ಫ್ರಾನ್ಸ್ : ಕೋವಿಡ್ ಸೋಂಕು ಇಡೀ ಜಗತ್ತಿಗೆ ಹರಡಿ, ಇಡೀ ಜಗತ್ತಿನ ನಾಗರಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ. ಕೋವಿಡ್ ಸೋಂಕಿನ ಮೂರನೇ ಅಲೆ ಇನ್ನೇನು ಕೊಂಚ ಮಟ್ಟಿಗೆ ಚೇತರಿಸಿಕೊಳ್ಳುತ್ತಿದೆ ಎನ್ನುವಾಗಲೇ ಫ್ರಾನ್ಸ್ ದೇಶ ಸೋಂಕಿನ ನಾಲ್ಕನೇ ಅಲೆಯ ಎಚ್ಚರಿಕೆಯನ್ನು ನೀಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ವಿದೇಶ ಪ್ರಯಾಣಗಳು ನಿಧಾನಕ್ಕೆ ಸುಧಾರಿಸುತ್ತಿದೆಯಾದರೂ ವಿದೇಶಗಳಲ್ಲಿ ಕೋವಿಡ್ ಸೋಂಕಿನ ನಾಲ್ಕನೇ ಅಲೆಯ ಸುದ್ದಿ ವಿದೇಶ ಪ್ರಯಾಣಿಕರಿಗೆ ಭೀತಿ ಸೃಷ್ಟಿ ಮಾಡಿದೆ.
ಇದನ್ನೂ ಓದಿ : ತೈಲ ಪೂರೈಕೆ ಹೆಚ್ಚಿಸುವಲ್ಲಿ ಒಮ್ಮತಕ್ಕೆ ಬರದ ಒಪೆಕ್ ದೇಶಗಳು: ತೈಲ ಬೆಲೆ ಏರಿಕೆ ಸಾಧ್ಯತೆ
ಫ್ರಾನ್ಸ್ ನಲ್ಲಿ ಈವರೆಗೆ ಹೊಸದಾಗಿ ಪತ್ತೆಯಾಗಿರುವ ಕೋವಿಡ್ ಸೋಂಕಿತರರಲ್ಲಿ ಶೇಕಡಾ 30 ರಷ್ಟು ಮಂದಿ ಡೆಲ್ಟಾ ರೂಪಾಂತರಿಯಿಂದಲೇ ಬಳಲುತ್ತಿದ್ದಾರೆ ಎಂದು ಅಲ್ಲಿನ ಸರ್ಕಾರದ ಹೆಲ್ತ್ ಡಿಪಾರ್ಟ್ ಮೆಂಟ್ ಮಾಹಿತಿ ನೀಡಿದೆ.
ಇನ್ನು ಈ ಕುರಿತಾಗಿ ಮಾಹಿತಿ ನೀಡಿದ ಫ್ರಾನ್ಸ್ ಸರ್ಕಾರದ ವಕ್ತಾರ ಗ್ಯಾಬ್ರಿಯೆಲ್ ಅಟ್ಟಲ್, ಕೋವಿಡ್ ಸೋಂಕಿನ ರೂಪಾಂತರಿ ಡೆಲ್ಟಾ ಫ್ರಾನ್ಸ್ ನಲ್ಲಿ ಹೆಚ್ಚಳವಾಗುತ್ತಿದ್ದು, ಈ ತಿಂಗಳ ಅಂತ್ಯದ ವೇಳೆಗೆ ಫ್ರಾನ್ಸ್ ನಲ್ಲಿ ಕೋವಡ್ ಸೋಂಕಿನ ನಾಲ್ಕನೇ ಅಲೆ ಆರಂಭವಾಗಬಹುದು ಎಂದು ಅವರು ಕಳವಳ ವ್ಯಕ್ತ ಪಡಿಸಿದ್ದಾರೆ.
ಡೆಲ್ಟಾ ರೂಪಾಂತರಿ ಸೋಂಕಿನ ಹೊಸ ಪ್ರಕರಣಗಳು ದಿನ ನಿತ್ಯ ದೇಶದಲ್ಲಿ ಹೆಚ್ಚಳವಾಗುತ್ತಿದ್ದು, ನಾಲ್ಕನೇ ಅಲೆ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : 2023ರ ವಿಧಾನಸಭಾ ಚುನಾವಣೆಗೆ ಈಗಲೇ ಸಿದ್ದತೆ ಮಾಡಿಕೊಳ್ಳಿ: ಡಿ.ಕೆ ಅರುಣಾ