ಗುರುಕಂಬಳ: ಗುರುಗಳು ವಿದ್ಯಾರ್ಥಿಗಳಿಗೆ ಅಕ್ಕರೆ ತೋರಿದರೆ ಸಕ್ಕರೆಯ ಜೀವನ ಅವರದಾಗುತ್ತದೆ. ಇದರಿಂದ ಗುರು, ಶಿಷ್ಯರ ಸಂಬಂಧ ಪರಿ ಶುದ್ಧವಾಗಿ, ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಭವಿಷ್ಯದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎ. ಮೊದಿನ್ ಬಾವಾ ಹೇಳಿದರು.
ಇಲ್ಲಿನ ಎ.ಕೆ.ಯು. ಪ್ರೌಢಶಾಲಾ ಸಭಾ ಭವನದಲ್ಲಿ, ಮುಖ್ಯೋಪಾಧ್ಯಾಯರಾಗಿ 37 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಓಸ್ವಾಲ್ಡ್ ರೊಡ್ರಿಗಸ್ ಅವರಿಗೆ ಬೀಳ್ಕೊಡುಗೆ ಹಾಗೂ ಸಮ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಓಸ್ವಾಲ್ಡ್ ರೊಡ್ರಿಗಸ್ ಮತ್ತು ಸಿಲ್ವಿಯಾ ರೊಡ್ರಿಗಸ್ ದಂಪತಿಯನ್ನು ಗೌರವಿಸಲಾಯಿತು.
ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್, ಆಡಳಿತ ಮಂಡಳಿಯ ಬಾಜಿ ಅಬ್ದುಲ್ ಶುಕೂರ್, ಉಮರ್ ಸಾಹೇಬ್, ಹಳೆವಿದ್ಯಾರ್ಥಿ ಗಳಾದ ಅಬಕಾರಿ ಇಲಾಖೆಯ ಡೆಪ್ಯುಟಿ ಸುಪರಿಂಟೆಂಡೆಂಟ್ ಅಮರನಾಥ ಭಂಡಾರಿ, ಉದ್ಯಮಿ ಕಿರಣ್ ಮಾರ್ಲ, ಅವರ್ ಲೇಡಿ ಆಫ್ ಪೊಂಪೈ ಶಾಲಾ ಮುಖ್ಯೋಪಾಧ್ಯಾಯ ಮಹೇಶ್ ಶೆಟ್ಟಿ, ಉದ್ಯಮಿ ಎ.ಟಿ. ಕಬೀರ್ ಅವರು ಗುರುನಮನ ಸಲ್ಲಿಸಿದರು.
ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್, ಸದಸ್ಯರಾದ ಜಿ. ಸುನಿಲ್, ಸಚಿನ್ ಅಡಪ, ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಎಂ., ಉಪಾಧ್ಯಕ್ಷ ಆರ್.ಎಸ್. ಝಕೀರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿನೋದ್ ಮಾಡ, ಪಂಚಾಯತ್ ಸದಸ್ಯ ಶಮೀರ್, ಕೆಡಿಪಿ ಸದಸ್ಯ ಗಣೇಶ್ ಪೂಜಾರಿ, ಶಿಕ್ಷಣ ಸಂಯೋಜಕರಾದ ಹಿಲ್ಡಾ ಕ್ಲೆಮೆನ್ಸಿಯಾ ಪಿಂಟೋ, ಐ. ಉಸ್ಮಾನ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್, ಸದಸ್ಯ ಆಹಮದ್ ಬಾವಾ, ನಿವೃತ್ತ ಶಿಕ್ಷಕ ಮಾಧಮಯ್ಯ ಎನ್.ಎಸ್., ಜಬ್ಟಾರ್, ಖಾದರ್ ಸೂರಲ್ಪಾಡಿ, ಅಭಿಮಾನಿಗಳಾದ ರೆಹಮಾನ್ ಅಡೂxರು, ರಮೇಶ್ ರಾವ್ ಕೈಕಂಬ, ವಿದ್ಯಾರ್ಥಿಗಳ ಹೆತ್ತವರು, ಶಿಕ್ಷಕ, ಶಿಕ್ಷಕೇತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಅರುಣ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ಲಿಲ್ಲಿ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ಪೂರ್ಣಿಮಾ ಬಿ. ವಂದಿಸಿದರು.