Advertisement

ಪುತ್ತೂರು ಗಾಂಧಿ ಕಟ್ಟೆ ಬಳಿ ಕಾಂಗ್ರೆಸ್‌ನಿಂದ ಸದ್ಭಾವನ ಉಪವಾಸ

02:54 PM Nov 27, 2017 | Team Udayavani |

ನಗರ: ನಮ್ಮ ರಕ್ಷಣೆಗೆ ನಾವೇ ಮುಂದಾಗಬೇಕು. ಇದಕ್ಕಾಗಿ ಒಗ್ಗಟ್ಟಿನಿಂದ ಮುನ್ನುಗ್ಗಬೇಕು. ಶಾಂತಿ, ಸೌಹಾರ್ದದಿಂದ ಬದುಕುವಂತೆ ಆಗಬೇಕು ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು. ಗಾಂಧಿ ಕಟ್ಟೆ ಬಳಿ ರವಿವಾರ ನಡೆದ ಸದ್ಭಾವನ ಉಪವಾಸದಲ್ಲಿ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

Advertisement

ನಮ್ಮ ನಡುವೆ ಜಾತಿ, ಧರ್ಮಗಳೆಂಬ ಕಂದಕ ಬೆಳೆದು ನಿಂತಿದೆ. ಇವೆಲ್ಲ ದೂರವಾಗಿ, ನಾವೆಲ್ಲ ಒಂದೇ ಎಂಬ ಭಾವನೆಯಿಂದ ಸಮಾಜದಲ್ಲಿ ಬಾಳುವಂತಾಗಬೇಕು. ಎರಡೇ ಜಾತಿ- ಒಂದು ಹೆಣ್ಣು, ಇನ್ನೊಂದು ಗಂಡು. ಹರಿವ ರಕ್ತ ಒಂದೇ ಎಂಬ ಸತ್ಯವನ್ನು ತಿಳಿದುಕೊಂಡು, ಸಮಾಜಮುಖೀಯಾಗಿ ಮುನ್ನಡೆಯಬೇಕು ಎಂದರು.

ಹಿಂದೂ ಅಲ್ಲ, ವೈದಿಕ ಧರ್ಮ
ಈ ದೇಶಕ್ಕೆ ಮೊದಲು ವಲಸೆ ಬಂದವರು ಆರ್ಯನ್ನರು. ದ್ರಾವಿಡರು ಇಲ್ಲಿನ ಮೂಲ ನಿವಾಸಿಗಳು. ಆರ್ಯನ್ನರು ಜತೆಗೆ ವೈದಿಕ ಶ್ರೇಣಿಯನ್ನು ತಂದರು. ತಮ್ಮ ರಕ್ಷಣೆಗಾಗಿ ಇದನ್ನು ಬಳಸಿಕೊಂಡರು. ಇತರರನ್ನು ಗುಲಾಮರಾಗಿಸಲು ಸುಳ್ಳಿನ ಕಂತೆಯನ್ನು ಸೃಷ್ಟಿಸಿದರು. ಇಲ್ಲಿನ ಮೂಲ ನಿವಾಸಿಗಳು ಶ್ರೇಣಿ ಪದ್ಧತಿಯ ನಾಲ್ಕು ವಿಭಾಗದಲ್ಲೂ ಬರುವುದಿಲ್ಲ. ಅವರನ್ನು ಪಂಚಮರು ಎಂದು ಗುರುತಿಸಲಾಗಿದೆ. ಆದ್ದರಿಂದ ಹಿಂದೂ ಧರ್ಮ ಎನ್ನುವುದೇ ತಪ್ಪು. ಇದು ವೈದಿಕ ಧರ್ಮ ಎಂದಾಗಬೇಕು. ಹಿಂದೂ ಧರ್ಮ ಎಂಬ ಉಲ್ಲೇಖ ಎಲ್ಲಿಯೂ ಬರುವುದಿಲ್ಲ ಎಂದು ಪ್ರತಿಪಾದಿಸಿದರು.

