Advertisement

ಸ್ತ್ರೀ ಅಸ್ಮಿತೆ, ವಚನ ಕ್ರಾಂತಿ: ಚಿಂತನ ಗೋಷ್ಠಿ

01:00 AM Mar 11, 2019 | Harsha Rao |

ಶಿರ್ವ: ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ಬೆಂಗಳೂರು, ಜಿಲ್ಲಾ ಕದಳಿ ವೇದಿಕೆ ಉಡುಪಿ ಮತ್ತು ಶಿರ್ವ ಸಂತ ಮೇರಿ ಕಾಲೇಜಿನ ಸಾಹಿತ್ಯ ಸಂಘದ ಸಹಯೋಗದಲ್ಲಿ  ಸ್ತ್ರೀ ಅಸ್ಮಿತೆ ಮತ್ತು ವಚನ ಕ್ರಾಂತಿ ಚಿಂತನ ಗೋಷ್ಠಿ, ವಚನ ಗಾಯನ ವಿಶ್ಲೇಷಣೆ ಕಾರ್ಯಕ್ರಮವು ಕಾಲೇಜಿನ ಹಿರಿಯ ಪ್ರಾಧ್ಯಾಪಕ ಪ್ರೊ| ವಿಠಲ ನಾಯಕ್‌ ಅವರ ಅಧ್ಯಕ್ಷತೆಯಲ್ಲಿ ಶನಿವಾರ  ನಡೆಯಿತು.

Advertisement

ಉಡುಪಿಯ ಧರ್ಮಗುರು ರೆ|ಫಾ| ವಿಲಿಯಂ ಮಾರ್ಟಿಸ್‌ ಕಾರ್ಯಕ್ರಮ ಮಾತನಾಡಿ ಸಂಸ್ಕೃತ ಶ್ಲೋಕ ಒಗ್ಗದೆ  ತನ್ನ ಅಭಿಪ್ರಾಯ  ಜನರಿಗೆ ಸಾಮಾನ್ಯ ಕನ್ನಡ ಭಾಷೆಯಲ್ಲಿ ವಿವರಿಸಿದ ಬಸವಣ್ಣನವರ ಶರಣ ಸಾಹಿತ್ಯವನ್ನು ಸಮಾಜಕ್ಕೆ ಸಮರ್ಪಿಸಿ ದರು. ಬೈಬಲ್‌ಗ‌ೂ ವಚನ ಸಾಹಿತ್ಯಕ್ಕೂ ಅವಿನಾಭಾವ ಸಂಬಂಧವಿದ್ದು  ಪರಧರ್ಮ ಗೌರವಿಸಿ  ಭೇದಭಾವವಿಲ್ಲದೆ ಎಲ್ಲ ಜಾತಿ ಮತ, ಧರ್ಮವನ್ನು ಒಂದುಗೂಡಿಸುವ ಧರ್ಮವನ್ನು ಅನುಷ್ಠಾನಗೊಳಿಸುವ ಪ್ರಯತ್ನ  ನಡೆಸಿ ಎಂದರು. 

ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ಉಡುಪಿ ಜಿಲ್ಲಾಧ್ಯಕ್ಷ ಡಾ| ಯು.ಸಿ.ನಿರಂಜನ ಪ್ರಾಸ್ತಾವಿಕವಾಗಿ  ಮಾತನಾಡಿದರು. ಲಿಂಗ ಸಮಾನತೆ, ಸೂತಕಗಳನ್ನು ಸುಳ್ಳು ಮಾಡಿದ ವಚನ ಕ್ರಾಂತಿಯ ಬಗ್ಗೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ| ಯಶೋದಾ ಎಲ್ಲೂರು, ವೈಚಾರಿಕ ದಾಂಪತ್ಯಕ್ಕೆ ಅಡಿಪಾಯ ಹಾಕಿದ ಕ್ರಾಂತಿ ಬಗ್ಗೆ ಶಿರ್ವ ಎಂಎಸ್‌ಆರ್‌ಎಸ್‌ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ  ಪ್ರೊ|ಟಿ. ಮುರುಗೇಶಿ ಉಪನ್ಯಾಸ ನೀಡಿದರು. 

ಉಡುಪಿ ಜಿಲ್ಲಾ ಕದಳಿ ವೇದಿಕೆಯ ಅಧ್ಯಕ್ಷೆ ಪ್ರೊ| ದಿವ್ಯಶ್ರೀ ಸ್ವಾಗತಿಸಿದರು.ಅಸಿಸ್ಟೆಂಟ್‌ ಪ್ರೊ| ಪ್ರೇಮನಾಥ್‌ ವಂದಿಸಿದರು. ಶ್ವೇತಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next