Advertisement

ಆಂಧ್ರದ ಕೊಂಡಾಪುರ ಬಳಿ ಭೀಕರ ಅಪಘಾತ: 7 ಸಾವು

11:28 PM May 15, 2023 | Team Udayavani |

ಕಂಪ್ಲಿ: ಸೋಮವಾರ ಬೆಳಗ್ಗಿನ ಜಾವ ಆಂಧ್ರಪ್ರದೇಶದ ತಾಡಪತ್ರಿ ಸಮೀಪದ ಕೊಂಡಾಪುರ ಎಂಬಲ್ಲಿ ಲಾರಿ ಮತ್ತು ಕ್ರೂಸರ್‌ ಪರಸ್ಪರ ಢಿಕ್ಕಿ ಹೊಡೆದು ಕಂಪ್ಲಿಯ ಓರ್ವ ಮಹಿಳೆ ಸಹಿತ ಒಂದೇ ಕುಟುಂಬದ 7 ಜನರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ.

Advertisement

ಮೂಲತಃ ಆಂಧ್ರಪದೇಶದ ತಾಡಪತ್ರಿಯ ವರಾದ ವಿಜಯಲಕ್ಷೀ ಅಲಿಯಾಸ್‌ ಲಕ್ಷೀ¾ದೇವಿ ಅವರನ್ನು ಕಂಪ್ಲಿಯ ಭಾಸ್ಕರ ರೆಡ್ಡಿ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಒಂದು ವಾರದ ಹಿಂದೆ ಇವರು ತವರಿಗೆ ಹೋಗಿದ್ದರು. ಅಲ್ಲಿಂದ ಸಹೋದರಿಯರು, ಮಕ್ಕಳು ಸಹಿತ ಕುಟುಂಬದವರು ತಿರುಪತಿಗೆ ತೆರಳಿ ದೇವರ ದರ್ಶನ ಮಾಡಿ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ಮೃತರನ್ನು ಕಂಪ್ಲಿ ನಿವಾಸಿ ಲಕ್ಷೀ¾ ದೇವಿ ಸಹೋದರಿಯರಾದ ಪೆದ್ದಕ್ಕ, ಸುಮಾ, ಸುಭದ್ರಾ ಹಾಗೂ ಬಾಲಕರಾದ ಮಣಿಕಂಠ ಅಲಿಯಾಸ ದಿಲೀಪ್‌ರೆಡ್ಡಿ ಮತ್ತು ಸುನೀಲ್‌ ಎಂದು ಗುರುತಿಸಲಾಗಿದೆ. ವಾಹನದ ಚಾಲಕನೂ ಮೃತಪಟ್ಟಿದ್ದಾನೆ.

ಭಾಸ್ಕರ ರೆಡ್ಡಿ ದ್ವಿಚಕ್ರ ವಾಹನವೂ ಅಪಘಾತ
ಅಪಘಾತದ ಸುದ್ದಿ ತಿಳಿದು ಭಾಸ್ಕರ ರೆಡ್ಡಿ ಅವರು ಸಹೋದರನ ಮಗನ ಜತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಬಳ್ಳಾರಿ ಸಮೀಪ ಇವರ ವಾಹನವೂ ಅಪಘಾತಕ್ಕೀಡಾಗಿದೆ. ಇವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಇವರ ಮಕ್ಕಳಾದ ಮೇಘನಾ ರೆಡ್ಡಿ (19) ಹಾಗೂ ಶಿಲ್ಪಾ ರೆಡ್ಡಿ (17) ಅವರಿಗೆ ತೀವ್ರ ಗಾಯಗಳಾಗಿವೆ.

ಗದಗದಲ್ಲಿ ಅಪಘಾತ: ಮೂವರ ಸಾವು
ಗದಗ: ಕಾರು ಹಾಗೂ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ತಾಲೂಕಿನ ಅಡವಿಸೋಮಾಪುರ ಬಳಿ ಮಲ್ಲಿಕಾರ್ಜುನ ಮಠದ ಹತ್ತಿರ ಸೋಮವಾರ ನಡೆದಿದೆ. ಮುಂಡರಗಿ ತಾಲೂಕಿನ ಸಿಂಗಟರಾಯನಕೇರಿ ತಾಂಡಾದ ಶಿವಪ್ಪ ನಾಯಕ್‌(50), ಛಬ್ಬಿ ತಾಂಡಾದ ಶಿವಾನಂದ ಲಮಾಣಿ (33) ಹಾಗೂ ಡೋಣಿ ತಾಂಡಾದ ಕೃಷ್ಣಪ್ಪ ಚವ್ಹಾಣ(31) ಮೃತಪಟ್ಟವರು.

Advertisement

ಬೈಕ್‌ ಸವಾರರು ಗದಗ ಕಡೆ ಹೊರಟಿದ್ದಾಗ ಗದಗ ಕಡೆಯಿಂದ ಅತಿ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದಿದೆ. ಎರಡು ಬೈಕ್‌ಗಳಲ್ಲಿದ್ದ ಸವಾರರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬ ಗದಗ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೃತರಲ್ಲಿ ಇಬ್ಬರು ಮದುವೆಗೆ ಬೇಕಾಗಿದ್ದ ಸಾಮಗ್ರಿ ಖರೀದಿಗೆ ಗದಗಕ್ಕೆ ಬರುತ್ತಿದ್ದು, ಮತ್ತೂಬ್ಬ ಹಲ್ಲು ನೋವಿನ ಚಿಕಿತ್ಸೆಗಾಗಿ ತೆರಳುತ್ತಿದ್ದ ಎನ್ನಲಾಗಿದೆ.

ನದಿಗೆ ಈಜಲು ಹೋಗಿದ್ದ
ಇಬ್ಬರು ಬಾಲಕರು ಸಾವು
ಸಿಂಧನೂರು: ಸ್ನಾನಕ್ಕೆಂದು ತುಂಗಭದ್ರಾ ನದಿಗೆ ಹೋಗಿದ್ದ ಇಬ್ಬರು ಬಾಲಕರು ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ. ತಾಲೂಕಿನ ದಢೇಸುಗೂರು ಗ್ರಾಮದ ಬಳಿ ನದಿಗೆ ಈಜಲು ಹೋಗಿದ್ದ ಅಮರ್‌ (16) ಮತ್ತು ಮಲ್ಲಿಕಾರ್ಜುನ (18) ಮೃತಪಟ್ಟಿದ್ದಾರೆ. ಬಾಲಕರ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next