆ ಸೇರುವ ವ್ಯವಸ್ಥೆ ಮಾಡಲಾಗಿತ್ತು. ನಂತರ ಉತ್ತಮ ಮಳೆಯಾದ್ದರಿಂದ ಕೆರೆ ತುಂಬಿತ್ತು. ಈ ಹಿನ್ನೆಲೆ ಪರಿಸರ ಸಂರಕ್ಷಣೆಗೆ ಕೆರೆಯ ಪಾತ್ರವೇನು?, ಅದನ್ನು ರಕ್ಷಿಸುವ ಮತ್ತು ಮಹತ್ವ ತಿಳಿಸುವ ಉದ್ದೇಶದಿಂದ ಮೈಸೂರು ಚಾಮರಾಜೇಂದ್ರ ಮೃಗಾಲಯ ಮತ್ತು ಕರ್ನಾಟಕ ಮೃಗಾಲಯ ಪ್ರಾಧಿಕಾರ ಎರಡು ದಿನಗಳ ಕಾಲ ಕಾರಂಜಿ ಕೆರೆ ಹಬ್ಬ ಆಯೋಜಿಸಿದೆ.
Related Articles
Advertisement
ಮಾನವ ಕೇಂದ್ರಿತ ಅಭಿವೃದ್ಧಿ ಪರಿಸರಕ್ಕೆ ಮಾರಕ: ಕರ್ನಾಟಕ ಮೃಗಾಲಯ ಪ್ರಾಧಿಕಾರ ಸದಸ್ಯಕಾರ್ಯದರ್ಶಿ ಬಿ.ಪಿ.ರವಿ ಮಾತನಾಡಿ, ಪರಿಸರ ಸಂರಕ್ಷಣೆಗೆ ಕೆರೆ ಸಂರಕ್ಷಣೆ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಮುನುಷ್ಯ ಸುಸ್ಥಿರ ಅಭಿವೃದ್ಧಿ ಬಿಟ್ಟು ಮಾನವ ಕೇಂದ್ರಿತ ಅಭಿವೃದ್ಧಿಯತ್ತ ಒಲವು ತೋರುತಿದ್ದಾನೆ. ಇದು ಪರಿಸರಕ್ಕೆ ಮಾರಕವಾಗಲಿದೆ ಎಂದರು.
ಕೆರೆಗಳನ್ನು ಸಂರಕ್ಷಣೆ ಮಾಡಿ: ಪ್ರತಿನಿತ್ಯ ದೂರದ ಬೆಂಗಳೂರಿಗೆ ಕುಡಿಯುವ ನೀರನ್ನು ಪಂಪ್ ಮಾಡಿ, ಪ್ರಕೃತಿ ವಿರುದ್ಧವಾಗಿ ಸಾಗಣೆ ಮಾಡುತ್ತಿದ್ದೇವೆ. ಅಷ್ಟು ದೂರ ನೀರನ್ನು ಪಂಪ್ ಮಾಡಲು ಎಷ್ಟು ವಿದ್ಯುತ್ ಬೇಕು. ಎಷ್ಟು ವರ್ಷ ಹೀಗೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು, ಇದು ಪ್ರಕೃತಿಗೆ ವಿರುದ್ಧ ಪ್ರಕ್ರಿಯೆ. ನಾವು ದೇಶದಲ್ಲಿ ಕೆರೆಗಳನ್ನು ಸಂರಕ್ಷಣೆ ಮಾಡಿದ್ದರೆ, ಅಂತರ್ಜಲ ಮಟ್ಟದ ಹೆಚ್ಚಿಸಿಕೊಳ್ಳಬಹುದಾಗಿತ್ತು. ಈಗ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದಿದೆ ಎಂದರು.
ನಾಗರಹೊಳೆ ಮತ್ತು ಬಂಡೀಪುರದಲ್ಲಿ ರಸ್ತೆ ಮಾಡಬೇಕೆಂಬ ಪ್ರಸ್ತಾಪ ಮುನ್ನಲೆಗೆ ಬಂದಿತು. ಆದರೆ ಇಲ್ಲಿ ರಸ್ತೆ ಅಭಿವೃದ್ಧಿಗೊಳಿಸಿದರೆ, ಅಲ್ಲಿನ ಏಷ್ಯಾದ ಆನೆ, ಹುಲಿ ಹಾಗೂ ಜೀವ ಸಂಕುಲದ ಕಥೆಯೇನು ಎಂದು ಪ್ರಶ್ನಿಸಿ ಇವೆಲ್ಲವೂ ಮಾನವ ಕೇಂದ್ರಿತ ಚಟುವಟಿಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
48 ಲಕ್ಷ ಮಂದಿ ಪ್ರವಾಸಿಗ ಭೇಟಿ: ಅಜಿತ್ ಕುಲಕರ್ಣಿ ಮಾತನಾಡಿ, 2004ರಲ್ಲಿ ಕೆರೆಯನ್ನು ಮೃಗಾಲಯ ವ್ಯಾಪ್ತಿಗೆ ತರಲಾಯಿತ. ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕೆರೆ ಉದ್ಘಾಟಿಸಿದರು. ಉಚಿತ ಪ್ರವೇಶದ ಬದಲು ಪ್ರವೇಶ ದರ ನಿಗದಿ ಪಡಿಸಲಾಯಿತು. ಅಂದಿನಿಂದ 48 ಲಕ್ಷ ಪ್ರವಾಸಿಗರು ಕೆರೆಗೆ ಭೇಟಿ ನೀಡಿದ್ದಾರೆ. ಇದರಿಂದ 9 ಕೋಟಿ ರೂ. ಆದಾಯ ಬಂದಿದ್ದು, ಈ ಹಿಂದೆ ಇದಕ್ಕೆ ವಾಕಿಂಗ್ ಪಾತ್ ಇರಲಿಲ್ಲ. ಕೆರೆ ಪುನರ್‌ಜೀವನದ ಅನುದಾನ 1.17 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.