Advertisement

ಸ್ವರ್ಣವಲ್ಲೀಯಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವ; ಹಲವು ಯತಿಗಳು, ಗಣ್ಯರು ಭಾಗಿ

10:24 PM Feb 17, 2024 | Team Udayavani |

ಶಿರಸಿ: ಸೋಂದಾ ಸ್ವರ್ಣವಲ್ಲೀ‌ ಮಠದಲ್ಲಿ ರವಿವಾರದಿಂದ ಐದು ದಿನಗಳ ಕಾಲ ನಡೆಯಲಿರುವ ಶಿಷ್ಯ ಸ್ವೀಕಾರ ಮಹೋತ್ಸವಕ್ಕೆ ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಿಷ್ಯರು, ಭಕ್ತರು ಕರ ಸೇವಕರಾಗಿ ಇದನ್ನು‌ ಮಹೋತ್ಸವವಾಗಿಸಲು ಅವಿರತವಾಗಿ‌ ಕೆಲಸ‌ ಮಾಡುತ್ತಿದ್ದಾರೆ.

Advertisement

ಸ್ವರ್ಣವಲ್ಲೀ‌ಯಲ್ಲಿ ಶನಿವಾರ ಫೆ.18ರಿಂದ 22 ರ ತನಕ ನಡೆಯಲಿರುವ ಶಿಷ್ಯ ಸ್ವೀಕಾರ ಮಹೋತ್ಸವಕ್ಕೆ ಸಾವಿರಾರು ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ವೈದಿಕ, ಊಟಪಚಾರ, ವೇದಿಕೆ ಸೇರಿದಂತೆ ಒಟ್ಟೂ ಹನ್ನೊಂದು ಸಮಿತಿಯ ಮೂಲಕ ಕೆಲಸ‌ ನಿರ್ವಹಣೆ ಮಾಡಲಾಗುತ್ತಿದೆ.

ಐದು ದಿನದಲ್ಲಿ 30 ರಿಂದ 40 ಸಾವಿರ ಶಿಷ್ಯರು ಭಾಗವಹಿಸುವ ನಿರೀಕ್ಷೆ ಇದೆ. ಕೊನೇಯ ಎರಡು ಸರ್ವಜ್ಣೇಂದ್ರ ಸರಸ್ವತೀ ವೇದಿಕೆಯಲ್ಲಿ ನಡೆಯಲಿದೆ. ಅಲ್ಲೇ ಸ್ವಸಹಾಯ ಪದ್ಧತಿ ಊಟೋಪಚಾರ ವ್ಯವಸ್ಥೆ ಮಾಡಲಾಗುತ್ತಿದೆ, ಸಕಲ ಸಿದ್ಧತೆ ಮಾಡಲಾಗಿದ್ದಯ, ಏನಾದರೂ ದೋಷವಾದರೂ ಭಕ್ತ ಶಿಷ್ಯರು ಶಾಂತಿಯಿಂದ ಸಹಕರಿಸಯತ್ತಾರೆ ಎಂಬ ವಿಶ್ವಾಸ ಇದೆ‌ ಎಂದರು.

ಎಂಟು‌ ಕಡೆ ಪಾರ್ಕಿಂಗ್ ವ್ಯವಸ್ಥೆ, ವಿವಿಐಪಿ, ಯತಿಗಳ ಕಾರ್ಯಕರ್ತರ, ಶಿಷ್ಯರ ವಾಹನ ನಿಲುಗಡೆ ಪ್ರತ್ಯೇಕ ಮಾಡಲಾಗಿದೆ. ಸ್ವಸಹಾಯ ಪದ್ಧತಿಯಲ್ಲಿ ಊಟಕ್ಕೆ 14 ಕೌಂಟರ್ ಮುಖ್ಯವಾಗಿ ಇರುತ್ತವೆ. ಕೊನೇ ದಿನ 25 ಸಾವಿರಕ್ಕೂ ಅಧಿಕ ಭಕ್ತರು ಬಂದರೂ ಒಂದು ತಾಸಿನಲ್ಲಿ ಊಟೋಪಚಾರ ವ್ಯವಸ್ಥೆ ಆಗುವಂತೆ ಸಿದ್ಧತೆ ಇದೆ. ಅಶಕ್ತರಿಗೆ ವಾಹನ, ಊಟೋಪಚಾರ ವ್ಯವಸ್ಥೆ ಕೂಡ ಇದೆ ಎಂದರು.

