Advertisement

ಚಿತ್ರಕಲಾ ಶಿಬಿರದಲ್ಲಿ ಆಕರ್ಷಕ ಕಲಾಕೃತಿಗಳು

09:39 AM Apr 18, 2019 | Lakshmi GovindaRaju |

ಮೈಸೂರು: ಹಸಿರಿನಿಂದ ಕಂಗೊಳಿಸುವ ಕಾನನ, ಪ್ರಶಾಂತ ಸಾಗರದಲ್ಲಿ ಮುಳುಗುವ ಸೂರ್ಯ, ಗರಿಬಿಚ್ಚದ ನವಿಲು ಸೇರಿದಂತೆ ಗಿಡ-ಮರ, ಬಳ್ಳಿ ನೋಡುಗರನ್ನು ಸೆಳೆಯುವಂತಿತ್ತು.

Advertisement

ಇಂತಹದೊಂದು ವೇದಿಕೆ ಸೃಷ್ಟಿಯಾಗಿದ್ದು, ಜೆಎಸ್‌ಎಸ್‌ ಆಸ್ಪತ್ರೆ ಆವರಣದ ಶ್ರೀರಾಜೇಂದ್ರ ಭವನದಲ್ಲಿ. ಕಳೆದ 17 ದಿನಗಳ ಕಾಲ ನಡೆದ ಚಿತ್ರಕಲಾ ತರಬೇತಿ ಶಿಬಿರದಲ್ಲಿ ಕಲಿತ ಮಕ್ಕಳು ಕ್ಯಾನ್ವಾಸ್‌ ಮತ್ತು ಬಿಳೆಯ ಹಾಳೆಯ ಮೇಲೆ ಪ್ರಕೃತಿಯ ಸೊಬಗು, ಕಾಡು ಮೃಗಗಳು ಜೀವ ಪಡೆದಿದ್ದವು.

ಬುಧವಾರ ಜೆಎಸ್‌ಎಸ್‌ ಆಸ್ಪತ್ರೆ ಆವರಣದ ಶ್ರೀರಾಜೇಂದ್ರ ಭವನದಲ್ಲಿ ಆಯೋಜಿಸಿದ್ದ ಶಿಬಿರದ ಸಮಾರೋಪದ ಅಂಗವಾಗಿ ಮಕ್ಕಳು ರಚಿಸಿದ್ದ ಸೊಗಸಾದ ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ತಮ್ಮ ಮಕ್ಕಳ ಕಲಾ ಪ್ರತಿಭೆಯನ್ನು ನೋಡಿದ ಪೋಷಕರು ಖುಷಿಯಿಂದ ಬೀಗಿದರು.

ಶಿಬಿರದಲ್ಲಿ ಪಾಲ್ಗೊಂಡಿದ್ದ 57 ವಿದ್ಯಾರ್ಥಿಗಳನ್ನು 1ರಿಂದ 3ನೇ ತರಗತಿವರೆಗೆ, 4 ರಿಂದ 6ನೇ ತರಗತಿವರೆಗೆ, 7 ರಿಂದ ಮೇಲ್ಪಟ್ಟ ತರಗತಿ ಮಕ್ಕಳನ್ನು ಪ್ರತ್ಯೇಕವಾಗಿ ಮೂರು ವಿಭಾಗಗಳಲ್ಲಿ ವಿಂಗಡಿಸಿ, ಕಲಾವಿದರು ಚಿತ್ರಕಲೆ ತರಬೇತಿ ನೀಡಿದ್ದರು. ಶಿಬಿರದ ವೇಳೆ ಮಕ್ಕಳು ರಚಿಸಿದ್ದ ಅತ್ಯತ್ತಮ ಚಿತ್ರಗಳನ್ನು ಪ್ರದರ್ಶನಕ್ಕಿರಿಸಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಿಮಿಸಿದ್ದ ಕಲಾನಿಕೇತನ ಸ್ಕೂಲ್‌ ಆಫ್ ಆರ್ಟ್‌ ಪ್ರಾಂಶುಪಾಲ ಕೆ.ಸಿ.ಮಹದೇವಶೆಟ್ಟಿ ಮಾತನಾಡಿ, ಪ್ರಪಂಚದಲ್ಲಿ ಭಾಷೆ ಹುಟ್ಟುವ ಮುಂಚೆಯೇ ಚಿತ್ರಕಲೆ ಹುಟ್ಟಿತ್ತು. ಚಿತ್ರಗಳನ್ನು ಜಗತ್ತಿನ ಯಾವುದೇ ಭಾಷೆಯ ವ್ಯಕ್ತಿಗೆ ತೋರಿಸಿದರೂ, ಚಿತ್ರಕಲೆಯ ಭಾಷೆ ಅರ್ಥವಾಗುತ್ತದೆ. ಚಿತ್ರಕಲೆ ಎಲ್ಲ ಪ್ರದೇಶದ, ಎಲ್ಲ ವ್ಯಕ್ತಿಗಳಿಗೆ ಅರ್ಥವಾಗುವ ಸರಳ ಭಾಷೆಯಾಗಿದೆ ಎಂದು ಹೇಳಿದರು.

