Advertisement

Ayodhya ರಾಮ ಲಲ್ಲಾನ ದರ್ಶನದ ನಂತರ ವಿವರಿಸಲಾಗದ ಶಾಂತತೆಯನ್ನು ಅನುಭವಿಸಿದೆ: ಕೇಜ್ರಿವಾಲ್

07:06 PM Feb 12, 2024 | Team Udayavani |

ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕುಟುಂಬ ಸದಸ್ಯರೊಂದಿಗೆ ಸೋಮವಾರ ಅಯೋಧ್ಯೆಯ ರಾಮಜನ್ಮಭೂಮಿ ದೇವಾಲಯಕ್ಕೆ ಭೇಟಿ ನೀಡಿದರು.

Advertisement

”ಇಂದು ನನ್ನ ತಂದೆ-ತಾಯಿ ಮತ್ತು  ಪತ್ನಿಯೊಂದಿಗೆ ಅಯೋಧ್ಯೆಗೆ ತಲುಪಿದ ನನಗೆ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾನ ದಿವ್ಯ ದರ್ಶನ ಪಡೆಯುವ ಭಾಗ್ಯ ಸಿಕ್ಕಿತು. ಈ ಸಂದರ್ಭದಲ್ಲಿ ಭಗವಂತ್ ಜೀ ಮತ್ತು ಅವರ ಕುಟುಂಬದವರು ಉಪಸ್ಥಿತರಿದ್ದರು. ಎಲ್ಲರೂ ಒಟ್ಟಾಗಿ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀ ರಾಮ ದರ್ಶನವನ್ನು ಪಡೆದು ದೇಶದ ಪ್ರಗತಿ ಮತ್ತು ಎಲ್ಲಾ ಮಾನವಕುಲದ ಕಲ್ಯಾಣಕ್ಕಾಗಿ ಪ್ರಾರ್ಥಿಸಿದೆವು. ಭಗವಾನ್ ಶ್ರೀ ರಾಮಚಂದ್ರ  ಎಲ್ಲರಿಗೂ ಅನುಗ್ರಹಿಸಲಿ. ಜೈ ಶ್ರೀ ರಾಮ್” ಎಂದು ಎಕ್ಸ್ ಪೋಸ್ಟ್ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ”ರಾಮ್ ಲಲ್ಲಾನಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ನಾನು ವರ್ಣಿಸಲಾಗದ ಶಾಂತತೆಯನ್ನು ಅನುಭವಿಸಿದೆ..ಪ್ರತಿದಿನ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ ಮತ್ತು ಜನರು ಸಾಗಿಸುವ ಪ್ರೀತಿ ಮತ್ತು ಭಕ್ತಿಯನ್ನು ನೋಡುವುದು ನಿಜಕ್ಕೂ ಹೃದಯಸ್ಪರ್ಶಿಯಾಗಿದೆ. ಎಲ್ಲರ ಒಳಿತಿಗಾಗಿ ನಾನು ಪ್ರಾರ್ಥಿಸಿದ್ದೇನೆ” ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next