Advertisement

ಕಡಬದ‌ಲ್ಲಿ ಮಂಗನ ಕಾಯಿಲೆ ಭೀತಿ

09:46 AM Jan 22, 2019 | Team Udayavani |

ಕಡಬ : ರಾಜ್ಯದ ಕೆಲವು ಭಾಗಗಳಲ್ಲಿ ಜೀವ ಬಲಿ ತೆಗೆದುಕೊಂಡು ಜನರಲ್ಲಿ ಭೀತಿ ಹುಟ್ಟಿಸಿರುವ ಮಂಗನ ಕಾಯಿಲೆ ಕಡಬ ಪರಿಸರದಲ್ಲೂ ಹಬ್ಬುವ ಆತಂಕ ಎದುರಾಗಿದೆ. ತಾಲೂಕಿನ ವ್ಯಾಪ್ತಿಯಲ್ಲಿ ಸತ್ತ ಮಂಗಗಳ ಸಂಖ್ಯೆ 6ಕ್ಕೆ ಏರಿದೆ. ಅರಣ್ಯದ ಅಂಚಿನ ಜನ ವಸತಿ ಪ್ರದೇಶಗಳಲ್ಲಿ ಜಾಗೃತಿ ಕರಪತ್ರ ಹಂಚಿರುವ ಆರೋಗ್ಯ ಇಲಾಖೆ, ಜಾಗರೂಕರಾಗಿರುವಂತೆ ಸೂಚನೆ ನೀಡಿದೆ.

Advertisement

ರಾಮಕುಂಜ ಗ್ರಾ.ಪಂ. ವ್ಯಾಪ್ತಿಯ ಹಳೆನೇರೆಂಕಿ ಗ್ರಾಮದ ಕದ್ರದಲ್ಲಿ ಜ. 16ರಂದು ಒಂದು ಮಂಗನ ಶವ ಪತ್ತೆಯಾಗಿ ರುವ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಕುಟ್ರಾಪ್ಪಾಡಿ ಗ್ರಾಮದ ಉಳಿಪ್ಪು, ಕುಂಟೋಡಿ, ಉರುಂಬಿ, ಮೀನಾಡಿಯಲ್ಲಿ ಒಟ್ಟು 4 ಮಂಗಗಳು ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿತ್ತು. ಜ. 20ರಂದು ಕಡಬ ತಾಲೂಕು ವ್ಯಾಪ್ತಿಯ ಬೆಳಂದೂರು ಗ್ರಾಮದ ಕೂಂಕ್ಯದಲ್ಲಿ ಮಂಗನ ಶವ ಪತ್ತೆಯಾಗುವ ಮೂಲಕ ಒಟ್ಟು 6 ಮಂಗಗಳ ಕಳೇಬರಗಳು ಪತ್ತೆಯಾದಂತಾಗಿದೆ.

ಮಂಗಗಳ ಸಾವೇ ಮುನ್ಸೂಚನೆ ಸಾಮಾನ್ಯವಾಗಿ ಮಂಗಗಳು ಸಾಯುವುದೇ ಮಂಗನ ಕಾಯಿಲೆ ಅಥವಾ ಕ್ಯಾಸನೂರು ಕಾಡಿನ ಕಾಯಿಲೆ (ಕೆಎಎಫ್‌ಡಿ) ಮುನ್ಸೂಚನೆಯಾಗಿದೆ.

ಡಿಎಂಪಿ ಎಣ್ಣೆ ಲಭ್ಯವಿದೆ

ಕುಟ್ರಾಪ್ಪಾಡಿಯ ಕುಂಟೋಡಿಯಲ್ಲಿ ಮಂಗ ಸತ್ತ ಪರಿಸರದಲ್ಲಿ ಕಂಡುಬಂದ ಉಣುಗುಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ. ಪ್ರಯೋಗಾಲಯದ ವರದಿ ಕೈಸೇರಿದ ಬಳಿಕವಷ್ಟೇ ಮಂಗನ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ. ಇದುವರೆಗೆ ಮಂಗನ ಕಾಯಿಲೆಯ ಲಕ್ಷಣಗಳನ್ನು ಹೋಲುವ ಯಾವುದೇ ರೋಗಿಗಳು ಕಡಬ ವ್ಯಾಪ್ತಿಯಲ್ಲಿ ಚಿಕಿತ್ಸೆಗಾಗಿ ಬಂದಿಲ್ಲ. ಮಂಗ ಸತ್ತ ಪ್ರದೇಶಗಳ ಜನರು ಕಾಡಿಗೆ ಅಥವಾ ತೋಟಕ್ಕೆ ಹೋಗುವ ವೇಳೆ ಕೈ ಕಾಲುಗಳಿಗೆ ಸವರಿಕೊಂಡು ಹೋಗಲು ಅಗತ್ಯವಿರುವ ಡಿಎಂಪಿ ಎಣ್ಣೆ ಸರಕಾರಿ ಆಸ್ಪತ್ರೆಯಲ್ಲಿ ಲಭ್ಯವಿದೆ. ಅಗತ್ಯವಿದ್ದವರು ಅದನ್ನು ಉಚಿತವಾಗಿ ಪಡೆದುಕೊಳ್ಳಬಹುದು..

Advertisement

-ಡಾ| ಸುಚಿತ್ರಾ ರಾವ್‌, ವೈದ್ಯಾಧಿಕಾರಿ, ಕಡಬ ಸಮುದಾಯ ಆಸ್ಪತ್ರೆ

| 6 ಮಂಗಗಳ ಸಾವು: ಇದೇ ಕಾಯಿಲೆಯ ಮುನ್ಸೂಚನೆ

| ಜಾಗರೂಕರಾಗಿರಲು ಅರಣ್ಯದಂಚಿನ ಜನರಿಗೆ ಸೂಚನೆ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next