Advertisement

ಉಳ್ಳಾಲ ಕೋಟೆಪುರದಲ್ಲಿ ಕತ್ತಲಾಗುತ್ತಿದ್ದಂತೆ ಚಿರತೆ ಕಾಟ: ಕಾಂಡ್ಲಾ ಕಾಡುಗಳೇ ವಾಸ ಸ್ಥಾನ

11:06 AM Feb 19, 2020 | keerthan |

ಉಳ್ಳಾಲ: ಇಲ್ಲಿ ಕತ್ತಲಾಗುತ್ತಿದ್ದಂತೆ ಜನರು ಮನೆಯಿಂದ ಹೊರಬರಲು ಹೆದರುತ್ತಾರೆ. ಮನುಷ್ಯರಷ್ಟೇ ಅಲ್ಲ ಇಲ್ಲಿನ ದನ – ನಾಯಿಗಳಿಗೂ ಜೀವಭಯ. ಬೆಳಿಗ್ಗೆ ಎದ್ದು ನಮ್ಮ ಮನೆಯ ನಾಯಿಗಳು, ದನಗಳು ಸುರಕ್ಷಿತವಾಗಿವೆಯೇ ಎಂದು ನೋಡುವ ಅನಿವಾರ್ಯತೆ. ಇಷ್ಟೆಲ್ಲಾ ಭಯಕ್ಕೆ ಕಾರಣವಾಗಿರುವುದು ಚಿರತೆ.

Advertisement

ಇಲ್ಲಿನ ಕೋಟೆಪುರ ಕೋಡಿ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಕಳೆದ ಕೆಲವು ದಿನಗಳಿಂದ ಭಯದಿಂದಲೇ ಜೀವನ ಸಾಗಿಸುತ್ತಿದ್ದಾರೆ. ಕಾರಣ ಚಿರತೆ ಕಾಟ.

ಸ್ಥಳೀಯರು ಈ ಮೊದಲು ಇಲ್ಲಿ ಚಿರತೆಯನ್ನು ಕಂಡಿದ್ದರೂ ಅದು ಸಣ್ಣ ಗಾತ್ರದಲ್ಲಿದ್ದ ಕಾರಣದಿಂದ ಕಾಡು ಬೆಕ್ಕು ಇರಬಹುದು ಎಂದುಕೊಂಡಿದ್ದರು. ಅದರೆ ನಂತರದ ದಿನಗಳಲ್ಲಿ ಚಿರತೆಯ ತೊಂದರೆ ಪ್ರದೇಶದಲ್ಲಿ ಆರಂಭವಾಗಿತ್ತು. ಸ್ಥಳೀಯ ಮನೆಗಳ ನಾಯಿ, ದನಕರುಗಳು ಚಿರತೆಯ ಬೇಟೆಗೆ ಆಹಾರವಾಗಿತ್ತು. ಇದರಿಂದ ಜನರು ಭಯದಿಂದ ದಿನಕಳೆಯುತ್ತಿದ್ದಾರೆ.

2-3 ಇರಬಹುದು

Advertisement

ಸ್ಥಳೀಯರ ಪ್ರಕಾರ ಇಲ್ಲಿ ಎರಡು ಅಥವಾ ಮೂರು ಚಿರತೆಗಳಿರಬಹುದು. ಈ ಮೊದಲು ಅವರು ನೋಡಿದ್ದು ಸಣ್ಣ ಗಾತ್ರದಲ್ಲಿದ್ದ ಕಾರಣ, ಇನ್ನೊಂದು ದೊಡ್ಡ ಗಾತ್ರದ ಚಿರತೆ ಅಲ್ಲಿರಬಹುದು ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಕಾಂಡ್ಲ ಕಾಡುಗಳೇ ವಾಸಸ್ಥಾನ

ಇದು ಸಮುದ್ರದ ಸಮೀಪದ ಹಿನ್ನೀರಿನ ಅಳಿವೆ ಜಾಗವಾದ ಕಾರಣ ಇಲ್ಲಿ ಕಾಂಡ್ಲಾ ಕಾಡುಗಳು ಹೆಚ್ಚು. ಇಲ್ಲಿನ ಮನೆಗಳ ಸಮೀಪವೇ ಕಾಂಡ್ಲ ಕಾಡುಗಳು ಬೆಳೆದಿವೆ. ಈ ಚಿರತೆಯೂ ಇದೇ ಕಾಂಡ್ಲಾ ಕಾಡುಗಳ ಮರೆಯಲ್ಲಿ ಹಗಲು ಕಳೆಯುತ್ತಿದೆ. ದಟ್ಟ ಪೊದೆಗಳ ನಡುವೆ ಇದು ವಾಸವಾಗಿದೆ ಎಂಬ ಅಭಿಪ್ರಾಯ ಸ್ಥಳೀಯರದ್ದು.

ಸಿಸಿ ಕ್ಯಾಮರಾದಲ್ಲಿ ಸೆರೆ

ಮಧ್ಯರಾತ್ರಿಯ ವೇಳೆಗೆ ಪರಿಸರದಲ್ಲಿ ಚಿರತೆ ಓಡಾಡುವ ದೃಶ್ಯಗಳು ಅಲ್ಲಿನ ದರ್ಗಾವೊಂದರಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮರಳಿನ ಮೇಲೂ ಚಿರತೆಯ ಹೆಜ್ಜೆ ಗುರುತುಗಳು ಮೂಡಿವೆ.

ಕಾರ್ಯಾಚರಣೆ ಆರಂಭ

ಪರಿಸರದಲ್ಲಿ ಚಿರತೆ ಕಾಟ ಜಾಸ್ತಿಯಾದ ಕಾರಣ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯನ್ನು ಹಿಡಿಯಲು ಎರಡು ಮೂರು ಕಡೆ ಬೋನುಗಳನ್ನು ಇಡಲಾಗಿದೆ. ಬೋನಿನೊಳಗೆ ಕೋಳಿಯನ್ನು ಕಟ್ಟಿಹಾಕಿ ಚಿರತೆಗೆ ಹೊಂಚು ಹಾಕಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next