Advertisement

ಗೋವಿನ ಹಾಲು ಕರೆದ ವಿಶ್ವ ಖ್ಯಾತ ಟೆನಿಸಿಗ ಫೆಡರರ್‌

05:55 AM Jul 20, 2017 | Team Udayavani |

ನವದೆಹಲಿ: ವಾರಗಳ ಹಿಂದೆ ಮರಿನ್‌ ಸಿಲಿಚ್‌ರನ್ನು ಮಣಿಸಿ ವಿಂಬಲ್ಡನ್‌ ಸಿಂಗಲ್ಸ್‌ ಚಾಂಪಿಯನ್‌ ಆಗಿದ್ದ ವಿಶ್ವ ವಿಖ್ಯಾತ ಟೆನಿಸಿಗ ಸ್ವಿಜರ್ಲೆಂಡ್‌ನ‌ ರೋಜರ್‌ ಫೆಡರರ್‌ ಗೋವು ಪ್ರಿಯ. ಹೌದು, ಗೋವು ಎಂದರೆ ಸ್ವಿಸ್‌ ಆಟಗಾರನಿಗೆ ಭಾರೀ ಪ್ರೀತಿ, ಅಭಿಮಾನವಂತೆ. ಈ ವಿಷಯವನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್‌ ಟ್ವೀಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ.

Advertisement

ಚಾಂಪಿಯನ್‌ ಆಟಗಾರ ವಿಂಬಲ್ಡನ್‌ ಗೆದ್ದಿದ್ದಕ್ಕೆ ಸೆಹ್ವಾಗ್‌ ಟ್ವೀಟರ್‌ನಲ್ಲಿ ಫೆಡರರ್‌ ಗೋವಿನ  ಹಾಲು ಕರೆಯುತ್ತಿರುವ ಅಪರೂಪದ ಫೋಟೋವೊಂದನ್ನು ಪ್ರಕಟಿಸಿದ್ದಾರೆ. “ದಂತಕಥೆ ರೋಜರ್‌ ಫೆಡರರ್‌ ಗೋವಿನ ಪ್ರೀತಿ ಇದು. ನೋಡಲು ಬಹಳ ಸಂತೋಷವಾಗುತ್ತಿದೆ’ ಎಂದು ಪ್ರಕಟಿಸಿದ್ದಾರೆ. ಇದಕ್ಕೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳಿಂದ ಪ್ರತಿಕ್ರಿಯೆ ಬಂದಿದೆ. 

ಲಕ್ಷಾಂತರ ಲೈಕ್ಸ್‌, ಕಾಮೆಂಟ್ಸ್‌ ಬಿದ್ದಿದೆ.  2013ರಲ್ಲಿ ಸ್ವಿಸ್‌ ಓಪನ್‌ ಸಂಘಟಕರು  ತಡವಾಗಿ ಕೂಟಕ್ಕೆ ಆಗಮಿಸಿದ್ದಕ್ಕೆ ಕ್ರೀಡಾಂಗಣದಲ್ಲೇ ಫೆಡರರ್‌ಗೆ ಉಡುಗೊರೆಯಾಗಿ ಗೋವನ್ನು ನೀಡಿದ್ದರು. ಇದನ್ನು ಫೆಡ್‌ ಅತ್ಯಂತ ಚೆನ್ನಾಗಿ ನೋಡಿಕೊಂಡರು.  ಜೂಲಿಯೆಟ್‌ ಎಂದು ಹೆಸರು ಕೂಡ ಇಟ್ಟಿದ್ದಾರೆ. ಬೇಸರವಾದಾಗಲೆಲ್ಲ ಇದರ ಬಳಿ ತೆರಳಿ ಸ್ವಿಸ್‌ ಆಟಗಾರ

Advertisement

Udayavani is now on Telegram. Click here to join our channel and stay updated with the latest news.

Next