Advertisement

ಬಿಜೆಪಿಯಿಂದ ಶೀಘ್ರ ಮುಸ್ಲಿಂ ಸಂಪರ್ಕ ಅಭಿಯಾನ

10:41 PM Feb 20, 2023 | Team Udayavani |

ನವದೆಹಲಿ : ದೇಶದಲ್ಲಿರುವ ಅಲ್ಪಸಂಖ್ಯಾತ ಸಮುದಾಯಗಳನ್ನು ಸಂಪರ್ಕಿಸುವ ಕಾರ್ಯಕ್ರಮ ಮುಂದಿನ ತಿಂಗಳು ಶುರುವಾಗಲಿದೆ.

Advertisement

ವಿಶೇಷವಾಗಿ ಪಸ್ಮಾಂಡ ಮುಸ್ಲಿಂ ಸಮುದಾಯವನ್ನು ತಲುಪುವಂತೆ ಇತ್ತೀಚೆಗೆ ನಡೆದಿದ್ದ ಪಕ್ಷದ ಕಾರ್ಯಕಾರಿಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಅದಕ್ಕೆ ಅನುಸಾರವಾಗಿ , ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ, ಮುಂದಿನ ಮಾ.10ರಿಂದ ದೇಶಾದ್ಯಂತ ಸಮುದಾಯದ ಮುಖಂಡರನ್ನು ಸಂಪರ್ಕಿಸುವ ಅಭಿಯಾನ ಆರಂಭಿಸಲಿದೆ.

ಮೊದಲ ಹಂತವಾಗಿ 14 ರಾಜ್ಯಗಳ 64 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಈ ರಾಜ್ಯಗಳ ಪೈಕಿ ಜಮ್ಮು ಮತ್ತು ಕಾಶ್ಮೀರ, ದೆಹಲಿ, ತೆಲಂಗಾಣ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಕೂಡ ಸೇರಿದೆ. ಈಗಾಗಲೇ ಪ್ರಚಾರ ಕಾರ್ಯ ಸಂಬಂಧಿಸಿದಂತೆ ರಾಷ್ಟ್ರೀಯ ತಂಡ ಹಾಗೂ ಉಸ್ತುವಾರಿಗಳನ್ನು ನೇಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next