Advertisement

ಫೆ. 21ರಂದು ಫ‌ರ್ಹಾನ್‌ ಅಖ್ತರ್‌- ಮಾಡೆಲ್‌ ಶಿಬಾನಿ ದಂಡೇಕರ್‌ ವಿವಾಹ

05:49 PM Feb 04, 2022 | Team Udayavani |

ನವದೆಹಲಿ: ಹಿಂದಿ ಚಿತ್ರರಂಗದ ಹಿರಿಯ ಸಾಹಿತಿ ಜಾವೇದ್‌ ಅಖ್ತರ್‌ ಪುತ್ರ, ನಟ- ನಿರ್ದೇಶಕ ಫ‌ರ್ಹಾನ್‌ ಅಖ್ತರ್‌, ನಟಿ ಹಾಗೂ ಮಾಡೆಲ್‌ ಶಿಬಾನಿ ದಂಡೇಕರ್‌ ಅವರಿಬ್ಬರು ಪರಸ್ಪರ ವಿವಾಹವಾಗುತ್ತಿರುವ ಬಗ್ಗೆ ಎದ್ದಿದ್ದ ಗಾಳಿಸುದ್ದಿಗಳಿಗೆ ಅಧಿಕೃತ ಮೊಹರು ಬಿದ್ದಿದೆ.

Advertisement

ಫೆ. 21ರಂದು ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮುಂಬೈನಲ್ಲೇ ವಿವಾಹ ಜರುಗಲಿದೆ.

ವಿವಾಹದ ಎಲ್ಲಾ ತಯಾರಿಗಳ ಜವಾಬ್ದಾರಿಯನ್ನು ವೆಡ್ಡಿಂಗ್‌ ಪ್ಲಾನರ್‌ ಸಂಸ್ಥೆಯೊಂದಕ್ಕೆ ನೀಡಲಾಗಿದೆ ಎಂದು ಖುದ್ದು ಜಾವೇದ್‌ ಅಖ್ತರ್‌ ತಿಳಿಸಿದ್ದಾರೆ.

ಇದನ್ನೂ ಓದಿ:3 ಸಾವಿರ ಹುದ್ದೆಗಳ ಭರ್ತಿಗೆ ನೋಟಿಫಿಕೇಷನ್: ಸಚಿವ ಎಸ್.ಟಿ. ಸೋಮಶೇಖರ್

ಪ್ರಸ್ತುತ ಕೊರೊನಾ ಪರಿಸ್ಥಿತಿಯಲ್ಲಿ ದೊಡ್ಡಮಟ್ಟದ ವಿವಾಹ ಸಮಾರಂಭ ಏರ್ಪಡಿಸಲು ಸಾಧ್ಯವಿಲ್ಲ. ಹಾಗಾಗಿ, ಆಪ್ತ ಸಂಬಂಧಿಕರು, ಸ್ನೇಹಿತರಿಗಷ್ಟೇ ವಿವಾಹಕ್ಕೆ ಆಮಂತ್ರಣವಿರುತ್ತದೆ” ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next