Advertisement

Rice: ಅಕ್ಕಿ ಉತ್ಪಾದನೆ ಕುಸಿತದ ಆತಂಕ

09:58 PM Oct 28, 2023 | Team Udayavani |

ನವದೆಹಲಿ: ದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಅಕ್ಕಿ ಉತ್ಪಾದನೆ ಪ್ರಮಾಣ ಶೇ.3.35ಕ್ಕೆ ಇಳಿಕೆ ಆಗುವ ಸಾಧ್ಯತೆ ಇದೆ. ಕಳೆದ ವರ್ಷ 110 ಮಿಲಿಯ ಟನ್‌ ಅಕ್ಕಿ ಉತ್ಪಾದನೆಯಾಗಿದ್ದರೆ, ಪ್ರಸಕ್ತ ವರ್ಷ 106.31 ಮಿಲಿಯನ್‌ ಟನ್‌ ಅಕ್ಕಿ ಸಿಗುವ ಬಗ್ಗೆ ಕೇಂದ್ರ ಸರ್ಕಾರದ ವತಿಯಿಂದಲೇ ಬಿಡುಗಡೆ ಮಾಡಲಾಗಿರುವ ಮಾಹಿತಿಯಲ್ಲಿ ಉಲ್ಲೇಖೀಸಲಾಗಿದೆ.

Advertisement

ಅಕ್ಕಿ ಮಾತ್ರವಲ್ಲದೆ, ಉದ್ದು, ಹೆಸರು, ಸೋಯಾಬೀನ್‌, ಕಬ್ಬಿನ ಉತ್ಪಾದನೆಯಲ್ಲೂ ಕುಸಿತ ಕಾಣುವ ಸಾಧ್ಯತೆಗಳು ಇವೆ. ಆಗಸ್ಟ್‌ನಲ್ಲಿ ಹೆಚ್ಚಿನ ಅವಧಿಯಲ್ಲಿ ಮಳೆಯಾಗದೇ ಇದ್ದದ್ದು ಬೆಳೆ ಪ್ರಮಾಣ ಕುಂಠಿತವಾಗಲು ಕಾರಣ. ಮಳೆಗಾಲ ವಿಳಂಬವಾಗಿ ಶುರುವಾಗಿದ್ದರೂ, ಜುಲೈನಲ್ಲಿ ಬಿರುಸಾಗಿತ್ತು. ಆದರೆ, ಆಗಸ್ಟ್‌ನಲ್ಲಿ ಕಳೆಗುಂದಿತ್ತು. ಪ್ರಸಕ್ತ ವರ್ಷ ಭತ್ತದ ಬಿತ್ತನೆ ಪ್ರಮಾಣ ಕಳೆದ ವರ್ಷಕ್ಕಿಂತ 2 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚಾಗಿದೆ. ಸರಿ ಸುಮಾರು 4.50 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ.

ಈ ಹಿಂದೆ ಅಮೆರಿಕದ ಕೃಷಿ ಸಚಿವಾಲಯ ದೇಶದ ಆಹಾರ ಧಾನ್ಯಗಳ ಉತ್ಪಾದನೆ ಬಗ್ಗೆ ನಡೆಸಿದ್ದ ಅಧ್ಯಯನದಲ್ಲಿ ಕೂಡ ಅಕ್ಕಿಯ ಉತ್ಪಾದನೆ 2 ಮಿಲಿಯ ಟನ್‌ ಆಗಬಹುದು ಎಂದು ಮುನ್ಸೂಚನೆ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next