Advertisement

ಭಯದ ವಾತಾವರಣ ನಿರ್ಮಾಣ: ಕುಂವೀ

09:11 AM May 21, 2019 | Lakshmi GovindaRaj |

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇಲ್ಲದಂತಾಗಿದೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ಬೇಸರ ವ್ಯಕ್ತಪಡಿಸಿದರು.

Advertisement

ಗಾಂಧಿ ಭವನದಲ್ಲಿ ಶನಿವಾರ ನಡೆದ ತಮ್ಮ ನೂತನ “ಜೈ ಭಜರಂಗಬಲಿ’ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಷ್ಟದ ಬಟ್ಟೆ ತೊಡದ ಮತ್ತು ಇಷ್ಟದ ಆಹಾರ ಸೇವಿಸದ ರೀತಿಯ ಸನ್ನಿವೇಶ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಳೆದ ಐದು ವರ್ಷಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ. ರಾಜಕಾರಣಿಗಳು ಖರೀದಿಯ ಸರಕಾಗಿದ್ದು, ಮತದಾರರನ್ನು ಹರಾಜಿಗೆ ಇರಿಸಲಾಗಿದೆ. ಕೆಲವರಿಗೆ ಇನ್ನೂ ಚುನಾವಣೆಗೆ ನಿಲ್ಲಬೇಕೆಂಬ ಆಸೆಯಿದ್ದು, ಇದು ಆರೋಗ್ಯಕರ ಬೆಳವಣಿಗೆಯಲ್ಲ ಎಂದರು.

ವಿಮರ್ಶಕ ಡಾ.ಸಿ.ಎನ್‌.ರಾಮಚಂದ್ರನ್‌ ಮಾತನಾಡಿ, ಜೈ ಭಜರಂಗಬಲಿ ಕಾದಂಬರಿಯಲ್ಲಿ ಧಾರ್ಮಿಕ, ರಾಜಕೀಯ, ಸಾಮಾಜಿಕ ಹಾಗೂ ಮಾಧ್ಯಮ ರಂಗದ ಅವ್ಯವಸ್ಥೆಯನ್ನು ವಿಡ‌ಂಬನೆಯ ಮೂಲಕ ಬಯಲು ಮಾಡಲಾಗಿದೆ. ಸಂವೇದನಶೀಲ ಲೇಖಕನಿಗೆ ಮಾತ್ರ ವಿಡಂಬನೆಯ ಮೂಲಕ ವ್ಯವಸ್ಥೆಯ ಅವ್ಯವಸ್ಥೆ ಹೊರಹಾಕಲು ಸಾಧ್ಯ ಎಂದು ಹೇಳಿದರು.

ಲೇಖಕ ಎಸ್‌.ದಿವಾಕರ್‌ ಕಾದಂಬರಿ ಕುರಿತು ಮಾತನಾಡಿದರು. ಡಾ.ಬಸವರಾಜ ಕಲ್ಗುಡಿ, ಸಪ್ನ ಬುಕ್‌ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್‌ ಶಾ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next