Advertisement

ಫಾಸ್ಟ್‌ ಟ್ಯಾಗ್‌ ಮೂಲಕ ಒಂದೇ ದಿನದಲ್ಲಿ 80 ಕೋಟಿ ರೂ. ಸಂಗ್ರಹ

11:27 AM Dec 26, 2020 | Nagendra Trasi |

ನವದೆಹಲಿ: ದೇಶದಲ್ಲಿ ಜನವರಿ 1ರಿಂದ ಫಾಸ್ಟ್‌ ಟ್ಯಾಗ್‌ ಬಳಕೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿರುವ ಹೊತ್ತಲ್ಲೇ, ಡಿಸೆಂಬರ್‌ 24ರಂದು ಫಾಸ್ಟ್‌ಟ್ಯಾಗ್‌ ಮೂಲಕ ಟೋಲ್‌ ಸಂಗ್ರಹದ ಪ್ರಮಾಣ ಇದೇ ಮೊದಲ ಬಾರಿ ಒಂದೇ ದಿನದಲ್ಲಿ 80 ಕೋಟಿ ರೂಪಾಯಿ ದಾಟಿದ್ದು, ಗುರುವಾರವೊಂದೇ ದಿನ 50 ಲಕ್ಷಕ್ಕೂ ಅಧಿಕ ವಹಿವಾಟುಗಳು ನಡೆದಿವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

Advertisement

ದೇಶದಲ್ಲಿ ಇದುವರೆಗೂ 2.2 ಕೋಟಿ ಫಾಸ್ಟ್‌ ಟ್ಯಾಗ್‌ ಬಳಕೆದಾರರಿದ್ದು, ಜನವರಿ ಒಂದರಿಂದ ಈ ಸಂಖ್ಯೆಯಲ್ಲಿ ಅಭೂತ ಪೂರ್ವ ಬೆಳವಣಿಗೆಯಾಗುವ ನಿರೀಕ್ಷೆಯಿದೆ. ಫಾಸ್ಟ್‌ ಟ್ಯಾಗ್‌ಗಳು ದೇಶಾದ್ಯಂತ 30000 ಪಿಒಎಸ್‌ ಗಳಲ್ಲಿ, 22ಕ್ಕೂ ಅಧಿಕ ಬ್ಯಾಂಕ್‌ ಗಳಲ್ಲಿ, ರಾಷ್ಟ್ರೀಯ ಹೆದ್ದಾರಿಯಲ್ಲಿನ ಪ್ಲಾಜಾಗಳಲ್ಲಿ, ಅಮೆಜಾನ್‌, ಫ್ಲಿಪ್‌ ಕಾರ್ಟ್‌, ಪೇಟಿ ಎಂನಂಥ ಡಿಜಿಟಲ್‌ ವೇದಿಕೆಗಳಲ್ಲಿ ಲಭ್ಯವಿವೆ.

ಪೆಟ್ರೋಲ್‌ ವಾಹನಕ್ಕೆ ಜಪಾನ್‌ ನಿಷೇಧ
ಟೋಕಿಯೊ: ಮುಂದಿನ 15 ವರ್ಷಗಳಲ್ಲಿ ತನ್ನಲ್ಲಿನ ಎಲ್ಲಾ ಪೆಟ್ರೋಲ್‌ ಚಾಲಿತ ವಾಹನಗಳನ್ನು ನಿಷೇಧಿಸುವುದಾಗಿ ಜಪಾನ್‌ ಹೇಳಿದೆ. 2050ರ ವೇಳೆಗೆ ಜಪಾನ್‌ ಅನ್ನು ಇಂಗಾಲ ಮುಕ್ತಗೊಳಿಸಬೇಕು ಹಾಗೂ ಹಸಿರು ಹೂಡಿಕೆಯ ಮೂಲಕ 2  ಟ್ರಿಲಿಯನ್‌ ಡಾಲರ್‌ ನಷ್ಟು ಆದಾಯ ಸೃಷ್ಟಿಸಬೇಕೆಂಬ ಪ್ರಧಾನಿ ಯೋಶಿಹಿದೆ ಸುಗಾ ಅವರ ಮಹತ್ವಾಕಾಂಕ್ಷಿ ಗುರಿಯ ಭಾಗವಾಗಿ ಜಪಾನ್‌ ಈ ಹೆಜ್ಜೆಯಿಡಲು ಸಜ್ಜಾಗಿದೆ.

ಅಕ್ಟೋಬರ್‌ ತಿಂಗಳಲ್ಲಿ “ಗ್ರೀನ್‌ ಗ್ರೋತ್‌ ಸ್ಟ್ರಾಟೆಜಿ’ಯನ್ನು ಪ್ರಸ್ತುತ ಪಡಿಸಿದ್ದರು. ಈ ಯೋಜನೆಯ ಭಾಗವಾಗಿ ಜಪಾನ್‌ ಸರ್ಕಾರ ಸೋಲಾರ್‌, ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನೆ ತೊಡಗಿಕೊಳ್ಳುವ ಕಂಪನಿಗಳಿಗೆ ತೆರಿಗೆ ವಿನಾಯಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next