Advertisement
ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಸೋಮವಾರ ನಡೆದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಅಲೈಡ್ ಹೆಲ್ತ್ ಸೈನ್ಸ್ ಹಾಗೂ ಕಾಲೇಜು ಆಫ್ ಫಿಸಿಯೋಥೆರಫಿ ವಿಭಾಗ ಗಳ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಆಡಳಿತಾಧಿಕಾರಿ ಫಾ| ಜಾರ್ಜ್ ಜೀವನ್ ಸಿಕ್ವೇರಾ, ಸಹಾಯಕ ಆಡಳಿತಾಧಿಕಾರಿ ವಂ| ನೆಲ್ಸನ್ ಧೀರಜ್ ಪಾಯಿಸ್, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ ಆಡಳಿತಾಧಿಕಾರಿ ಫಾ| ಸಿಲ್ವೆಸ್ಟರ್, ಡೀನ್ ಆ್ಯಂಟನಿ ಸಿಲ್ವನ್ ಡಿ’ ಸೋಜಾ, ವೈಸ್ ಡೀನ್ ವೆಂಕಟೇಶ್ ಬಿ.ಎನ್., ವೈದ್ಯಕೀಯ ಅಧೀಕ್ಷಕ ಡಾ| ಉದಯ್ ಕುಮಾರ್ ಕೆ., ಫಿಜಿಯೋಥೆರಪಿ ಕಾಲೇಜು ಪ್ರಾಂಶುಪಾಲೆ ಪ್ರೊ| ಚರಿಷ್ಮಾ ಉಪಸ್ಥಿತರಿದ್ದರು.
ಫಾ| ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ನಿರ್ದೇಶಕ ವಂ| ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಸ್ವಾಗತಿಸಿ, ಕಾಲೇಜ್ ಆಫ್ ಅಲೈಡ್ ಸೈನ್ಸ್ ಪ್ರಾಂಶು ಪಾಲೆ ಡಾ| ಹೀಲ್ಡಾ ಡಿ’ಸೋಜಾ ವಂದಿಸಿ ದರು. ಡಾ| ಶ್ರೇಯಸ್ ಹಾಗೂ ಡಾ| ಸವಿತಾ ಲಸ್ರಾದೊ ನಿರೂಪಿಸಿದರು.
ನಿಸ್ವಾರ್ಥ ಸೇವೆ ಅಗತ್ಯ ದಿಲ್ಲಿಯ ಲೇಡಿ ಹಾರ್ಡಿಂಜ್ ಮೆಡಿಕಲ್ ಕಾಲೇಜು ಸಮೂಹ ಆಸ್ಪತ್ರೆಯ ನಿರ್ದೇಶಕ ಡಾ| ಸುಭಾಶ್ ಗಿರಿ ಮಾತನಾಡಿ, ಹಣದ ಹಿಂದೆ ತೆರಳದೆ ಸೇವೆಯನ್ನು ಶ್ರೇಷ್ಠವಾಗಿಸಬೇಕು. ಬಡ ಜನರಿಗೆ ಹಣಕಾಸಿನ ಅಡೆತಡೆಗಳು ಎದುರಾಗುತ್ತವೆ. ಈ ವೇಳೆ ತಮ್ಮ ಸೇವೆಯನ್ನು ನಿಸ್ವಾರ್ಥವಾಗಿ ನೀಡಬೇಕು. ಸಾಮಾಜಿಕ ಬದ್ಧತೆಯೊಂದಿಗೆ ನಡೆದಾಗ ಮಾತ್ರವೇ ಗಳಿಸಿದ ಶಿಕ್ಷಣಕ್ಕೆ ಅರ್ಥ ಹಾಗೂ ಸಾರ್ಥಕ್ಯ ಸಿಗಲು ಸಾಧ್ಯ ಎಂದರು.