ವಾಸ್ತವವಲ್ಲ
ಶಿವಾಜಿ, ವಿವೇಕಾನಂದರನ್ನು ಹಿಂದೂ ಧರ್ಮ ಪ್ರತಿಪಾದಕರು ಎಂಬುದಾಗಿ ಬಿಂಬಿ ಸಲಾಗಿದೆ. ಇದು ವಾಸ್ತವವಲ್ಲ. ತಮ್ಮ ಹಿತಾಸಕ್ತಿ ಸಾಧಿಸಲು ಹಿಂದೂ ಧರ್ಮ ಪ್ರತಿಪಾದಕರು ಎಂಬುದಾಗಿ ಚಿತ್ರಿಸಲಾಗಿದೆ. ಶಿವಾಜಿ ಆಸ್ಥಾನದ ಪ್ರಮುಖ ನ್ಯಾಯಮೂರ್ತಿ ಹುದ್ದೆಯಲ್ಲಿದ್ದದ್ದು ಮುಸ್ಲಿಂ. ಇವರೆಲ್ಲ ಒಂದು ಧರ್ಮಕ್ಕೆ ಸೀಮಿತರಾಗಿರಲಿಲ್ಲ ಎಂದರು.

ಆಡಳಿತ ನಡೆಸುವವರು ಧರ್ಮಧಾರಿತವಾಗಿ ಇರಬಾರದು. ವೈಜ್ಞಾನಿಕ, ವೈಚಾರಿಕ ದೃಷ್ಟಿಕೋನದಿಂದ ಆಡಳಿತ ನಡೆಸಬೇಕು. ಧರ್ಮವನ್ನು ಅಫೀಮು ಮಾಡಿ, ಜನರಿಗೆ ತಿನ್ನಿಸುವ ಕೆಲಸ ನಡೆಯುತ್ತಿದೆ. ಇದು ಮುಂದುವರಿದರೆ ದೇಶದ ಅಭಿವೃದ್ಧಿ ಕುಂಠಿತವಾಗುವುದು ನಿಸ್ಸಂಶಯ. ಹಿಂದೆ ಭಾರತಕ್ಕೆ ದಾಳಿ ಮಾಡಿದ ಮೊಘಲರು ಮುಸ್ಲಿಂ ದೇಶವಾಗಿ ಪರಿವರ್ತಿಸಲು ಪ್ರಯತ್ನಿಸಿದರು, ಬ್ರಿಟಿಷರು ಕ್ರೈಸ್ತ ದೇಶವಾಗಿಸಲು ಯತ್ನಿಸಿದರು, ಆದರೆ ಇದಾವುದೂ ಆಗಲೇ ಇಲ್ಲ. ಆದ್ದರಿಂದ ಕೋಮುವಾದಿಗಳು ಹಿಂದೂ ದೇಶ ಮಾಡುತ್ತೇವೆ ಎಂಬ ಪ್ರಯತ್ನ ಫಲಿಸುವುದಿಲ್ಲ. ಐದು- ಹತ್ತು ವರ್ಷಗಳ ಆಡಳಿತದಲ್ಲಿ ಇದ್ದ ಮಾತ್ರಕ್ಕೆ ದೇಶವನ್ನು ಒಂದು ಧರ್ಮಕ್ಕೆ ಸೀಮಿತ ಮಾಡಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಕರಪತ್ರ ಅನಾವರಣ
ಇದೇ ಸಂದರ್ಭ ಸದ್ಭಾವನ ಉಪವಾಸದ ಕರಪತ್ರವನ್ನು ಅನಾವರಣಗೊಳಿಸಲಾಯಿತು. ಕೆಪಿಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್‌, ಪುಡಾ ಅಧ್ಯಕ್ಷ ಕೌಶಲ್‌ ಪ್ರಸಾದ್‌ ಶೆಟ್ಟಿ, ಸೇವಾದಳದ ಜೋಕಿಂ, ನಗರ ಕಾಂಗ್ರೆಸ್‌ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ವಿಟ್ಲ- ಉಪ್ಪಿನಂಗಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಜಿಲ್ಲಾ ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಲುಕ್ಮಾ ನ್‌,ತಾ| ಇಂಟಕ್‌ ಅಧ್ಯಕ್ಷ ಜಯಪ್ರಕಾಶ್‌ಬದಿನಾರು, ಕಾರ್ಯದರ್ಶಿ ಎಂ.ಜಿ. ರಫೀಕ್‌, ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಯಾಕೂಬ್‌ ಹಾಜಿ, ನಗರಸಭೆ ಸದಸ್ಯೆ ವಾಣಿ ಶ್ರೀಧರ್‌, ಮುಖಂಡರಾದ ರೋಶನ್‌ ರೈ, ಕೃಷ್ಣ ಪ್ರಸಾದ್‌ ಆಳ್ವ, ಲ್ಯಾನ್ಸಿ ಮಸ್ಕರೇನ್ಹಸ್‌, ವಿ.ಎಚ್‌. ಅಬ್ದುಲ್‌ ಶಕೂರ್‌ ಭಾಗವಹಿಸಿದ್ದರು. ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಇಸಾಕ್‌ ಸಾಲ್ಮರ ನಿರೂಪಿಸಿದರು. ದಾವಣಗೆರೆ ತಂಡದವರು ಆಶಯ ಗೀತೆ ಹಾಡಿದರು.