ಸಾವಿರದ ಮುನ್ನೂರು ವರ್ಷಗಳಿಗೂ ಅಧಿಕ ಇತಿಹಾಸ ಹಾಗೂ ಪರಂಪರೆ ಹೊಂದಿದ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಶಿಷ್ಯ ಸ್ವೀಕಾರ ಮಹೋತ್ಸವಕ್ಕೆ‌ ಸಕಲ ಭಕ್ತರಿಂದಲೇ ಕಳೆಗಟ್ಟಿದೆ. ಫೆ.18 ರಿಂದ ವಿವಿಧ‌ ಧಾರ್ಮಿಕ ಕಾರ್ಯಕ್ರಮ, ವಿರಾಜ ಹೋಮ ನಡೆಯಲು ಯಾಗ ಶಾಲೆಗಳೂ ಸಿದ್ಧವಾಗಿದೆ. ಹವನ, ಪ್ರವಚನ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

Advertisement

ಫೆ.18ರಂದು ಗಣಪತಿ ಪೂಜೆ, ಗೋದಾನ, ಕೂಷ್ಮಾಂಡ ಹವನ, ಒಂದು ಲಕ್ಷ ಗಾಯತ್ರೀ ಜಪ, ದಶಾಂಶ ಹವನ ನಡೆಯಲಿದೆ. ಐದು ವೇದಗಳ ಪಾರಾಯ, ಮಹಾರುದ್ರ ಜಪ ಪ್ರಾರಂಭವಾಗಲಿದೆ.

19 ರಂದುಮಹಾರುದ್ರ ಜಪ,ಹವನ,3.20 ಲಕ್ಷ ಅಕ್ಷರಾಯುತ ಶ್ರೀಲಕ್ಷ್ಮೀನೃಸಿಂಹ ಮಂತ್ರ ಜಪ ಪ್ರಾರಂಭವಾಗಲಿದೆ. 20ರಂದು ಅಷ್ಟಶ್ರಾದ್ದ ಒಂದು ಸಾವಿರ ಗಣಪತ್ಯಥರ್ವಶೀರ್ಷ ಜಪ, ಹವನ, ಲಕ್ಷ್ಮೀ ನೃಸಿಂಹಜಪ ಜರುಗಲಿದೆ.

ಫೆ.21 ರಂದು ಸಂನ್ಯಾಸ ಗ್ರಹಣ ಸಂಕಲ್ಪ, ಗಣೊತೊ ಪೂಜಾ, ನಾಂದಿಶ್ರಾದ್ದ, ಮಾತೃಕಾಪೂಜಾ, ಸಾವಿತ್ರೀ ಪ್ರವೇಶ, ಶತಚಂಡಿ ಹವನ, ವಿರಜಾ ಹೋಮ ಮತ್ತಿತರ ಕಾರ್ಯಕ್ರಮಗಳು ನಡೆಯಲಿದೆ.ಫೆ.22 ರಂದು 11 ಯತಿಗಳ ಸಮ್ಮುಖದಲ್ಲಿ ಯೋಗ ಪಟ್ಟದ ಕಾರ್ಯಕ್ರಮಗಳು ನಡೆಯಲಿದೆ.

