Advertisement

ವಿಧಾನ ಸೌಧದಲ್ಲಿ ನಮಾಜ್ ಮಾಡಲು ಕೊಠಡಿ ವ್ಯವಸ್ಥೆ ಮಾಡಲು ಫಾರೂಕ್ ಮನವಿ

07:38 PM Jul 10, 2023 | Team Udayavani |

ವಿಧಾನಪರಿಷತ್ : ಸೋಮವಾರದ ಕಲಾಪದಲ್ಲಿ ಜೆಡಿಎಸ್ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅವರು ವಿಧಾನಸಭೆಯಲ್ಲಿ ನಮಾಜ್ ಮಾಡಲು ಸಣ್ಣ ಕೊಠಡಿ ವ್ಯವಸ್ಥೆ ಮಾಡಿಕೊಡಲು ಮನವಿ ಮಾಡಿದರು.

Advertisement

ಸಚಿವ ಎಚ್.ಕೆ.ಪಾಟೀಲ್ ಪ್ರತಿಕ್ರಿಯಿಸಿ, ಸಭಾಧ್ಯಕ್ಷರ ಕೊಠಡಿಯಲ್ಲಿ ಸಭೆ ಕರೆದ ವೇಳೆ ನಾಯಕರ ಮಾತುಗಳನ್ನು ಕೇಳಿ, ಅಧ್ಯಕ್ಷರು ಏನು ಅಪೇಕ್ಷೆ ಮಾಡುತ್ತಾರೆ ಎಂದು ಒಂದು ನಿರ್ಣಯ ಮಾಡಲು ಸರಕಾರ ತೀರ್ಮಾನಿಸುತ್ತದೆ ಎಂದರು.

ಪಾರ್ಕಿಂಗ್ ಸಮಸ್ಯೆ

ವಿಧಾನಸೌಧದ ಪಾರ್ಕಿಂಗ್ ಪ್ರದೇಶದಲ್ಲಿ ಶಾಸಕರ ಕಾರುಗಳು ನಿಲ್ಲಿಸಲು ಸ್ಥಳಾವಕಾಶ ಇಲ್ಲ ಎನ್ನುವ ವಿಚಾರವನ್ನು ಬಿಜೆಪಿ ಸದಸ್ಯ ಡಿ.ಎಸ್. ಅರುಣ್ ಪ್ರಸ್ತಾವಿಸಿದರು. ಸಭೆ ನಡೆಸಿ ಇದಕ್ಕೆ ಪರಿಹಾರ ಕಂಡುಕೊಳ್ಳೋಣ ಎಂದು ಸಚಿವ ಎಚ್.ಕೆ.ಪಾಟೀಲ್ ಉತ್ತರಿಸಿದರು.

ದಲ್ಲಾಳಿಗಳ ಆಗಮನ

Advertisement

ಜೆಡಿಎಸ್ ಸದಸ್ಯ ಶರವಣ ಅವರು ಕ್ಯೂ ಆರ್ ಕೋಡ್ ಇಲ್ಲವೇ ಇತರ ತಂತ್ರಜ್ಞಾನ ಬಳಸಿ ನಕಲಿ ಪಾಸ್ ತಡೆಯಬೇಕು ಎಂದರು. ಇದಕ್ಕೆ ಉತ್ತರಿಸಿದ ಸಚಿವ ಎಚ್.ಕೆ.ಪಾಟೀಲ್, ನಮ್ಮ ನಿಮ್ಮೆಲ್ಲರ ಹೆಸರಿನಲ್ಲಿ ವಿಧಾನಸೌಧದ ಒಳಗೆ ದಲ್ಲಾಳಿಗಳು ಬರುತ್ತಿದ್ದಾರೆ, ನಮಗೂ ಮತ್ತು ಜನರಿಗೂ ಅನುಕೂಲ ಮಾಡುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಮುನಿರಾಜು, ಭೂ ದಲ್ಲಾಳಿಗಳಾ? ವರ್ಗಾವಣೆ ದಲ್ಲಾಳಿಗಳಾ? ಹೆಸರು ಹೇಳು ಅಂದರೆ ಅವರ ಹೆಸರು ಹೇಳುತ್ತೇನೆ ಅಂದರು.

Advertisement

Udayavani is now on Telegram. Click here to join our channel and stay updated with the latest news.

Next