Advertisement
ತಾ| ಪ್ರೌಢಶಿಕ್ಷಕರ ಸಂಘದ ನೇತೃತ್ವದಲ್ಲಿ ತಾ| ಉಪನ್ಯಾಸಕರ ಸಂಘ, ರಾಜ್ಯ ಸರಕಾರಿ ನೌಕರರ ಸಂಘದ ಸಹಭಾಗಿತ್ವದಲ್ಲಿ ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಬಿ.ಎಡ್. ಪದವಿ ಕಡ್ಡಾಯಗೊಳಿಸಿ ಎಂದು ಏಕಾಏಕಿ ಹೇಳುವುದರಲ್ಲಿ ಅರ್ಥವಿಲ್ಲ. ಹಾಗಾದರೆ ಅಷ್ಟು ವರ್ಷ ಬೋಧಿಸಿದ್ದು ವ್ಯರ್ಥವೇ? ಜೀವನದ ಸಂಧ್ಯಾ ಕಾಲದಲ್ಲಿ ಆರ್ಥಿಕ ಭದ್ರತೆ ಸಿಗದೆ, ಕೈಕಾಲು ಗಟ್ಟಿ ಇರುವಾಗಲೇ ಪಿಂಚಣಿ ಸಿಗುವುದು ಸಮ್ಮತವೇ? ಶಾಸಕರಿಗೂ ಪಿಂಚಣಿ ಸಿಗುವಾಗ ಶಿಕ್ಷಕರಿಗೆ ಏಕಿಲ್ಲ? ಹೊಸ ಪಿಂಚಣಿ ಮಸೂದೆ ಶಿಕ್ಷಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್. ಮಾತನಾಡಿ, ಶಿಕ್ಷಕರ ನಾಡಿಮಿಡಿತ ಅರ್ಥ ಮಾಡಿಕೊಂಡಿರುವ ಭೋಜೇಗೌಡರು ಶಿಕ್ಷಕರ ಸಮಸ್ಯೆಗೆ ನ್ಯಾಯ ಒದಗಿಸುತ್ತಾರೆ ಎಂಬ ಭರವಸೆ ಇದೆ ಎಂದರು.
Related Articles
Advertisement
ಬೇಡಿಕೆ ಈಡೇರಿಸಿಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಪುತ್ತೂರು ಶಾಖೆಯ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಮಾತನಾಡಿದರು.
ತಾಲೂಕು ಯುವಸಬಲೀಕರಣ ಹಾಗೂ ಕ್ರೀಡಾಧಿಕಾರಿ ಮಾಮಚ್ಚನ್ ಎಂ. ಮಾತನಾಡಿ, ಭೋಜೇಗೌಡರು ಅಧಿಕಾರ ಇಲ್ಲದೆಯೂ ಸರಕಾರಿ ನೌಕರರ ಸಂಘಕ್ಕೆ ನೆರವಾಗುತ್ತಿದ್ದರು. 20 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಆಗುತ್ತಿಲ್ಲ. ವೃಂದ ಮತ್ತು ನೇಮಕಾತಿಯಲ್ಲಿ ತಿದ್ದುಪಡಿಯೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕರನ್ನಾಗಿಸುವ ಬೇಡಿಕೆಯನ್ನು ಸರಕಾರದ ಮುಂದಿಡಲಾಗಿದೆ. ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ದುರಸ್ತಿ ಬಗ್ಗೆ ಹಾಗೂ ಅಂತರ್- ಜಿಲ್ಲೆಯಿಂದ ಆಗಮಿಸುವ ಶಿಕ್ಷಕರನ್ನು ಮರಳಿ ಅವರ ಜಿಲ್ಲೆಗೆ ನಿಯುಕ್ತಿಗೊಳಿಸಲು ಪ್ರಾಶಸ್ತ್ಯ ನೀಡಬೇಕೆಂದು ಮನವಿ ಮಾಡಿದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್, ಟಿಜಿಟಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹರಿಪ್ರಸಾದ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ, ತಾಲೂಕು ಉಪನ್ಯಾಸಕರ ಸಂಘದ ಕಾರ್ಯದರ್ಶಿ ಹರಿಕೃಷ್ಣ ಬೈಲಾಡಿ ಉಪಸ್ಥಿತರಿದ್ದರು. ಪ್ರೌಢಶಾಲಾ ಸಹಶಿಕ್ಷಕಿ ಅನ್ನಪೂರ್ಣಾ ಪ್ರಾರ್ಥಿಸಿದರು. ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸದಸ್ಯ ಉಮಾಶಂಕರ್ ಸ್ವಾಗತಿಸಿ, ಎನ್‌ಪಿಎಸ್ ತಾಲೂಕು ಘಟಕದ ಅಧ್ಯಕ್ಷ ದಿನೇಶ್ ಮಾಚಾರ್ ವಂದಿಸಿದರು. ಕೆಯ್ಯೂರು ಪ್ರೌಢಶಾಲೆ ಸಹಶಿಕ್ಷಕ ವಿನೋದ್ ಕುಮಾರ್ ನಿರೂಪಿಸಿದರು. ಶಿಕ್ಷಕರಿಗೇಕಿಲ್ಲ?
ಜೀವನದ ಸಂಧ್ಯಾ ಕಾಲದಲ್ಲಿ ಆರ್ಥಿಕ ಭದ್ರತೆ ಸಿಗದೆ, ಕೈಕಾಲು ಗಟ್ಟಿ ಇರುವಾಗಲೇ ಪಿಂಚಣಿ ಸಿಗುವುದು ಸಮ್ಮತವೇ? ಶಾಸಕರಿಗೂ ಪಿಂಚಣಿ ಸಿಗುವಾಗ ಶಿಕ್ಷಕರಿಗೆ ಏಕಿಲ್ಲ? ಹೊಸ ಪಿಂಚಣಿ ಮಸೂದೆ ಶಿಕ್ಷಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
– ಎಸ್.ಎಲ್. ಭೋಜೇಗೌಡ
ವಿಧಾನ ಪರಿಷತ್ ಸದಸ್ಯರು