Advertisement

ಕೋವಿಡ್ ನಿರ್ಮೂಲನೆಗೆ ಸದೃಢರಾಗಿ

02:36 PM Aug 16, 2020 | Suhan S |

ಶಿಡ್ಲಘಟ್ಟ: ಕೋವಿಡ್ ಸೋಂಕು ನಿಯಂತ್ರಿಸಲು ದೈಹಿಕ, ಮಾನಸಿಕವಾಗಿ ಸದೃಢರಾಗಬೇಕೆಂದು ಶಾಸಕ ವಿ. ಮುನಿಯಪ್ಪ ಸಲಹೆ ನೀಡಿದರು.

Advertisement

ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ಜನರ ನೆಮ್ಮದಿ ಕೆಡಿಸಿರುವ ಕೋವಿಡ್ ಸೋಂಕಿಗೆ ಲಸಿಕೆ ಕಂಡುಹಿಡಿಯುವ ಪ್ರಯತ್ನ ವಿಜ್ಞಾನಿಗಳಿಂದ ಆಗುತ್ತಿದೆ. ಆದರೂ, ಸೋಂಕಿನಿಂದ ಮಾನಸಿಕವಾಗಿ ಆತ್ಮಸ್ಥೈರ್ಯ ಕಳೆದುಕೊಂಡು, ಬೇರೆ ರೀತಿಯ ಕಾಯಿಲೆಗಳಿಂದ ಮೃತರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸರ್ಕಾರದ ನಿರ್ದೇಶನ, ಆರೋಗ್ಯ ಇಲಾಖೆಯ ಸಿಬ್ಬಂದಿ ನೀಡುವ ಸಲಹೆ ಮತ್ತು ಸೂಚನೆಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿ, ಆರೋಗ್ಯವಂತ ಸಮಾಜವವನ್ನು ನಿರ್ಮಿಸಿ ಕೋವಿಡ್ ಮುಕ್ತ ಮಾಡಬೇಕೆಂದು ಮನವಿಮಾಡಿದರು. ತಹಶೀಲ್ದಾರ್‌ ಕೆ.ಅರುಂಧತಿ ಧ್ವಜರೋಹಣ ನೆರವೇರಿಸಿದರು.

ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಪಡೆದವರು, ಆರೋಗ್ಯ ಇಲಾಖೆ ಸೇರಿ ಕೋವಿಡ್ ವಾರಿಯರ್ಸ್‌ಗಳಿಗೆ ಶಾಸಕರು ಸನ್ಮಾನಿಸಿದರು. ಬಿಇಒ ಆರ್‌.ಶ್ರೀನಿವಾಸ್‌, ತಾಪಂ ಅಧ್ಯಕ್ಷ ಎಂ.ಕೆ.ರಾಜಶೇಖರ್‌, ಇಒ ಬಿ.ಶಿವ ಕುಮಾರ್‌, ನಗರಸಭಾ ಪೌರಾಯುಕ್ತ ಶ್ರೀನಿವಾಸ್‌, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎ.ನಾಗರಾಜ್‌, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್‌.ಸುಬ್ಟಾರೆಡ್ಡಿ, ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ, ತಾಪಂ ಸದಸ್ಯೆ ಪಂಕಜ ನಿರಂಜನ್‌, ಸಿಡಿಪಿಒ ನಾಗವೇಣಿ, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next