Advertisement

ಅತ್ಯುತ್ತಮಶಿಕ್ಷಕ ಪ್ರಶಸ್ತಿಪುರಸ್ಕೃತ ಡಾ|ಪ್ರಶಾಂತ ಶೆಟ್ಟಿಗೆಸಮ್ಮಾನ

03:51 PM Sep 17, 2018 | Team Udayavani |

ಬೆಳ್ತಂಗಡಿ: ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಉಜಿರೆ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲ, ಮುಖ್ಯ ವೈದ್ಯಾಧಿಕಾರಿ ಡಾ| ಪ್ರಶಾಂತ ಶೆಟ್ಟಿ ಅವರನ್ನು ಉಜಿರೆ ಪ್ರಕೃತಿ ಚಿಕಿತ್ಸಾ ಕಾಲೇಜಿನಲ್ಲಿ ಎಸ್‌ಡಿಎಂ ಎಜ್ಯುಕೇಶನ್‌ ಸೊಸೈಟಿಯ ವತಿಯಿಂದ ಸಮ್ಮಾನಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಸ್ಥಾಪಕ ಮುಖ್ಯ ವೈದ್ಯಾಧಿಕಾರಿ ಬೆಂಗಳೂರಿನ ಡಾ| ವೈ. ರುದ್ರಪ್ಪ, ಯೋಗ ವಿಜ್ಞಾನ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಗೆ ಉಜಿರೆಯಲ್ಲಿರುವ ಎಸ್‌ ಡಿಎಂ ಪ್ರಕೃತಿ ಚಿಕಿತ್ಸಾ-ಯೋಗ ವಿಜ್ಞಾನಗಳ ಕಾಲೇಜು ಹಾಗೂ ಆಸ್ಪತ್ರೆ ದೇಶಕ್ಕೆ ಮಾದರಿ ಸಂಸ್ಥೆಯಾಗಿದೆ. ಡಾ| ಪ್ರಶಾಂತ ಶೆಟ್ಟಿ ಅವರು ಆದರ್ಶ ಶಿಕ್ಷಕ, ದಕ್ಷ ಆಡಳಿತಗಾರರಾಗಿದ್ದು, ಅವರಲ್ಲಿ ಉತ್ತಮ ನಾಯಕತ್ವ ಗುಣ ಹಾಗೂ ಕೌಶಲವಿದೆ ಎಂದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಸ್ಥಳದ ಡಿ. ಹರ್ಷೇನ್ದ್ರ ಕುಮಾರ್‌ ಮಾತನಾಡಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಅವರು ಡಾ| ಪ್ರಶಾಂತ್‌ ಅವರನ್ನು ಅಭಿನಂದಿಸಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್‌. ಪ್ರಭಾಕರ್‌ ಅಧ್ಯಕ್ಷತೆ ವಹಿಸಿದ್ದರು. ಡಾ| ನಂದೀಶ್‌, ಬೆಂಗಳೂರಿನ ಡಾ| ನವೀನ್‌, ನೇಪಾಳದ ವಿದ್ಯಾರ್ಥಿ ಮೋಹನ್‌ ಅಭಿಪ್ರಾಯ ತಿಳಿಸಿದರು.

ಡಾ| ಪ್ರಶಾಂತ ಶೆಟ್ಟಿ ಅವರು ಸಮ್ಮಾನಕ್ಕೆ ಕೃತಜ್ಞತೆ ವ್ಯಕ್ತಪಡಿಸಿ, ಪೂಜ್ಯ ಹೆಗ್ಗಡೆ ಅವರ ಆಶೀರ್ವಾದ ಮತ್ತು ಆಡಳಿತ ಮಂಡಳಿಯ ನಿರಂತರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ಉನ್ನತ ಸಾಧನೆ ಮಾಡಲು ಸಾಧ್ಯವಾಯಿತು ಎಂದರು. ಡಾ| ದೀಪಿಕಾ ಪ್ರಶಾಂತ್‌ ಶೆಟ್ಟಿ, ಡಾ| ಶಿವಪ್ರಸಾದ್‌ ಶೆಟ್ಟಿ, ಡಾ| ಸುಜಾತಾ, ಡಾ| ಜಾಸ್ಮಿನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next