Advertisement

ಆರೋಪಿಗಳ ಬಂಧನ ವಿಳಂಬ ಪ್ರತಿಭಟಿಸಿ ಉಪವಾಸ ಸತ್ಯಾಗ್ರಹ

07:55 AM Aug 09, 2017 | Team Udayavani |

ಮಂಗಳೂರು: ಬಿ.ಸಿ.ರೋಡ್‌ನ‌ಲ್ಲಿ ಜು. 4ರಂದು ಆರ್‌.ಎಸ್‌.ಎಸ್‌. ಕಾರ್ಯಕರ್ತ ಶರತ್‌ ಮಡಿವಾಳ ಅವರ ಕೊಲೆ ಮತ್ತು ಮೇಲ್ಕಾರ್‌ನಲ್ಲಿ ಪವನ್‌ರಾಜ್‌ ಹಾಗೂ ಕುತ್ತಾರ್‌ನಲ್ಲಿ ಚಿರಂಜೀವಿ ಕೊಲೆ ಯತ್ನ ಪ್ರಕರಣಗಳು ನಡೆದು ಒಂದು ತಿಂಗಳಾದರೂ ಆರೋಪಿಗಳ ಬಂಧನ ಆಗದಿರುವುದನ್ನು ಪ್ರತಿಭಟಿಸಿ ಮಂಗಳೂರು ಸಹಿತ ಜಿಲ್ಲೆಯ 6 ಸ್ಥಳಗಳಲ್ಲಿ ದ.ಕ.ಜಿಲ್ಲಾ ಹಿಂದೂ ಹಿತ ರಕ್ಷಣಾ ಸಮಿತಿ ವತಿಯಿಂದ ಮಂಗಳವಾರ ಉಪವಾಸ ಸತ್ಯಾಗ್ರಹ ನಡೆಯಿತು.

Advertisement

ಮಂಗಳೂರಿನ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಉಪವಾಸ ಸತ್ಯಾಗ್ರಹದಲ್ಲಿ ಮಾಜಿ ಎಂಎಲ್‌ಸಿ ಕೆ. ಮೋನಪ್ಪ ಭಂಡಾರಿ, ಹಿಂದೂ ಸಂಘಟನೆಗಳ ಮುಖಂಡರಾದ ಪ್ರೊ| ಎಂ. ಬಿ. ಪುರಾಣಿಕ್‌, ಜಗದೀಶ್‌ ಶೇಣವ, ಶರಣ್‌ ಪಂಪವೆಲ್‌, ಸತ್ಯಜಿತ್‌ ಸುರತ್ಕಲ್‌ ಮೊದಲಾದವರು ಭಾಗವಹಿಸಿದ್ದರು. ಬೆಳ್ತಂಗಡಿ ತಾಲೂಕು ಕಚೇರಿ ಬಳಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್‌ ಪೂಂಜಾ, ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್‌ ಗೌಡ, ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಶಾಸಕ ಅಂಗಾರ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ತಾಲೂಕು ಬಿಜೆಪಿ ಅಧ್ಯಕ್ಷ ವೆಂಕಟ ವಳಲಂಬೆ, ಬಿಸಿರೋಡ್‌ ಫ್ಲೈಓವರ್‌ ಬಳಿ ನಡೆದ ಸತ್ಯಾಗ್ರಹದಲ್ಲಿ ಮುಖಂಡರಾದ ರಾಜೇಶ್‌ ನಾೖಕ್‌ ಉಳಿಪಾಡಿ, ಸುಲೋಚನಾ ಜಿ. ಕೆ. ಭಟ್‌, ಜಿ. ಆನಂದ, ರಾಮ್‌ದಾಸ್‌ ಬಂಟ್ವಾಳ ಮತ್ತಿತರರು ಭಾಗವಹಿಸಿದ್ದರು. 

ಪುತ್ತೂರು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ನಡೆಯಿತು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಜೀವಂಧರ ಜೈನ್‌, ಅರುಣ್‌ಕುಮಾರ್‌ ಪುತ್ತಿಲ, ಮುರಳೀಕೃಷ್ಣ
ಹಸಂತಡ್ಕ, ಭವಾನಿ ಚಿದಾನಂದ ಮೊದಲಾದವರಿದ್ದರು. ಮೂಡಬಿದಿರೆ ಬಸ್‌ ನಿಲ್ದಾಣ ಬಳಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ್‌, ಮುಖಂಡರಾದ ಉಮಾನಾಥ್‌ ಕೋಟ್ಯಾನ್‌, ಶ್ಯಾಮ್‌ಹೆಗ್ಡೆ, ವಕೀಲ ಕೆ. ಆರ್‌. ಪಂಡಿತ್‌ ಉಪಸ್ಥಿತರಿದ್ದರು. ಬಿ.ಸಿ. ರೋಡ್‌, ಬೆಳ್ತಂಗಡಿ, ಮೂಡಬಿದಿರೆ ಮುಂತಾದೆಡೆ ಶರತ್‌ ಹೆತ್ತವರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next