ಮಮತಾಳಿಗೆ ಆತಂಕ ಮತ್ತು ಉದ್ವಿಗ್ನತೆಯಿಂದಾಗಿ ಪರೀಕ್ಷೆಯ ಭಯ. ಜೀವನದಲ್ಲಿ ತುಂಬಾ ಸಾಧಿಸುವ ಆಕಾಂಕ್ಷೆಯುಳ್ಳ ಬುದ್ಧಿವಂತ ಹುಡುಗಿ. ಕಲಿಕಾ ಸಮಸ್ಯೆ ಇಲ್ಲ. ನೆನಪಿನ ಶಕ್ತಿ ಚೆನ್ನಾಗಿದೆ. ಏಕಾಗ್ರತೆಗೂ ಕೊರತೆ ಇಲ್ಲ. ಆದರೆ, ಉದ್ವಿಗ್ನತೆಯಿಂದಾಗಿ ಬೌದ್ಧಿಕವಾಗಿ, ಭಾವನಾತ್ಮಕವಾಗಿ, ಶಾರೀರಿಕ ಆರೋಗ್ಯದಲ್ಲಿ ಮತ್ತು ವರ್ತನೆಯಲ್ಲಿ ವ್ಯತ್ಯಾಸಗಳು ಕಾಣಿಸುತ್ತವೆ. ಪರೀಕ್ಷೆ ಬರೆಯುವಾಗ, ಕಲಿತದ್ದು ನೆನಪಿಗೆ ಬರುವುದಿಲ್ಲ. ಮೈ- ಕೈ ಬೆವರಿ, ಎದೆಯಲ್ಲಿ ತಳಮಳ. ಪ್ರಶ್ನೆ ಪತ್ರಿಕೆಯನ್ನು ನೋಡಿದರೆ ಕಣ್ಣಾಲಿಗಳು ತುಂಬಿ ಬರುತ್ತವೆ. ವಾಂತಿ ಬರುವ ಹಾಗಾಗಿ, ಅತೀವ ಬಾಯಾರಿಕೆ, ಸಂಕಟ ಮತ್ತು ಸುಸ್ತು. ಪರೀಕ್ಷೆ ಬಂದರೆ ಮನೆಯವರಿಗೆÇÉಾ, ಆಕೆಗೆ ಏನಾಗುವುದೋ ಎಂಬ ಭಯ ಕಾಡುತ್ತದೆ.
ಪರೀಕ್ಷೆ ಬರುತ್ತಿದ್ದಂತೆ ಆಕೆಯ ಆಲೋಚನೆಗಳು ನಕಾರಾತ್ಮಕವಾಗುತ್ತವೆ. ರಾತ್ರಿಯೆÇÉಾ ನಿದ್ದೆಗೆಟ್ಟು ಓದಿ ಸುಸ್ತಾಗುತ್ತಾಳೆ. ಓದಿದ್ದನ್ನು ಪದೇಪದೆ ಮನನ ಮಾಡಿಕೊಳ್ಳಬೇಕು ಎನಿಸುತ್ತದೆ. ಓದಿದ್ದು ಸಾಕು ನಿಲ್ಲಿಸು ಎಂದು ಹೇಳಿದರೂ ಕೇಳುವುದಿಲ್ಲ. ಆದರೂ, ತಯಾರಿಗೆ ತಕ್ಕ ಅಂಕಗಳು ಬರುವುದಿಲ್ಲ ಎಂದು ಬೇಜಾರು. ಅಣ್ಣ ಮೋಹನ ಕಡಿಮೆ ಓದಿದರೂ ಹೆಚ್ಚಿನ ಅಂಕ ತೆಗೆಯುತ್ತಾನೆ ಎಂದು ಹೊಟ್ಟೆಕಿಚ್ಚು ಬೇರೆ. ಅವನೇನಾದರೂ ಇವಳ ತಯಾರಿಯ ಬಗ್ಗೆ ರೇಗಿಸಿದರೆ ಮುಗಿಯಿತು. ರಾತ್ರಿಯೆಲ್ಲ ಅತ್ತು ಅತ್ತು ಕಣ್ಣೆÇÉಾ ಬಾತುಕೊಳ್ಳುತ್ತದೆ. “ನೀನೂ ಬುದ್ಧಿವಂತೆ ಕಣಮ್ಮಾ’ ಎಂದು ಹೊಗಳಿದರೆ ಕೋಪ ಬರುತ್ತದೆ. ಸಮಾಧಾನ ಮಾಡಿದರಂತೂ ಕಿರುಚಾಡಿ ಬಿಡುತ್ತಾರೆ.
