Advertisement

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

11:55 PM Apr 30, 2024 | Team Udayavani |

ಗೋಕಾಕ/ಗಂಗಾವತಿ: ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕದ ರೀತಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ. ಸುಳ್ಳು ಜಾಹೀರಾತು ನೀಡಿ ಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

Advertisement

ಗೋಕಾಕ ಹಾಗೂ ಗಂಗಾವತಿಯಲ್ಲಿ ಪ್ರಜಾಧ್ವನಿ-2 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಲಿತರ ಬಗ್ಗೆ ಪ್ರಧಾನಿ ಮೋದಿ ಅಪಾರವಾಗಿ ಮಾತನಾಡುತ್ತಿದ್ದಾರೆ. ಅವರ ಬಗ್ಗೆಕಾಳಜಿ ಇದ್ದರೆ ಕೇಂದ್ರ ಮತ್ತು ಬಿಜೆಪಿ ಸರಕಾರ ಇರುವ ರಾಜ್ಯಗಳಲ್ಲಿ ದಲಿತ ಪರ ಕಾಯ್ದೆಗಳನ್ನು ಜಾರಿ ಮಾಡಲಿ. ಸುಮ್ಮನೇ ಬಾಯಿ ಮಾತಿನಲ್ಲಿ ದಲಿತರ ಪರ ಮಾತನಾಡಿದರೆ ಸಾಲದು. ಕಾಂಗ್ರೆಸ್‌ ಅಧಿ ಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕಾರ್ಯ ನಿಂತಿಲ್ಲ, ಸರಕಾರಿ ಅ ಧಿಕಾರಿಗಳಿಗೆ ಸಂಬಳ ನಿಲ್ಲಿಸಿಲ್ಲ, ಗ್ಯಾರಂಟಿ ನಿಲ್ಲಿಸಿಲ್ಲ. ಸರಕಾಖಜಾನೆಯೂ ಖಾಲಿ ಆಗಿಲ್ಲ. ಆದರೆ ಪ್ರಧಾನಿ ಮೋದಿ ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದರು.

ರಾಹುಲ್‌ ಗಾಂಧಿ 25 ಗ್ಯಾರಂಟಿಗಳನ್ನು ನೀಡುವ ಯೋಜನೆ ಮಾಡಿದ್ದಾರೆ. ಪಕ್ಷ ಅ ಧಿಕಾರಕ್ಕೆ ಬಂದ ತಕ್ಷಣ ರಾಹುಲ್‌ ಮತ್ತು ಮಲ್ಲಿಕಾರ್ಜುನ ಖರ್ಗೆ ಜಾರಿಗೆ ತರುತ್ತಾರೆ. ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿದು 10 ವರ್ಷಗಳಾದರೂ ಸಕಾರಾತ್ಮಕ ಬದಲಾವಣೆ ಮಾಡುವಲ್ಲಿ ವಿಫಲವಾಗಿದ್ದಾರೆ. ಬಸವಣ್ಣನವರ ನಾಡಿನವರಾದ ನಾವು ನುಡಿದಂತೆ ನಡೆಯುತ್ತಿದ್ದೇವೆ ಎಂದರು.

ನರೇಂದ್ರ ಮೋದಿ ಈ ದೇಶದ ಚುಕ್ಕಾಣಿ ಹಿಡಿದು 10 ವರ್ಷಗಳು ಆದರೂ ಸಹ ಬದಲಾವಣೆ ತರುವಲ್ಲಿ ವಿಫಲವಾಗಿದ್ದಾರೆ. ಕಾಂಗ್ರೆಸ್‌ ಪಕ್ಷದ ಮನಮೋಹನ್‌ ಸಿಂಗ್‌ ಪ್ರಧಾನಿ ಆಗಿದ್ದಾಗ ಆರ್‌ಟಿಐ, ಆಹಾರ ಭದ್ರತೆ ಕಾಯ್ದೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರು. ನರೇಂದ್ರ ಮೋದಿ ಅವರು ಹತ್ತು ವರ್ಷ ಅಧಿಕಾರ ನಡೆಸಿದರೂ ಸಹ ಕಪ್ಪು ಹಣ ಇನ್ನೂ ಯಾರ ಮನೆಗೆ ಬರಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಆಗಲಿಲ್ಲ. ಯುವಕರಿಗೆ ಕೆಲಸ ಕೊಡಿ ಎಂದಾಗ ಪಕೋಡಾ ಮಾರಲು ಹೋಗಿ ಎಂದ ಮೋದಿ ಮತ್ತೆ ಪ್ರಧಾನಿ ಆಗಬಾರದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next