Advertisement

 ಸ್ತ್ರೀ ಶಕ್ತಿ ಉತ್ಪನ್ನಗಳ ಮಾರಾಟ ಮೇಳ 

11:25 AM Nov 25, 2017 | |

ಪಾವಂಜೆ : ಮಹಿಳೆಯರು ತಮ್ಮ ಸ್ವಾವಲಂಬಿ ಜೀವನವನ್ನು ಸ್ವಂತ ನೆಲೆಯಲ್ಲಿ ನಡೆಸಬೇಕು. ಅವರು ಎಂದಿಗೂ ಅಬಲೆಯರಾಗಬಾರದು ಎಂದು ಸರಕಾರ ಹಲವಾರು ಯೋಜನೆಗಳನ್ನು ವಿವಿಧ ಇಲಾಖೆಗಳ ಮೂಲಕ ಜಾರಿಗೊಳಿಸುತ್ತಿದೆ. ಸ್ತ್ರೀ ಶಕ್ತಿ, ಸ್ವಸಹಾಯ ಗುಂಪುಗಳು ಇದಕ್ಕೆ ಉತ್ತಮ ವೇದಿಕೆಯಾಗಿವೆ ಎಂದು ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.

Advertisement

ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನ. 24ರಂದು ವಿವಿಧ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಳೆಯಂಗಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಜಲಜಾ ಅಧ್ಯಕ್ಷತೆ ವಹಿಸಿದ್ದರು. ಪಾವಂಜೆ ದೇವಸ್ಥಾನದ ಆಡಳಿತ ಮಂಡಳಿಯ ಟ್ರಸ್ಟಿ ನಕ್ರೆ ಬಾಲಕೃಷ್ಣ ರಾವ್‌ ಆಶೀರ್ವಚನ ನೀಡಿದರು.

ಜಿ.ಪಂ. ಸದಸ್ಯ ವಿನೋದ್‌ ಕುಮಾರ್‌ ಬೊಳ್ಳೂರು, ತಾ.ಪಂ. ಸದಸ್ಯ ಜೀವನ್‌ ಪ್ರಕಾಶ್‌ ಕಾಮೆರೊಟ್ಟು, ಮೂಡಾದ ಸದಸ್ಯ ಎಚ್‌.ವಸಂತ ಬೆರ್ನಾಡ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಶ್ಯಾಮಲಾ ಶುಭ ಹಾರೈಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯ ಮಂಗಳೂರು ಗ್ರಾಮಾಂತರ, ಸ್ತ್ರೀ ಶಕ್ತಿ ಬ್ಲಾಕ್‌ ಸೊಸೈಟಿ ಮಂಗಳೂರು, ಹಳೆಯಂಗಡಿ ಗ್ರಾ.ಪಂ. ಹಾಗೂ ಜ್ಞಾನಶಕ್ತಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಪಾವಂಜೆ ಆಡಳಿತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಮೂಲ್ಕಿ ಹೋಬಳಿ ಮಟ್ಟದ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಮಾರಾಟ ಮೇಳದಲ್ಲಿ ಪಾಲ್ಗೊಂಡರು.

ಎಪಿಎಂಸಿ ಸದಸ್ಯೆ ರಜನಿ ದುಗ್ಗಣ್ಣ, ಹಳೆಯಂಗಡಿ ಗ್ರಾಮ ಪಂಚಾಯತ್‌ ಸದಸ್ಯರಾದ ಆಬ್ದುಲ್‌ ಖಾದರ್‌, ಹಮೀದ್‌ ಸಾಗ್‌ ಹಳೆಯಂಗಡಿ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಜಾತಾ ವಾಸುದೇವ, ಮೂಲ್ಕಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಅನಂತ ಪದ್ಮನಾಭ, ಮಂಗಳೂರು ಗ್ರಾಮಾಂತರ ಸ್ತ್ರೀ ಶಕ್ತಿ ಬ್ಲಾಕ್‌ ಸೊಸೈಟಿಯ ಅಧ್ಯಕ್ಷೆ ರೇಖಾ, ಶಿಶು ಅಭಿವೃದ್ಧಿ ಯೋಜನೆಯ ಸಹಾಯಕ ಅಧಿಕಾರಿ ಭಾರತಿ, ವಿವಿಧ ವಲಯದ ಮೇಲ್ವಿಚಾರಕರಾದ ಮಾಲಿನಿ, ಭಾರತಿ, ಶೀಲಾವತಿ, ಶಂಕರಿ, ಚಂದ್ರಾವತಿ ವಿವಿಧ ಅಂಗನವಾಡಿ ಕಾರ್ಯೆಕರ್ತೆಯರು, ಸ್ತ್ರೀ ಶಕ್ತಿ ತಂಡದ ಪ್ರಮುಖರು ಉಪಸ್ಥಿತರಿದ್ದರು. ಮೇಲ್ವಿಚಾರಕರಾದ ಅಶ್ವಿ‌ನಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ನಾಗರತ್ನ ವಂದಿಸಿದರು.

