Advertisement

ಅಪ್ಪಣ್ಣನವರ ವಚನಗಳು ಇಂದಿಗೂ ಜೀವಂತ

11:32 AM Jul 28, 2018 | |

ಬಳ್ಳಾರಿ: ಬಸವಣ್ಣನವರ ಸಮಕಾಲೀನರಾದ ಹಡಪದ ಅಪ್ಪಣ್ಣನವರು ಹಲವಾರು ವಚನಗಳನ್ನು ರಚಿಸಿದ್ದು, ಇಂದಿಗೂ ಜೀವಂತವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಎಸ್‌.ಜಿ.ಸೋಮಶೇಖರ್‌ ಹೇಳಿದರು. ನಗರದ ಡಾ| ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಶರಣರ ವಚನ ಸಾಹಿತ್ಯಗಳನ್ನು ಅಭ್ಯಾಸ ಮಾಡುವ ಮೂಲಕ ಅದರಲ್ಲಿನ ಸಿದ್ಧಾಂತ, ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಉಪನ್ಯಾಸ ನೀಡಿದ ಕಸಾಪ ನಿಕಟಪೂರ್ವ ಅಧ್ಯಕ್ಷ ನಿಷ್ಠಿರುದ್ರಪ್ಪ, ಬಸವಣ್ಣನವರ ಕ್ರಾಂತಿಯಲ್ಲಿ ಅಪ್ಪಣ್ಣನವರೂ ತೊಡಗಿಸಿಕೊಂಡಿದ್ದರು. ಶರಣರು ಭಕ್ತಿಯಿಂದ ಜ್ಞಾನವನ್ನು ಸಂಪಾದಿಸುವ ಮೂಲಕ ವಚನ ಸಾಹಿತ್ಯಗಳನ್ನು ರಚಿಸಿ
ಸಮಾಜಕ್ಕೆ ಇಂದಿಗೂ ದಾರಿದೀಪವಾಗಿದ್ದಾರೆ ಎಂದರು.

ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆರಾಧ ಧರಪ್ಪ ನಾಯಕ ಅಧ್ಯಕ್ಷತೆ ವಹಿಸಿದ್ದರು. ಅಖೀಲ ಕರ್ನಾಟಕ ಹಡಪದ
ಸಮಾಜದ ಜಿಲ್ಲಾಧ್ಯಕ್ಷ ಎಚ್‌.ಕೆ.ನಾಗರಾಜ, ಜಿಪಂ ಉಪಕಾರ್ಯದರ್ಶಿ ಭಜಂತ್ರಿ, ಪಾಲಿಕೆ ಆರೋಗ್ಯ ಅಧಿಕಾರಿ ಹನುಮಂತಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗಂಗಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ, ಸಮುದಾಯದ ಮುಖಂಡರಾದ ಎರ್ರಿಸ್ವಾಮಿ, ಗುರುಸಿದ್ದಪ್ಪ ಇನ್ನಿತರರಿದ್ದರು.

ಮೆರವಣಿಗೆ: ನಗರದ ಮುನ್ಸಿಪಲ್‌ ಕಾಲೇಜು ಮೈದಾನದಿಂದ ಆರಂಭಗೊಂಡ ಶಿವಶರಣ ಶ್ರೀಹಡಪದ ಅಪ್ಪಣ್ಣ ಭಾವಚಿತ್ರ
ಮೆರವಣಿಗೆಗೆ ಶಾಸಕ ಸೋಮಶೇಖರ್‌ ರೆಡ್ಡಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಮಹಿಳೆಯರಿಂದ ಕುಂಭ, ಕಳಸ, ಜಾನಪದ ಕಲಾತಂಡಗಳು ಪಾಲ್ಗೊಂಡು ಮೆರಗು ತಂದುಕೊಟ್ಟವು. 