ಜಲಾಶಯಗಮನ, ಪ್ರೇಷೋಚ್ಚಾರಣೆ, ಕಾಷಾಯ ವಸ್ತ್ರ ಧಾರಣೆ, ಪ್ರಣವ ಮಹಾವಾಕ್ಯೋಪದೇಶ, ನಾಮಕರಣ, ಪರ್ಯಂ ಕಶೌಚ, ಯೋಗ ಪಟ್ಟ, ಬ್ರಹ್ಮವಿದಾಶೀರ್ವಚನ, ಅಕ್ಷರಾಯುತ ಶ್ರೀಲಕ್ಷ್ಮೀ ನೃಸಿಂಹ ಮಂತ್ರ ಹವನ ಪೂರ್ಣಾಹುತಿ, ತೀರ್ಥ ಪ್ರಸಾದ ಮಂತ್ರಾಕ್ಷತೆ ಕಾರ್ಯಕ್ರಮಗಳು ನಡೆಯಲಿದೆ‌ ಎಂದರು.

ಫೆ.18 ರಂದು ಮಧ್ಯಾಹ್ನ 3:30 ಕ್ಕೆ ಸ್ವರ್ಣವಲ್ಲೀ ಶ್ರೀಗಳ ಸಾನ್ನಿಧ್ಯದಲ್ಲಿ ಧರ್ಮ ಸಭೆ ಸುಧರ್ಮಾ ಸಭಾಂಗಣದಲ್ಲಿ ನಡೆಯಲಿದೆ. ಈ ವೇಳೆ ಸ್ವರ್ಣವಲ್ಲೀ ಶ್ರೀಗಳವರ ಪೀಠಾರೋಹಣದಿಂದ ಈವರೆಗಿನ ಪ್ರಮುಖ ಸನ್ನಿವೇಶಗಳ ಚಿತ್ರ ಸಂಪುಟ ಸ್ವರ್ಣಶ್ರೀ ಗ್ರಂಥ ಲೋಕಾರ್ಪಣೆ ಆಗಲಿದೆ. ಸಚಿವ ಮಂಕಾಳು ವೈದ್ಯ, ಕರ್ನಾಟಕ ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತಕುಮಾರ ಹೆಗಡೆ, ಶಾಸಕರಾದ ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ, ದಿನಕರ ಶೆಟ್ಟಿ, ಶಾಂತಾರಾಮ ಸಿದ್ದಿ, ಗಣಪತಿ ಉಳ್ವೇಕರ ಭಾಗವಹಿಸುವರು.

ಫೆ.21 ರಂದು ಮಧ್ಯಾಹ್ಯ3 ಕ್ಕೆ ಸರ್ವಜ್ಞೇಂದ್ರ ಸರಸ್ವತೀ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸ್ವರ್ಣವಲ್ಲೀ ಶ್ರೀ, ಕೂಡ್ಲಿ ಶೃಂಗೇರಿಮಠದ ಶ್ರೀವಿದ್ಯಾವಿಶ್ವೇಶ್ವರ ಮಹಾಸ್ವಾಮೀಜಿ, ಶಿರಳಗಿ ಶ್ರೀರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಮಹಾ ಸ್ವಾಮೀಜಿಗಳು, ಹೊಳೆನರಸಿಪುರದ ಅಧ್ಯಾತ್ಮ ಪ್ರಕಾಶದ ಶ್ರೀ ಪ್ರಕಾಶಾನಂದೇಂದ್ರ ಸರಸ್ವತೀಮಹಾ ಸ್ವಾಮೀಜಿಗಳು, ಮೈಸೂರು ಭಾರತೀ ಯೋಗಧಾಮದ ಯೋಗಾಚಾರ್ಯ ಕೆ.ಎಲ್.ಶಂಕರನಾರಾಯಣ ಜೋಯಿಸ ಪಾಲ್ಗೊಳ್ಳುವರು. ಇದೇ ವೇಳೆ ಆಲೋಕಯಾಂಬ ಲಲಿತೇ ಗ್ರಂಥ ಲೋಕಾರ್ಪಣೆ ಆಗಲಿದೆ.