ಸಂವಿಧಾನ ಬದಲಾಯಿಸಬೇಕೆಂಬ ಉದ್ದೇಶ ಏನು?
ಮಾನವ ಬಂಧುತ್ವ ವೇದಿಕೆ ಸಂಚಾಲಕ ವಿಲ್ಫ್ರೆಡ್ ಡಿ’ಸೋಜಾ ಮಾತನಾಡಿ, ಸತ್‌ ಭಾವನೆ ಮೂಡಿಸಲು ಗಾಂಧಿ ಅಸ್ತ್ರವನ್ನೇ ಬಳಸುತ್ತಿದ್ದೇವೆ. ಹಲವು ಕಾಳಜಿ, ಕನಸು ಇಟ್ಟುಕೊಂಡು ಸಂವಿಧಾನ ರಚಿಸಲಾಗಿದೆ. ಇಂತಹ ಸಂವಿಧಾನವನ್ನೇ ಬದಲಾಯಿಸಬೇಕು ಎಂದು ಕೆಲವರು ಮುಂದಾಗಿದ್ದಾರೆ. ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎನ್ನುವುದು ಅವರ ಉದ್ದೇಶವಲ್ಲ. ಸಂವಿಧಾನವನ್ನೇ ಬದಲಾಯಿಸಬೇಕು ಎನ್ನುವುದು ಎಷ್ಟು ಸರಿ. ಇದರ ಹಿಂದಿನ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಉಪವಾಸ ಅಸ್ತ್ರ
ಧರ್ಮಗುರು ಎಸ್‌.ಪಿ. ಧಾರಿಮಿ ಮಾತನಾಡಿ, ಮಾನವನಿಗೆ ಬುದ್ಧಿ ಇರುವುದರಿಂದ ಏನೆಲ್ಲ ಅನಾಹುತ ಸಂಭವಿಸಿತು. ಸೀಮಿತ ಬುದ್ಧಿಯ ಪ್ರಾಣಿ- ಪಕ್ಷಗಳು ಈ ಜಗತ್ತಿನಲ್ಲಿ ಹಾಯಾಗಿವೆ. ಆದ್ದರಿಂದ ಇಂದು ಮಾನವರಾಗೋಣ ಎಂಬ ಹಾಡನ್ನು ಹಾಡುವಂತಾಗಿದೆ. ಜಗತ್ತಿನಲ್ಲಿ ಮನುಷ್ಯತ್ವವನ್ನು ಕೊಂದು ಹಾಕಿ, ಪ್ರಾಣಿಗಳಿಗಿಂತ ಕೆಟ್ಟದಾಗಿ ವರ್ತಿಸುತ್ತಿದ್ದಾನೆ ಮನುಷ್ಯ. ಇಂತಹ ಜಾಡ್ಯವನ್ನು ತೊಡೆದು ಹಾಕಲು, ಬ್ರಿಟಿಷರನ್ನು ಓಡಿಸಿದ ಅಸ್ತ್ರವನ್ನೇ ಪ್ರಯೋಗಿಸುತ್ತಿದ್ದೇವೆ ಎಂದರು.

ಮಾನವತಾವಾದಿಯಾಗಿ ಜತೆಯಾಗುತ್ತಾರೆ 
ಶಾಸಕಿ ಶಕುಂತಳಾ ಶೆಟ್ಟಿ ಭಾಷಣ ಮಾಡುತ್ತಿದ್ದಂತೆ, ಪಕ್ಕದಲ್ಲಿ ಹಿಂದೂ ಸಮಾಜೋತ್ಸವಕ್ಕೆ ತೆರಳುವ ವಾಹನದಿಂದ ಘೋಷಣೆಗಳು ಕೇಳಿಬಂದವು. ಮುಂದೊಂದು ದಿನ ಅವರು ನಮ್ಮ ಜತೆ ಮಾನವತಾವಾದಿಗಳಾಗಿ ಸೇರಿಕೊಳ್ಳುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next