ಹಡಪದ ಅಪ್ಪಣ್ಣನ ಬದುಕು ಬರಹ ದಾರಿದೀಪ
ಹಗರಿಬೊಮ್ಮನಹಳ್ಳಿ :
ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವವನ್ನು ಸರಳವಾಗಿ ಶುಕ್ರವಾರ ಆಚರಿಸಲಾಯಿತು. ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್‌ ವಿಜಯಕುಮಾರ್‌ ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಮಾಜದ ತಾಲೂಕು ಅಧ್ಯಕ್ಷ ಎಚ್‌.ದೊಡ್ಡಪ್ಪ ಮಾತನಾಡಿ, ಹಡಪದ ಅಪ್ಪಣ್ಣ ತಮ್ಮ ವಚನಗಳ ಮೂಲಕ ಸಮಾನತೆಯನ್ನು ಸಾರಿದ್ದಾರೆ. ತಮ್ಮ ವಚನಗಳ ಮೂಲಕ ಜನಜಾಗೃತಿ ಮೂಡಿಸಿದ ಅಪ್ಪಣ್ಣ ಅವರ ಬದುಕು ಮತ್ತು ಬರಹಗಳು ದಾರಿದೀಪವಾಗಿವೆ. ಜನತೆ ಅಪ್ಪಣ್ಣನವರ ಆದರ್ಶಗಳನ್ನು ಪಾಲಿಸಿ ಸಮಾಜಮುಖೀಯಾಗಬೇಕು ಎಂದರು. ಬಿಇಒ ಶೇಖರಪ್ಪ ಹೊರಪೇಟೆ, ಸಮಾಜದ ಉಪಾಧ್ಯಕ್ಷ ಕೊಳಚಿ ಹಾಲೇಶ್‌, ಕಾರ್ಯದರ್ಶಿ ವೈ.ಲಿಂಗಪ್ಪ, ಮುಖಂಡರಾದ ಎಚ್‌.ನಾಗರಾಜ, ಎಚ್‌.ಫಕ್ಕೀರಪ್ಪ, ಕಡಲಬಾಳು ನಾಗರಾಜ, ಉಪ ತಹಶೀಲ್ದಾರ್‌ ನಾಗರಾಜ, ಸಿರಸ್ತೇದಾರ ಶ್ವೇತಾ, ಸಿಬ್ಬಂದಿಗಳಾದ ಮಂಜುನಾಥ್‌, ಚೇತನ ಇನ್ನಿತರರಿದ್ದರು. ಶಿಕ್ಷಕ ಎಚ್‌.ವೈ.ಲಿಂಗಪ್ಪ, ಬೆರಳಚ್ಚುಗಾರ ಸಿ.ಮ.ಗುರುಬಸವರಾಜ ನಿರೂಪಿಸಿದರು.

Advertisement

ಗ್ರಾಪಂ ಕಚೇರಿ: ತಾಲೂಕಿನ ತಂಬ್ರಹಳ್ಳಿಯ ಗ್ರಾಪಂ ಕಚೇರಿ ಸಭಾಂಗಣದಲ್ಲಿ ಹಡಪದ ಸಮಾಜದವರು ಹಡಪದ ಅಪ್ಪಣ್ಣ ಜಯಂತ್ಯುತ್ಸವವನ್ನು ಆಚರಿಸಲಾಯಿತು. ಸಮಾಜದ ಹಿರಿಯರಾದ ಹಡಪದ ಕೊಟ್ರೇಶ, ನೀಲಜ್ಜ, ನಿಂಗಪ್ಪ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ಗ್ರಾಪಂ ಸದಸ್ಯ ಗೌರಜ್ಜನವರ ಗಿರೀಶ, ಸಮಾಜದ ಶರಣಪ್ಪ, ವೀರೇಶ್‌, ಕೃಷ್ಣ, ರಮೇಶ, ಬನ್ನಿಗೋಳ ವೀರೇಶ, ಕಾರ್ಯದರ್ಶಿ ಶರಣಪ್ಪ ಇನ್ನಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next