Advertisement

ಕೇಂದ್ರದಿಂದ ಶೀಘ್ರ ಪಡಿತರ ಪೂರೈಕೆ: ನಳಿನ್‌

11:16 AM Apr 09, 2020 | Sriram |

ಸುಳ್ಯ: ರಾಜ್ಯ ಸರಕಾರದ ಪಡಿತರ ವಿತರಣೆ ಪ್ರಗತಿಯಲ್ಲಿದ್ದು, ಪಡಿತರ ವಿತರಣೆ ಸಮ ರ್ಪಕವಾಗಿ ನಡೆಯುತ್ತಿದೆ. ಕೇಂದ್ರ ಘೋಷಿಸಿರುವ ಪಡಿತರ ಸಾಮಗ್ರಿ ಈವಾರ ಬರಲಿದ್ದು, ಮುಂದಿನ ದಿನ ಗಳಲ್ಲಿ ಫಲಾನುಭವಿಗಳಿಗೆ ವಿತರಣೆ ನಡೆಯಲಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.

Advertisement

ಕೋವಿಡ್ 19 ನಿಯಂತ್ರಣದ ವಿರುದ್ಧ ಜಿಲ್ಲೆಯಲ್ಲಿ ವೈದ್ಯರು, ಪೊಲೀಸ್‌ ಸಿಬಂದಿ, ಇಲಾಖಾ ಅಧಿಕಾರಿಗಳು, ಆಶಾ ಕಾರ್ಯಕರ್ತರು ಹಗಲಿರುಳು ದುಡಿಯುತ್ತಿದ್ದಾರೆ. ಇದಕ್ಕೆ ಜನರು ಕೂಡ ಸಹಕಾರ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಆರಂಭದ ದಿನಗಳಲ್ಲಿ ಕೋವಿಡ್ 19  ವೈರಸ್‌ ಹೆಚ್ಚಳ ಕಂಡು ರೆಡ್‌ ಅಲರ್ಟ್‌ ಘೋಷಣೆ ಮಾಡಲಾಯಿತು. ಇದಾದ ಬಳಿಕ ಜಿಲ್ಲಾಡಳಿತ, ಅಧಿಕಾರಿಗಳ ಅರ್ಹನಿಶ ದುಡಿಮೆ, ಜಿಲ್ಲೆಯ ಶಾಸಕರು, ಸಚಿವರು, ಅಧಿಕಾರಿಗಳು ಸೇರಿ ಅನೇಕ ಮುಂಜಾಗ್ರತಾ ಕ್ರಮ ಜಾರಿಗೊಳಿಸಿದ ಪರಿಣಾಮ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿದೆ. ಪ್ರಥಮ ಹಂತದಲ್ಲಿ ದಾಖಲಾದ ರೋಗಿಗಳು ಗುಣಮುಖರಾಗಿರುವುದು ಇದಕ್ಕೆ ಉದಾಹರಣೆ ಎಂದರು.

ಸುಳ್ಯದಲ್ಲಿ ಫೀವರ್‌ ಕ್ಲಿನಿಕ್‌ ಉತ್ತಮವಾಗಿ ಕೆಲಸ ಮಾಡುತ್ತಿದೆ. ತಾಲೂಕಿನಲ್ಲಿ ಒಂದು ಪ್ರಕರಣ ಕಂಡು ಬಂದಿದ್ದು, ಇದಕ್ಕಾಗಿ ಅಜ್ಜಾವರ ಗ್ರಾಮವನ್ನು ಕ್ವಾರಂಟೈನ್‌ ಮಾಡಲಾಗಿದೆ. ವೈದ್ಯಕೀಯ, ಆರೋಗ್ಯ ಕೇಂದ್ರದ ಅಭಿವೃದ್ಧಿಗೆ ಸಂಸದರ ನಿಧಿಯ ಅನುದಾನವನ್ನು ಎಲ್ಲ ಸಂಸದರು ಪ್ರಧಾನಮಂತ್ರಿ ನಿಧಿಗೆ ನೀಡಿದ್ದಾರೆ ಎಂದರು.

ಕಂತು ಕಟ್ಟಲು ಕಡ್ಡಾಯ ಮಾಡುವಂತಿಲ್ಲ
ವಿದ್ಯುತ್‌ ಬಿಲ್‌ ಪಾವತಿಗೆ 3 ತಿಂಗಳು ಸಡಿಲಿಕೆ ನೀಡಲಾಗಿದೆ. ಬಿಲ್‌ ಕಟ್ಟುವವರು ಕಟ್ಟಬಹುದು ಅದೇ ರೀತಿ ಕೇಂದ್ರದ ಯೋಜನೆಗಳ ಹಣ ಕೂಡ ಜನರ ಬ್ಯಾಂಕ್‌ ಖಾತೆಗಳಿಗೆ ಸಂದಾಯವಾಗುತ್ತಿದೆ. ಇಎಂಐ ಕಟ್ಟಲು ನೋಟಿಸ್‌ ಬರುತ್ತದೆ. ಆದರೆ ಕಂತು ಕಟ್ಟಲು ಕಡ್ಡಾಯ ಮಾಡುವಂತಿಲ್ಲ ಎಂದು ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ ಎಂದರು.

Advertisement

ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಯುತ್ತಿದೆ. ಇದು ಖಂಡನೀಯ. ಅವರ ರಕ್ಷಣೆಗೆ ಸರಕಾರ ಕಠಿನ ಕ್ರಮ ಕೈಗೊಳ್ಳಲಿದೆ ಎಂದರು.

ತಾಲೂಕಿನಲ್ಲಿ ಲಾಕ್‌ಡೌನ್‌ ಸಮರ್ಪಕವಾಗಿ ಅನುಷ್ಠಾನವಾಗು ತ್ತಿದೆ. ಗ್ರಾಮ ಮrಟದಲ್ಲಿ ರಚಿಸಿದ ಟಾಸ್ಕ್ ಪೋರ್ಸ್‌ ಸಮಿತಿಗಳು ಗ್ರಾಮದಲ್ಲಿ ನಿರ್ಗತಿಕರು, ಅಸಾಹಯಕರು, ಕಷ್ಟದಲ್ಲಿರುವವರನ್ನು ಗುರುತಿಸಿ ಅವರಿಗೆ ಆಹಾರದ ವ್ಯವಸ್ಥೆ ಮಾಡ ಬೇಕು. ಎನ್‌ಜಿಒಗಳು ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಿವೆ ಎಂದರು.

ತಾಲೂಕು ಪಂಚಾಯತ್‌ ಅಧ್ಯಕ್ಷ ಚನಿಯ ಕಲ್ತಡ್ಕ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್‌ ಕಂಜಿಪಿಲಿ ನ.ಪಂ. ಸದಸ್ಯ ವಿನಯ ಕುಮಾರ್‌ ಕಂದಡ್ಕ, ಮುಖಂಡರಾದ ಸುಬೋಧ ಶೆಟ್ಟಿ ಮೇನಾಲ, ಸುರೇಶ್‌ ಕಣೆಮರಡ್ಕ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next