ವ್ಯಕ್ತಿತ್ವದಲ್ಲಿನ ಉದ್ವಿಗ್ನತೆಯು ಪರೀಕ್ಷೆಗೆ ಅತೀ ತಯಾರಿ ನಡೆಸಲು ಪ್ರೇರೇಪಿಸುತ್ತದೆ. ಆಲೋಚನೆಗಳು ನಕಾರಾತ್ಮಕವಾಗಿದ್ದು, ತಮ್ಮ ಬಗ್ಗೆ ತಾವೇ ಕೀಳು ಭಾವನೆ ಬೆಳೆಸಿಕೊಂಡು ಬಿಟ್ಟಿರುತ್ತಾರೆ. ಸವಾಲು ಎನಿಸುವ ಜೀವನದ ಪ್ರತಿಯೊಂದು ಹಂತವೂ ಸೋಲಿನ ಹೆದರಿಕೆಯನ್ನು ಹುಟ್ಟು ಹಾಕುತ್ತದೆ. ಹೆದರಿಕೆ ಎಷ್ಟಿರಬಹುದೆಂದರೆ, ನೀರಿನಲ್ಲಿ ಮುಳುಗುವ ಹೆದರಿಕೆಯಷ್ಟೇ ಇರುತ್ತದೆ. ಈ ಮಕ್ಕಳು, ತಮ್ಮ ಬಗ್ಗೆಯ ಹೀನ ಭಾವನೆಯಿಂದಾಗಿ, ಆತ್ಮಹತ್ಯೆಗೂ ಪ್ರಯತ್ನಿಸಬಹುದು. ಕೆಲವೊಮ್ಮೆ ಮನೋವೈದ್ಯಕೀಯ ಚಿಕಿತ್ಸೆಯ ಅಗತ್ಯವೂ ಬರಬಹುದು.
ಉದ್ವಿಗ್ನತೆ ಇರುವ ಮಕ್ಕಳಿಗೆ ಶಾರೀರಿಕ ವ್ಯಾಯಾಮ ಅತ್ಯಗತ್ಯ. ಬೆಳಗ್ಗೆ ಎದ್ದು ಚಿಕ್ಕದಾಗಿ ವಾಯುವಿಹಾರಕ್ಕೆ ಹೋಗಬೇಕು. ಪ್ರಕೃತಿಯನ್ನು ಬೆರಗು ಅಥವಾ ವಿಸ್ಮಯದಿಂದ ನೋಡುವುದನ್ನು ಕಲಿಸಬೇಕು. ಯೋಗ ಮತ್ತು ಉಸಿರಾಟದ ತಂತ್ರವನ್ನು ಹೇಳಿ ಕೊಡಬೇಕು. ಅವರು ಮನೆಗೆಲಸ ಮಾಡಬಹುದು. ಯಾವುದೇ ಪ್ರಕಾರದ ನೃತ್ಯ ಕಲಿತರೆ ಒಳ್ಳೆಯದಾಗುತ್ತದೆ. ಇವರಿಗೆ ಚಿಕ್ಕ ಚಿಕ್ಕ ಸಾಧನೆಯ ಮೈಲುಗಲನ್ನು ಹಾಕಿಕೊಟ್ಟು, ಅವರಲ್ಲಿ ಆತ್ಮವಿಶ್ವಾಸವನ್ನು ಬೆಳೆಸಬೇಕು. ಅನಗತ್ಯ ಅಭ್ಯಾಸಕ್ಕೆ ಮನೆಯಲ್ಲಿ ಉತ್ತೇಜನ ಕೊಡಬೇಡಿ. ಮನೆಗೆಲಸವನ್ನು ಮಾಡಲು ಬಿಡಿ. ಅಗತ್ಯಗಳನ್ನು ಕೂತಲ್ಲಿಗೇ ಸರಬರಾಜು ಮಾಡಬೇಡಿ.
– ಡಾ. ಶುಭಾ ಮಧುಸೂದನ್, ಚಿಕಿತ್ಸಾ ಮನೋವಿಜ್ಞಾನಿ