ಬೀದರ: ಭಾಲ್ಕಿ ಸಮಾಜ ಕಲ್ಯಾಣ ಇಲಾಖೆ ಎಫ್‌ಡಿಸಿ ಆತ್ಮಹತ್ಯೆ ಘಟನೆಗೆ ಸಂಬಂಧಿ ಸಿದಂತೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹಿಸಿ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಒಕ್ಕೂಟದ ಅಧ್ಯಕ್ಷ ಬಾಬುರಾವ್ ಪಾಸ್ವಾನ್ ನೇತೃತ್ವದಲ್ಲಿ ನಗರದ ಅಂಬೇಡ್ಕರ ವೃತ್ತದಿಂದ ಜಿಲ್ಲಾ ಧಿಕಾರಿ ಕಚೇರಿ ವರೆಗೆ ರ್ಯಾಲಿ ನಡೆಸಿ, ನಂತರ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ಬರೆದ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಎಫ್‌ಡಿಸಿ ಸುರೇಶ ಕಾಂಬಳೆ ಅವರಿಗೆ ಎರಡು ವರ್ಷದಿಂದ ಸಂಬಂಧ ಮಾಡದಿರುವುದು ಮತ್ತು ಏಕ ವಚನದಲ್ಲಿ ನಿಂದಿಸುತ್ತ ನೆಪವೊಡ್ಡಿ ಮಾನಸಿಕ ಕಿರುಕುಳ ಕೊಟ್ಟು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಕಾಂಬಳೆ ಅವರನ್ನು ಬೇರೆಡೆಗೆ ನಿಯೋಜನೆ ಮಾಡಬೇಕೆಂಬ ಮನವಿ ಮೇರೆಗೆ ತಾಲೂಕು ಅಧಿಕಾರಿ ಶಿಫಾರಸು ಮಾಡಿದ್ದರೂ ಜಿಲ್ಲಾ ಸಮಾಜ ಕಲ್ಯಾಣಧಿಕಾರಿಗಳು ನೌಕರನ ಮಾನಸಿಕ ತೊಂದರೆ ಪರಿಗಣಿಸಲಿಲ್ಲ ಎಂದು ಆರೋಪಿಸಲಾಗಿದೆ.
ನೋವು ಸಹಿಸಿಕಂಡು ಕಾರ್ಯ ನಿರ್ವಹಿಸಿದ ಕಾಂಬಳೆ ಭಾಲ್ಕಿ ತಾಲೂಕು ಸಮಾಜ ಕಲ್ಯಾಣಾಧಿ ಕಾರಿಗಳ ಮಾನಸಿಕ ಕಿರುಕುಳದಿಂದ ಕಳೆದ ಗುರುವಾರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕರಣ ದಾಖಲಾಗಿ 9 ದಿನಗಳು ಕಳೆದರೂ ತಾಲೂಕು ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಅಧಿಕಾರಿ ವಿರುದ್ಧ ಕಾಂಬಳೆ ಪತ್ನಿ ದೂರು ನೀಡಿದ್ದರೂ ಪ್ರಕರಣ ದಾಖಲು ಮಾಡಿಕೊಂಡಿಲ್ಲ ಎಂದು ತಿಳಿಸಲಾಗಿದೆ. ಪ್ರಮುಖರಾದ ರಾಜಕುಮಾರ ಮೂಲಭಾರತಿ, ಅರುಣ ಕುದರೆ, ಕಲ್ಯಾಣರಾವ ಭೋಸ್ಲೆ, ಶಿವಕುಮಾರ ನೀಲಿಕಟ್ಟಿ, ಶ್ರೀಪತರಾವ್ ದೀನೆ, ಅಶೋಕ ಮಾಳಗೆ, ರವಿಕುಮಾರ ವಾಘಮಾರೆ, ಅವಿನಾಶ ದೀನೆ, ರಾಹುಲ್ ಡಾಂಗೆ, ರವೀಂದ್ರ
ದೇವಗಡೆ, ದೀಪಕ ಕಾಂಬಳೆ ಮತ್ತು ದಿಲೀಪ ಯನಗುಂದೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.