Advertisement

ವಿರೋಧಕ್ಕೆ ಹೆದರಿದರೆ ಪರಿಹಾರ ಸಾಧ್ಯವೇ?

12:13 PM Mar 11, 2017 | |

ಯಾವುದೋ ಸಣ್ಣ ವಿರೋಧಕ್ಕೆ ಹೆದರಿ, ಬಹಳಷ್ಟು ಜನರಿಗೆ ಉಪಯೋಗವಾಗುತ್ತಿದ್ದ ಯೋಜನೆಯನ್ನು ಸರ್ಕಾರ ಕೈಬಿಡಬಾರದಿತ್ತು ಎಂಬುದು ಬೆಂಗಳೂರಿನ ಕೃಷಿ ವಿವಿ ಕುಲಪತಿ ಶಿವಣ್ಣ ಮತ್ತು ಕಾವೇರಿ ಬಿಇಡಿ ಕಾಲೇಜಿನ ಪ್ರಾಂಶುಪಾಲ ರಾಜೇಶ್‌ ಅವರ ಅಭಿಮತ. ಯೋಜನೆ ವಿರೋಧಿಸುತ್ತಿರುವವರಿಗೆ ಈ ಭಾಗದ ಸಮಸ್ಯೆಯ ಗಂಭೀರತೆ ಅರಿವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

Advertisement

ಬಹುಜನರಿಗೆ ಆಗುತ್ತಿದ್ದ ಅನುಕೂಲ ತಪ್ಪಿತು : ಯಾವುದಾದರೊಂದು ಯೋಜನೆ ಅಥವಾ ಕಾರ್ಯಕ್ರಮ ರೂಪಿಸುವಾಗ, ಅದರಿಂದ ಒಂದು ವರ್ಗಕ್ಕೆ ಅನುಕೂಲ ಮತ್ತೂಂದು ವರ್ಗಕ್ಕೆ ಅನಾನುಕೂಲ ಆಗೇ ಆಗುತ್ತದೆ. ಒಂದು ವರ್ಗಕ್ಕಾಗುವ ತೊಂದರೆಯನ್ನೇ ನೆಪಮಾಡಿಕೊಂಡು ಯೋಜನೆಯನ್ನೇ ಕೈಬಿಡುವುದು ಸರಿಯಲ್ಲ. 

ಹೆಬ್ಟಾಳ ಮಾರ್ಗದಲ್ಲಿ ನಿತ್ಯ ಉಂಟಾಗುವ ಸಂಚಾರದಟ್ಟಣೆಯಿಂದ ವಿದ್ಯಾರ್ಥಿಗಳು ಸೇರಿದಂತೆ ಲಕ್ಷಾಂತರ ಜನ ಸಮಸ್ಯೆ ಎದುರಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಈ ಸಮಸ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಹಾಗಿದ್ದರೆ, ಅಲ್ಲಿನ ಭಾಗದ ಜನರಿಗೆ ಆಗುತ್ತಿರುವ ಅನಾನುಕೂಲಕ್ಕೆ ಪರಿಹಾರ ಏನು?

ಮರಗಳಿಗೆ ಹಾನಿಯಾಗುತ್ತದೆ ಎಂದು ಹೇಳಲಾಗುತ್ತಿದೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ಯೋಜನೆಯನ್ನೇ ಕೈಬಿಡುವುದು ಸಮಂಜಸವಲ್ಲ. ಯಾಕೆಂದರೆ, ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಹೊರದೇಶಗಳ ನಗರಗಳಲ್ಲೆಲ್ಲಾ ವರ್ಟಿಕಲ್‌ ಗಾರ್ಡನ್‌ ಹೆಚ್ಚು ಪ್ರಚಲಿತದಲ್ಲಿದೆ. ಪರಿಸರ ರಕ್ಷಣೆಗೆ ಇಂತಹ ತಂತ್ರಜ್ಞಾನಗಳ ಮೂಲಕ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಮನಸ್ಸು ಮಾಡಬೇಕಿದೆ. ಇಲ್ಲವಾದರೆ ಬದಲಾವಣೆಗಳೇ ಸಾಧ್ಯವಿಲ್ಲ.

ಉಕ್ಕಿನ ಸೇತುವೆ ಸಾಧ್ಯವಾಗದಿದ್ದರೆ, ಸರ್ಕಾರ ಆ ಮಾರ್ಗದಲ್ಲಿ ವಾಹನದಟ್ಟಣೆಯಿಂದ ಮುಕ್ತಿ ನೀಡಲು ಇನ್ನಾವುದಾದರೂ ಸೇತುವೆ, ಮೆಟ್ರೋ ಸೇರಿದಂತೆ ಯಾವುದಾದರೂ ಪರ್ಯಾಯ ಕೊಡಬೇಕು. ಸೇತುವೆ ಜತೆಗೆ ಇತರ ಪರ್ಯಾಯಗಳೂ ಸರ್ಕಾರದ ಮುಂದಿವೆ. ಆ ನಿಟ್ಟಿನಲ್ಲೂ ಯೋಚನೆ ಮಾಡಬೇಕು. ಇಲ್ಲವಾದರೆ ಭವಿಷ್ಯದಲ್ಲಿ ಈ ಸಮಸ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ. 

Advertisement

ಡಾ.ಎಚ್‌. ಶಿವಣ್ಣ, ಕುಲಪತಿ, ಬೆಂಗಳೂರು ಕೃಷಿ ವಿವಿ

Advertisement

Udayavani is now on Telegram. Click here to join our channel and stay updated with the latest news.

Next