Advertisement

ಚಿತ್ರಕಲೆ ಮನುಷ್ಯನ ಮೇಲೆ ಪ್ರಭಾವ ಬೀರುವ ಅಂಶವಾಗಿದ್ದು, ಬಣ್ಣ ಮತ್ತು ರೇಖೆಗಳ ಮೂಲಕ ಸರಳವಾಗಿ ಚಿತ್ರಗಳನ್ನು ಅಥೆìçಸಿಕೊಳ್ಳಬಹುದು. ಮಕ್ಕಳಲ್ಲಿ ಚಿತ್ರಕಲೆ ಗೀಚುವಿಕೆಯಿಂದ ಆರಂಭವಾಗುತ್ತದೆ. ಆದರೆ ಅದು ಪೋಷಕರಿಗೆ ಅರ್ಥವಾಗುವುದಿಲ್ಲ. ಅವರಿಗೆ ಒತ್ತಡ ಹೇರುವ ಮೂಲಕ ಮಕ್ಕಳ ಮನಸ್ಸನ್ನು ಕಲ್ಮಶಗೊಳಿಸುತ್ತಿದ್ದೇವೆ. ಇದರಿಂದ ಅವರ ಕಲೆಯ ಸೂಕ್ಷ್ಮತೆ ಹಾಗೂ ಆಸಕ್ತಿ ನಾಶವಾಗುತ್ತದೆ ಎಂದರು.

ಚಿತ್ರ ರಚಿಸುವಾಗ ಮಕ್ಕಳಲ್ಲಿ ಕ್ರಿಯಾಶೀಲತೆ ಚುರುಕುಗೊಳ್ಳುತ್ತದೆ. ಅವರ ಆಸಕ್ತಿ ಮತ್ತು ಅಭಿರುಚಿಯನ್ನು ಪೋಷಕರು ಗಮನಿಸಿ ಪ್ರೋತ್ಸಾಹಿಸಿದರೆ ಮುಂದೆ ಪ್ರತಿಭಾವಂತರಾಗುತ್ತಾರೆ. ಚಿತ್ರಕಲೆ ಕ್ಷೇತ್ರದಲ್ಲಿಯೂ ಸಾಕಷ್ಟು ಅವಕಾಶಗಳಿದ್ದು, ಒಳ್ಳೆಯ ಸಾಧನೆಯನ್ನು ಮಾಡಬಹುದಾಗಿದೆ ಎಂದು ಹೇಳಿದರು.

ಇದೇ ವೇಳೆ ಶಿಬಿರದಲ್ಲಿ ಉತ್ತಮವಾಗಿ ಚಿತ್ರ ರಚಿಸಿದ್ದ ಮಕ್ಕಳಿಗೆ ನಗದು ಬಹುಮಾನ ನೀಡಲಾಯಿತು. ತಂಡ ಒಂದರಲ್ಲಿ ಅಭಿನಂದನ್‌(ಪ್ರಥಮ), ಕುಸುಮಾಂಜಲಿ(ದ್ವಿತೀಯ), ತಂಡ 2ರಲ್ಲಿ ಕುಶಾಲ್‌(ಪ್ರಥಮ), ಪ್ರೀತಂ(ದ್ವಿತೀಯ) ಹಾಗೂ ತಂಡ 3 ರಲ್ಲಿ ಸಂಜನಾ(ಪ್ರಥಮ), ಆಯುಷ್‌ ಗೌಡ(ದ್ವಿತೀಯ) ಬಹುಮಾನ ನೀಡಲಾಯಿತು.

ಜೆಎಸ್‌ಎಸ್‌ ಮಹಾವಿದ್ಯಾಪೀಠ ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಚಿತ್ರಕಲಾ ಶಿಬಿರದ ಸಂಚಾಲಕ ಎಸ್‌.ಎಂ. ಜಂಬುಕೇಶ್ವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next