22 ರಂದು ನಡೆಯುವ ಧರ್ಮ ಸಭೆಗೆ ಸ್ವರ್ಣವಲ್ಲೀ ಶ್ರೀಗಳು ಸಾನ್ನಿಧ್ಯ ನೀಡಲಿದ್ದು, ಯೋಗವಾಸಿಷ್ಠ ಪ್ರಥಮ ಸಂಪುಟ ಲೋಕಾರ್ಪಣೆ ಆಗಲಿದೆ. ಮೈಸೂರಿನ ಶ್ರೀಯೋಗಾನಂದೇಶ್ವರ ಸರಸ್ವತೀ ಮಠದ ಶ್ರೀಶಂಕರ ಭಾರತೀ ಮಹಾಸ್ವಾಮೀಜಿಗಲಕು ಯಡತೊರೆ, ಹರಿಹರ ಪುರದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾ ಸ್ವಾಮೀಜಿ, ಕೂಡ್ಲಿ ಶೃಂಗೇರಿಮಠದ ಶ್ರೀವಿದ್ಯಾವಿಶ್ವೇಶ್ವರ ಮಹಾಸ್ವಾಮೀಜಿ, ಹೊಳೆನರಸಿಪುರದ ಅಧ್ಯಾತ್ಮ ಪ್ರಕಾಶದ ಶ್ರೀ ಪ್ರಕಾಶಾನಂದೇಂದ್ರ ಸರಸ್ವತೀಮಹಾ ಸ್ವಾಮೀಜಿಗಳು, ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಮಹಾ ಸ್ವಾಮೀಜಿಗಳು, ನೆಲೆಮಾವುಮಠದ ಶ್ರೀಮಾಧವಾನಂದ ಭಾರತೀ ಮಹಾ ಸ್ವಾಮೀಜುಗಳು, ತುರವೆಕೆರೆಯ ಶ್ರೀಪ್ರಣವಾನಂದ ತೀರ್ಥ ಮಹಾಸ್ವಾಮೀಜಿಗಳು, ಕಾಂಚಿಪುರಂನ ಸ್ವಾಮೀಜಿಗಳಾದ ಶ್ರೀಆತ್ಮಬೋಧ ತೀರ್ಥ ಸ್ವಾಮೀಜಿ, ಶ್ರೀಸಹಜಾನಂದ ತೀರ್ಥ ಸ್ವಾಮಿಗಳು, ಶ್ರೀಅಂಜನಾನಂದತೀರ್ಥ ಸ್ವಾಮೀಜಿ, ಸ್ವರ್ಣವಲ್ಲೀಮಠದ ನೂತನ ಶ್ರೀಗಳು ಸಾನ್ನಿಧ್ಯ ನೀಡಲಿದ್ದಾರೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉಪಸ್ಥಿತರಿರಲಿದ್ದಾರೆ. ಎಲ್ಲ ದಿನಗಳಲ್ಲಿ ತೀರ್ಥ ಪ್ರಸಾದ ವಿತರಣೆ, ಪ್ರಸಾದ ಭೋಜನ ಇರಲಿದ್ದು, ಶಿಷ್ಯರು ಹೆಚ್ಚಿನಶಿಷ್ಯ ಭಕ್ತರು ಪಾಲ್ಗೊಳ್ಳಲು ಮನವಿ ಮಾಡಿಕೊಳ್ಳುವದಾಗಿ ತಿಳಿಸಿದರು.

