Advertisement
ಸಿರಿಗೆರೆ ವಿದ್ಯಾಸಂಸ್ಥೆಯ ವಿವಿಧ ಶಾಲಾ-ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ನರ್ಸರಿಯಿಂದ ಹಿಡಿದು ಪದವಿ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಜಾನಪದ ಕಲೆಗಳ ರಸದೌತಣ ಉಣ ಬಡಿಸಿದರು. ನೋಡುಗರು ಮಂತ್ರಮುಗ್ಧರಾಗುವಂತೆ ನೃತ್ಯ ಪ್ರದರ್ಶಿಸಿದರು. ಬಹು ದಿನಗಳ ನಂತರ ಒಂದೊಳ್ಳೆಯ ಜಾನಪದದ ಸಿರಿಯ ಸಂಭ್ರಮ ಅನುಭವಿಸುವ ಅವಕಾಶ ಮಾಡಿಕೊಟ್ಟರು. ಮೈಸೂರು ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಬೀಸು ಕಂಸಾಳೆ, ಗಂಡುಮೆಟ್ಟಿನ ಕಲೆ ಎಂದೇ ಪರಿಗಣಿಸುವ ಡೊಳ್ಳು ಕುಣಿತ, ತುಳುನಾಡಿನ ಬುಡಕಟ್ಟು ಜನರ ಕಂಗೀಲು ನೃತ್ಯ, ಕೊಡಗಿನ ಪ್ರಮುಖ ಜನಪದ ನೃತ್ಯ ಉಮ್ಮತ್ತಾಟ್, ಶೈವ ಸಂಪ್ರದಾಯದ ವೀರರಸ ಪ್ರಧಾನದ ವೀರಗಾಸೆ, ಪ್ರಾಚೀನ ಸಾಂಪ್ರದಾಯಿಕ ಕ್ರೀಡೆ ಮಲ್ಲಕಂಬ, ಲಂಬಾಣಿ ಜನಾಂಗದ ಸಂಪ್ರದಾಯ ನೃತ್ಯ… ಹೀಗೆ ಪ್ರತಿಯೊಂದನ್ನು ವಿದ್ಯಾರ್ಥಿಗಳು ಚಿತ್ತಾಕರ್ಷಕವಾಗಿ ಪ್ರದರ್ಶಿಸಿದರು.
ಮಗಳನ್ನ ಗಂಡ ಮನೆಗೆ ಕಳಿಸುವಾಗ, ಇತರೆ ಶುಭ ಸಂದರ್ಭದಲ್ಲಿ ಹಾಡುವ ಸೋಬಾನೆ… ಎಲ್ಲವೂ ಕಾಣೆಯಾಗುತ್ತಿವೆ. ಇಂತಹ ವಾತಾವರಣದಲ್ಲಿ
ಜಾನಪದ ಕಲೆಯ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸಿರಿಗೆರೆ ಕಲಾಸಂಘದ ಜಾನಪದ ಸಿರಿ ಸಂಭ್ರಮ ಕಾರ್ಯಕ್ರಮವನ್ನ ದಾವಣಗೆರೆಯಲ್ಲಿ ಏರ್ಪಡಿಸಿರುವುದು ಸಂತೋಷದ ವಿಚಾರ. ಜಾನಪದ ಕಲೆಯ ಸವಿಯುವ ಜೊತೆಗೆ ಉಳಿಸಿ, ಬೆಳೆಸುವಂತಾಗಬೇಕು ಎಂದು ಆಶಿಸಿದರು. ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಹಿಂದಿನ ಚಲನಚಿತ್ರಗಳಲ್ಲಿ ಜಾನಪದ ಹಾಡು, ನೃತ್ಯ ಇರುತ್ತಿದ್ದವು. ಈಗಿನ ಚಲನಚಿತ್ರಗಳಲ್ಲಿ ಹಾಡು, ಕುಣಿತ ನೋಡಿದರೆ ಯಾವುದೇ ತಿರುಳೇ ಇರುವುದಿಲ್ಲ. ಸಿರಿಗೆರೆ ವಿದ್ಯಾಸಂಸ್ಥೆಯ ಮಕ್ಕಳು ದಾವಣಗೆರೆಯಲ್ಲೂ ಜಾನಪದ ಕಲೆಯ ಪ್ರದರ್ಶನ ನೀಡುತ್ತಿರುವುದು ಸಂತೋಷದ ವಿಚಾರ ಎಂದರು. ಸಾನ್ನಿಧ್ಯ ವಹಿಸಿದ್ದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇಶದ ಸಂಸ್ಕೃತಿಯ ಪ್ರತೀಕವಾಗಿರುವ ಕಲಾ ಸಂಪತ್ತು ಅನೇಕ ಕಾರಣದಿಂದ ಕೀಣಿಸುತ್ತಿದೆ. ನದಿ, ನೀರು, ಕೆರೆಗಳು ಬತ್ತಿ ಗಿತ್ತಿರುವಂತೆಯೇ ಕಲಾ ಸಂಪತ್ತು ಬತ್ತಿ ಹೋಗುತ್ತಿದೆ. ತಾನಾಗಿಯೇ ಪ್ರವರ್ಧಮಾನಕ್ಕೆ ಬಂದಿರುವ ಗ್ರಾಮೀಣ ಜನರ ನೋವು, ನಲಿವು, ಸಂತೋಷ. ಸಂಭ್ರಮದ ಪ್ರತೀಕವಾಗಿರುವ
ಜಾನಪದ ಕಲೆಯ ಉಳಿಸಿ, ಬೆಳಸುವ ನಿಟ್ಟಿನಲ್ಲಿ ಸಿರಿಗೆರೆ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವ ಗ್ರಾಮೀಣ ಭಾಗದ 350ಕ್ಕೂ ವಿದ್ಯಾರ್ಥಿಗಳು ತರಬೇತಿ ಪಡೆದು, ಪ್ರದರ್ಶನ ನೀಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
Related Articles
Advertisement
ಹಾವು ಬಿಡಲಿಲ್ಲ…ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಯಾವುದೇ ಸಭೆ, ಸಮಾರಂಭದಲ್ಲಾಗಲಿ ಹಾವು ಬಿಡುವುದು ಸಾಮಾನ್ಯ. ಅದೇ ರೀತಿ ಶಾಸಕ ಶಾಮನೂರು ಶಿವಶಂಕರಪ್ಪ ಸಭೆ, ಸಮಾರಂಭಕ್ಕೆ ತಡವಾಗಿ ಬರುವುದು ಸಾಮಾನ್ಯ. ರವೀಂದ್ರನಾಥ್ ಹಾವು ಬಿಡದೇ ಇರುವುದು, ಶಾಮನೂರು
ಶಿವಶಂಕರಪ್ಪ ಮೊದಲೇ ಆಗಮಿಸಿದ್ದು ಇಂದಿನ ಕಾರ್ಯಕ್ರಮದ ವಿಶೇಷ ಎಂದು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿಶ್ಲೇಷಿಸಿದರು.