Advertisement

ಫ‌ವಾದ್‌ ಆಲಂ ಶತಕದ ತಿರುಗೇಟು

11:22 PM Jan 27, 2021 | Team Udayavani |

ಕರಾಚಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಫ‌ವಾದ್‌ ಆಲಂ ಅಮೋಘ ಶತಕ ಬಾರಿಸುವ ಮೂಲಕ ಕರಾಚಿ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ಥಾನ ಪ್ರವಾಸಿ ದಕ್ಷಿಣ ಆಫ್ರಿಕಾಕ್ಕೆ ತಿರುಗೇಟು ನೀಡಿದೆ. ಹರಿಣಗಳ 220ಕ್ಕೆ ಉತ್ತರವಾಗಿ ದ್ವಿತೀಯ ದಿನದಾಟದ ಅಂತ್ಯಕ್ಕೆ 8 ವಿಕೆಟಿಗೆ 308 ರನ್‌ ಪೇರಿಸಿದೆ. ಆಲಂ 109 ರನ್‌ ಮಾಡಿದರು.

Advertisement

ಮೊದಲ ದಿನ ಪಾಕ್‌ ಕೇವಲ 27 ರನ್‌ ಮಾಡುವಷ್ಟರಲ್ಲಿ 4 ವಿಕೆಟ್‌ ಉದುರಿಸಿಕೊಂಡಿತ್ತು. ಅಜರ್‌ ಅಲಿ (51) ಮತ್ತು ಫ‌ವಾದ್‌ ಆಲಂ 5ನೇ ವಿಕೆಟಿಗೆ 94 ರನ್‌ ಪೇರಿಸಿ ಹೆಚ್ಚಿನ ಹಾನಿ ತಪ್ಪಿಸಿದರು. ಎಡಗೈ ಬ್ಯಾಟ್ಸ್‌ಮನ್‌ ಆಲಂ 245 ಎಸೆತಗಳನ್ನು ಎದುರಿಸಿ 9 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 3ನೇ ಶತಕ ಸಂಭ್ರಮ ಆಚರಿಸಿದರು.

ಮೊಹಮ್ಮದ್‌ ರಿಜ್ವಾನ್‌ (33), ಫಾಹೀಮ್‌ ಅಶ್ರಫ್ (64) ಕೂಡ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರು. ಪಾಕಿಸ್ಥಾನವೀಗ 88 ರನ್ನುಗಳ ಮುನ್ನಡೆಯಲ್ಲಿದೆ.

ದಕ್ಷಿಣ ಆಫ್ರಿಕಾ ಪರ ರಬಾಡ, ನೋರ್ಜೆ, ಎನ್‌ಗಿಡಿ ಮತ್ತು ಮಹಾರಾಜ್‌ ತಲಾ 2 ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next