Advertisement

ಆಕರ್ಷಕ ಮಾರಾಟ ಕೇಂದ್ರ 
ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಚಂಪಾ ಷಷ್ಠಿಯ ಆಕರ್ಷಕ ಮಾರಾಟ ಕೇಂದ್ರವಾಗಿತ್ತು. ತೆಂಗಿನಕಾಯಿ, ತರಕಾರಿ, ಎಳನೀರು, ಉಪ್ಪಿನಕಾಯಿ, ಹಪ್ಪಳ ಸಂಡಿಗೆ, ಜಿಲೇಬಿ, ಲಾಡು, ಪೇಡ, ರವೆ ಲಾಡು, ರಸ್ಕ್, ಬನ್‌ -ಬ್ರೆಡ್‌, ಟೋಸ್ಟ್‌, ಮಿಕ್ಸರ್‌, ಚರುಮುರಿ, ಜೋಳದ ರೊಟ್ಟಿ, ಶೇಂಗ ಚಟ್ನಿ, ಗುರಾಳ ಸೊಪ್ಪು, ಹುರುಳಿ ಪಲ್ಯ, ಎಳ್ಳು, ಪುನರ್‌ಪುಳಿ, ಲಿಂಬೆ ತಂಪು ಪಾನೀಯ, ಆಯುರ್ವೇದ ಮನೆ ಮದ್ದು, ಶೃಂಗಾರ ಸಾಧನಗಳು, ಸಿದ್ಧ ಉಡುಪುಗಳು ಹೀಗೆ ನೂರಾರು ಬಗೆಯ ಉತ್ಪನ್ನಗಳನ್ನು ಸುಮಾರು 38 ಸ್ತ್ರೀ ಶಕ್ತಿ ತಂಡಗಳು ಮಾರಾಟ ಮಾಡುತ್ತಿದ್ದವು.

ಇಲಾಖೆಯ ನೆರವು
2002ರಲ್ಲಿ ಆರಂಭವಾದ ಸ್ತ್ರೀ ಶಕ್ತಿ ಗುಂಪುಗಳಿಗೆ ಇಲಾಖೆಯು ಮುಕ್ತವಾಗಿ ನೆರವು ಮತ್ತು ಮಾರ್ಗದರ್ಶನ ನೀಡುತ್ತಿದೆ. ಪ್ರತಿ ಗುಂಪಿಗೆ 5 ಸಾವಿರ ರೂ. ಸುತ್ತು ನಿಧಿ, 15ರಿಂದ 20 ಸಾವಿರ ರೂ. ಪ್ರೋತ್ಸಾಹ ನಿಧಿ ಹಾಗೂ ಉತ್ತಮ ಸ್ತ್ರೀ ಶಕ್ತಿ ತಂಡಕ್ಕೆ 75 ಸಾವಿರ ರೂ. ವಿಶೇಷ ಬಹುಮಾನ ನಿಧಿಯನ್ನು ನೀಡುತ್ತಾ ಯೋಜನೆಯು ಮಹಿಳಾ ಸಶಕ್ತೀಕರಣಕ್ಕಾಗಿ ಉತ್ತಮ ತಳಹದಿಯಾಗಿದೆ.
–  ಶ್ಯಾಮಲಾ, ಯೋಜನಾಧಿಕಾರಿ,
   ಮಹಿಳಾ,ಮಕ್ಕಳ ಅಭಿವೃದ್ಧಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next