Advertisement
ನನ್ನ ಜೀವನದಲ್ಲಿ ನನಗೆ ಸ್ವಂತ ಅಣ್ಣ ಅಂತ ಯಾರೂ ಇಲ್ಲ. ಆದರೆ ಚಿಕ್ಕ ವಯಸ್ಸಿನಿಂದಲೂ ಯಾರಾದರೂ ಅಣ್ಣ-ತಂಗಿಯನ್ನು ನೋಡುವಾಗ ನನಗೂ ಒಬ್ಬ ಅಣ್ಣ ಇರಬೇಕಿತ್ತು ಎಂದೆನಿಸುತ್ತಿತ್ತು. ಯಾಕೆಂದರೆ ನನಗೆ ಅಣ್ಣ ಅಂದರೆ ಅಷ್ಟು ಇಷ್ಟ. ಮರೆಯಲಾಗದ ಒಂದು ಬಂಧವೇ ಅಣ್ಣ -ತಂಗಿ ಬಾಂಧವ್ಯ. ನನಗೆ ಸ್ವಂತ ಅಣ್ಣ ಇಲ್ಲದಿದ್ದರೂ ಸ್ವಂತ ಅಣ್ಣನಿಗಿಂತ ಹೆಚ್ಚು ಪ್ರೀತಿ ನೀಡುವ ಸಹೋದರರನ್ನು ಆ ದೇವರು ನೀಡಿದ್ದಾನೆ. ಇದು ನನ್ನ ಪುಣ್ಯವೆಂದು ಹೇಳಬಹುದು.
Related Articles
Advertisement
ಅಕ್ಕ ತಂಗಿಯ ನಡುವೆ ಆಗುವ ಜಗಳಕ್ಕಿಂತ ಅಣ್ಣ- ತಂಗಿಯ ನಡುವೆ ಆಗುವ ಜಗಳವೇ ಹೆಚ್ಚು. ಅಣ್ಣ-ತಂಗಿ ಜಗಳವಾದಾಗ ಅಣ್ಣನೇ ಮೊದಲು ಮಾತಾಡಲಿ ಎಂದು ತಂಗಿ. ತಂಗಿಯೇ ಮೊದಲು ಮಾತನಾಡಲಿ ಅಂತ ಅಣ್ಣ ಅನಂತರದಲ್ಲಿ ಇಬ್ಬರು ಸಹ ಒಬ್ಬರನ್ನೊಬ್ಬರು ಬಿಟ್ಟಿರಲಾರದೆ ಜತೆಗೆ ಮಾತನಾಡುವರು.
ಜೀವನದ ದಾರಿಯಲ್ಲಿ ಕಷ್ಟದಲ್ಲಿ ಸುಖದಲ್ಲಿ ಎಲ್ಲ ರೀತಿಯಿಂದಲೂ ಜತೆಯಾಗಿ ನಿಲ್ಲುವಂತಹ ನಮ್ಮ ಅಣ್ಣನವರಿಗೆ ಧನ್ಯವಾದ ತಿಳಿಸಲು ನಮಗೆ ಸಿಗುವಂತಹ ಒಂದು ಅಪರೂಪವಾದ ದಿನವೇ ಈ ರಕ್ಷಾಬಂಧನ. ಆದರೂ ನನಗೆ ನನ್ನ ಜೀವನದಲ್ಲಿ ಸಿಕ್ಕಂತಹ ಅಣ್ಣನವರನ್ನು ಯಾವುದೇ ಸಂದರ್ಭದಲ್ಲೂ ಬಿಟ್ಟುಕೊಡುವುದಿಲ್ಲ. ಪ್ರತಿಯೊಬ್ಬ ಅಣ್ಣನು ತನ್ನ ತಂಗಿಗೆ ಏನಾದರೂ ಆಯಿತೆಂದರೆ ತಡೆಯಲಾಗದ ಒಂದು ಜೀವವೇ ಅಣ್ಣಾ. ಜೀವನದಲ್ಲಿ ಅಣ್ಣನವರನ್ನು ಪಡೆದಂತಹ ಎಲ್ಲ ತಂಗಿಯವರು ಪುಣ್ಯವಂತರೇ.
ಪ್ರತೀಕ್ಷಾ ರಾವ್, ಶಿರ್ಲಾಲ್,
ಎಂ.ಪಿ.ಎಂ. ಕಾಲೇಜು, ಕಾರ್ಕಳ