Advertisement

ಕೋವಿಡ್‌ ಪರೀಕ್ಷೆಗೆ ಹೆದರಿ ಹೊಲಕ್ಕೆ ತೆರಳಿದ ಗ್ರಾಮಸ್ಥರು

08:59 PM Jun 11, 2021 | Team Udayavani |

ಬ್ಯಾಡಗಿ: ಕೋವಿಡ್‌ ಪರೀಕ್ಷೆಗೆ ಹೆದರಿ ಮನೆಗಳಿಗೆ ಬೀಗ ಹಾಕಿಕೊಂಡು ಗ್ರಾಮಸ್ಥರು ಹೊಲಗಳಿಗೆ ತೆರಳಿದ ಘಟನೆ ಚಿಕ್ಕಣಜಿ ತಾಂಡಾದಲ್ಲಿ ನಡೆದಿದೆ.

Advertisement

ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಕೋವಿಡ್‌ ತಡೆಗಟ್ಟುವ ಹಿನ್ನೆಲೆಯಲ್ಲಿ ಹಿರೇಅಣಜಿ ಗ್ರಾಪಂ ವ್ಯಾಪ್ತಿಯ ಚಿಕ್ಕಣಜಿ ತಾಂಡಾದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡವರ ಕುರಿತು ಮನೆ ಮನೆ ಸರ್ವೇ ನಡೆಸಲು ಮುಂದಾದ ಹಿನ್ನೆಲೆಯಲ್ಲಿ, ಬಹುತೇಕ ಗ್ರಾಮಸ್ಥರು ಮನೆಗಳಿಗೆ ಬೀಗ ಹಾಕಿಕೊಂಡು ಹೊಲಗಳಿಗೆ ತೆರಳಿದ್ದಾರೆ.

ಚಿಕ್ಕಣಜಿ ತಾಂಡಾದಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿದ್ದು, ಸುಮಾರು ಜನರು 300ಜನರಿದ್ದಾರೆ. ಗ್ರಾಮದಲ್ಲಿ ಕೋವಿಡ್‌ ಪರೀಕ್ಷೆ ನಡೆಸುತ್ತಾರೆ ಎಂಬ ಬಗ್ಗೆ ಬುಧವಾರ ಸಂಜೆ ಹಿರೇಅಣಜಿ ಗ್ರಾಪಂ ವತಿಯಿಂದ ಡಂಗುರ ಸಾರಲಾಗಿತ್ತು. ಇದರ ಮಾಹಿತಿ ಪಡೆದ ಗ್ರಾಮಸ್ಥರು ಬೆಳಗ್ಗೆ ಎಂಟರೊಳಗೆ ಮನೆಗಳಿಗೆ ಬೀಗ ಹಾಕಿಕೊಂಡು ಹೊಲಗಳಿಗೆ ತೆರಳಿದ್ದಾರೆ.

ಆರೋಗ್ಯ ಕಾರ್ಯಕರ್ತೆಯರು ಮನೆಗಳಿಗೆ ತೆರಳಿದ ಸಂದರ್ಭದಲ್ಲಿ ಎಲ್ಲ ಮನೆಗಳಿಗೂ ಬೀಗ ಹಾಕಲಾಗಿತ್ತು. ಹೊಲಕ್ಕೆ ತೆರಳಿದ ಸಿಬ್ಬಂದಿ: ಗ್ರಾಮಸ್ಥರೆಲ್ಲ ಹೊಲಗಳಿಗೆ ತೆರಳಿರುವ ಮಾಹಿತಿ ಪಡೆದ ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಪಂ ಸದಸ್ಯರಾದ ಬಸವರಾಜ, ಜಯಪ್ಪ ಸೇರಿದಂತೆ ಕಾಗಿನೆಲೆ ಪಿಎಸ್‌ಐ ಬಳಿಗಾರ ಹೊಲಗಳಿಗೆ ತೆರಳಿ ಗ್ರಾಮಸ್ಥರ ಮನವೊಲಿಸಿದ್ದಾರೆ. ಕೆಲವರು ಕೋವಿಡ್‌ ಪರೀಕ್ಷೆಗೆ ಒಪ್ಪಿ ಪರೀಕ್ಷೆ ನಡೆಸಿಕೊಂಡರೆ, ಕೆಲವರು ಅಲ್ಲಿಂದಲೂ ಕಾಲ್ಕಿತ್ತಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಒಟ್ಟು 50 ಜನರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next