ಫೆ.೧೮ರಂದು ಸಂಜೆ 5:30 ಕ್ಕೆ ನಾರಾಯಣ ದಾಸರಿಂದ ಕೀರ್ಥನೆ, 19 ಕ್ಕೆ ಮಠದ ಸಾಹಿತ್ಯದ ಮೇಲೆ ಡಾ. ಜಿ.ಎಂ.ಹೆಗಡೆ ಮಾತು, ರೇಖಾ ಕೋಟೆಮನೆ ಅವರಿಂದ ಭಕ್ತಿ ಸಂಗೀತ, ಈಶ್ವರ ದಾಸರಿಂದ ಕೀರ್ತನೆ, 20 ಕ್ಕೆ ಮಠದ ಇತಿಹಾಸದ ಬಗ್ಗೆ ಡಾ. ಲಕ್ಷ್ಮೀಶ ಸೋಂದಾ ಉಪನ್ಯಾಸ, ವಿ.ಶಂಕರ ಭಟ್ಟ ಉಂಚಳ್ಳಿ ಅವರಿಂದ ಕೀರ್ತನೆ , ಫೆ.21 ಕ್ಕೆ ಪ್ರಸಿದ್ದ ಕಲಾವಿದರಾದ ಧಾರವಾಡ ಪ್ರಸನ್ನ ಗುಡಿ ಹಾಗೂ ತಂಡದವರಿಂದ ಭಕ್ತಿ ಸಂಗೀತ ನಡೆಯಲಿದೆ ಎಂದರು.

ಈ ವೇಳೆ ಆರ್.ಎಸ್.ಹೆಗಡೆ ಭೈರುಂಬೆ, ಜಿ.ವಿ.ಹೆಗಡೆ ಗೊಡವೆಮನೆ, ಕೆ.ವಿ.ಭಟ್ಟ, ಅನಂತ ಹುಳಗೋಳ, ಮಹಾಬಲೇಶ್ವರ ಗಡಿಕೈ, ಟಿ.ವಿ.ಹೆಗಡೆ ಇತರರು ಇದ್ದರು.

ಕಳೆದ ಆರು ವರ್ಷಗಳಿಂದ ಸ್ವರ್ಣವಲ್ಲೀ‌ ಪೀಠಕ್ಕೆ ಉತ್ತರಾಧಿಕಾರಿಗಳ ಅನ್ವೇಷಣೆ ನಡೆಸಲಾಗಿತ್ತು. ಯಲ್ಲಾಪುರ ತಾಲೂಕಿನ ಈರಾಪುರ ಗಂಗೆಮನೆಯ ವೇದಮೂರ್ತಿ ನಾಗರಾಜ ಭಟ್ಟ ಅವರನ್ನು ಶಿಷ್ಯರಾಗಿ ಸ್ವೀಕರಿಸಲು ತೀರ್ಮಾನಿಸಿದ ಹಿನ್ನಲೆಯಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವ ನಡೆಯುತ್ತಿದೆ. ಎಲ್ಲರ ಸಹಕಾರ ಅಗತ್ಯ.
ವಿಘ್ನೇಶ್ವರ ಹೆಗಡೆ ಬೊಮ್ನಳ್ಳಿ, ಅಧ್ಯಕ್ಷರು, ಆಡಳಿತ ಮಂಡಳಿ

   ಸ್ವರ್ಣವಲ್ಲೀ‌ ಎಂಬ ಬಂಗಾರದ ಗುರು‌ ಪರಂಪರೆಯ ವಲ್ಲಿ‌ ಈಗ ಚಿಗುರುತ್ತಿದೆ. ಹೊಸ ಚಿಗುರು ಸೇರ್ಪಡೆ ಆಗುತ್ತಿದ್ದೆ. ಒಂದು‌ ಅಪರಂಜಿ ತಂದಿದ್ದು, ಗಟ್ಟಿತನ, ಹೊಳಪು ನೀಡುವ ಕೆಲಸ ಮುಂದಿನ ದಿನಗಳಲ್ಲಿ ಆಗಲಿದೆ. ಎಲ್ಲಾದರೂ ಆಮಂತ್ರಣ ತಲುಪದೇ ಹೋದರೆ ಅವಶ್ಯವಾಗಿ ಬರಬೇಕು. ಸಿದ್ಧತೆ ಕೂಡ ಕಾರ್ಯಕರ್ತರಿಂದ ಜೋರಾಗಿದೆ.
ಸ್ವರ್ಣವಲ್ಲೀ ಶ್ರೀ

Advertisement

Udayavani is now on Telegram. Click here to join our channel and stay updated with the latest news.

Next