Advertisement

ಬಿಹಾರ: ನಿತೀಶ್‌ ಸಂಪುಟ ಸಚಿವ ಫಿರೋಜ್‌ ಮೇಲೆ ಫ‌ತ್ವಾ ಜಾರಿ !

12:00 PM Jul 30, 2017 | Team Udayavani |

ಪಟ್ನಾ : ಬಿಹಾರದ ಸಚಿವ ಫಿರೋಜ್‌ ಅಹಮದ್‌ ಅಲಿಯಾಸ್‌ ಖುರ್ಷಿದ್‌ ಅವರ ಮೇಲೆ ಭಾನುವಾರ ಫ‌ತ್ವಾ ಹೊರಡಿಸಲಾಗಿದೆ. 

Advertisement

‘ನಾನು ಬಿಹಾರದ ಜನರಿಗಾಗಿ ಜೈ ಶ್ರೀರಾಮ್‌ ಎಂಬ ಘೋಷಣೆ ಕೂಗುತ್ತೇನೆ. ಅಭಿವೃದ್ಧಿ ಸಾಮರಸ್ಯಕ್ಕಾಗಿ ಇದನ್ನು ಹೇಳಲು ನಾನು ಹಿಂಜರಿಯುವುದಿಲ್ಲ’ ಎಂದು ಫಿರೋಜ್‌ ಅಹಮದ್‌ ಹೇಳಿದ್ದರು. ಇದೇ ಕಾರಣಕ್ಕೆ ಇಮಾರತ್‌ -ಇ-ಶರಿಯಾ ಫ‌ತ್ವಾ ಹೊರಡಿಸಿದೆ. 

ಫ‌ತ್ವಾಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಫಿರೋಜ್‌ ‘ನನ್ನ ಕೆಲಸ ಹೇಳುತ್ತದೆ ನಾನು ಯಾರು ಎಂದು. ಇಮಾರತ್‌ ಶರಿಯಾ ಮೇಲೆ ನನಗೆ ಗೌರವವಿದೆ.ಆದರೆ ಅವರು ಫ‌ತ್ವಾ ಹೊರಡಿಸುವ ಮುನ್ನ ನನ್ನ ಉದ್ದೇಶ ಏನು ಎಂದು ಕೇಳಿದ್ದಾರೆಯೇ? .ನಾನೇಕೆ ಹೆದರಬೇಕು’ ಎಂದಿದ್ದಾರೆ. 

ಮಹಾಘಟಬಂಧನ್‌ ಸರ್ಕಾರದಲ್ಲೂ ಸಚಿವರಾಗಿದ್ದ ಫಿರೋಜ್‌ ಅವರಿಗೆ ಬಿಜೆಪಿ ಮೈತ್ರಿಕೂಟದ ಎನ್‌ಡಿಎ ಮೈತ್ರಿ ಸರ್ಕಾರದಲ್ಲೂ ಅಲ್ಪಸಂಖ್ಯಾತ ಕಲ್ಯಾಣ ಖಾತೆ ನೀಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next