Advertisement

ಕೇಂದ್ರದ ವಿರುದ್ದ ರೈತ ಸಂಘ ಆಕ್ರೋಶ

07:40 PM Jun 06, 2021 | Team Udayavani |

ಗೌರಿಬಿದನೂರು: ಸಂಯುಕ್ತ ಕಿಸಾನ್‌ಮೋರ್ಚಾ ಸಂಘ ಸಂಪೂರ್ಣ ಕ್ರಾಂತಿ ದಿನದಅಂಗವಾಗಿ ಕರೆ ನೀಡಿ¨ª‌ ಹೋರಾಟ ಬೆಂಬಲಿಸಿತಾಲೂಕು ರೈತ ಸಂಘವು ಕೃಷಿ ಕಾಯ್ದೆಗಳ ಪ್ರತಿಸುಟ್ಟು ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.

Advertisement

ನಗರದ ಹೊರವಲಯದ ತಾಲೂಕು ಕಚೇರಿಆವರಣದಲ್ಲಿ ರೈತ ಸಂಘ ಮತ್ತು ಪ್ರಜಾಸಂಘರ್ಷ ಜಿಲ್ಲಾ ಸಮಿತಿ ಕೇಂದ್ರ ಸರ್ಕಾರಜಾರಿಗೊಳಿಸಿದ ರೈತ ವಿರೋಧಿ ಕಾಯ್ದೆಗಳ ಪ್ರತಿಸುಟ್ಟು ಪ್ರತಿಭಟನೆ ಮಾಡಿತು.

ಈ ಬಗ್ಗೆ ರೈತ ಸಂಘದ ತಾಲೂಕು ಅಧ್ಯಕ್ಷಗುಂಡಾಪುರ ಲೋಕೇಶ್‌ಗೌಡ ಮಾತನಾಡಿ,ಪ್ರಧಾನಿ ನರೇಂದ್ರ ಮೋದಿ ರೈತವಿರೋಧಿಯಾಗಿದ್ದು, ರೈತ ಪಾಲಿಗೆ ಅವರುತಂದಿರುವ ಕಾಯ್ದೆಗಳು ಮರಣ ಶಾಸನವಾಗಿದೆ.ಇದರಿಂದ ರೈತ ಕೂಲಿ ಕಾರನಾಗಿ ಕಾರ್ಪೊರೇಟ್‌ಕಂಪನಿಗಳ ಗುಲಾಮನಾಗುತ್ತಾನೆ.

ಸಾವಿರಾರುಎಕರೆ ಕೃಷಿ ಭೂಮಿ ಶ್ರೀಮಂತರ ಪಾಲಾಗುತ್ತದೆ.ಇದರಿಂದ ದೇಶದ ಕೃಷಿ ನೀತಿಗೆಧಕ್ಕೆಯುಂಟಾಗುತ್ತದೆ ಎಂದು ಆಕ್ರೋಶವ್ಯಕ್ತಪಡಿಸಿದರು.ಪಿಎಸ್‌ಎಸ್‌ ಸಂಘಟನೆ ಜಿಲ್ಲಾ ಸಹಸಂಚಾಲಕ ಆರ್‌.ಎನ್‌.ರಾಜು ಮಾತನಾಡಿ,ಕೇಂದ್ರ ಸರ್ಕಾರ ಈಗ ತಂದಿರುವ ಕೃಷಿಕಾಯ್ದೆಗಳು ಸಂಪೂರ್ಣ ಅವೈಜಾnನಿಕವಾಗಿವೆ.

ರೈತರ ಕೃಷಿ ಭೂಮಿ ಕಾರ್ಪೊರೇಟ್‌ ಕಂಪನಿಗಳಪಾಲಾಗುತ್ತದೆ. ಕೈಗಾರಿಕಗಳ ಪಾಲಿಗೆ ರೈತಭೂಮಿ ವಶವಾಗುತ್ತದೆ. ಇದರಿಂದ ಆಹಾರಕೊರತೆ ಉಂಟಾಗಿ ಜನ ಸಂಕಷ್ಟಕ್ಕೆಗುರಿಯಾಗುವುದರಲ್ಲಿ ಸಂಶಯವಿಲ್ಲಎಂದರು.ಈ ದೇಶದಲ್ಲಿ ರೈತ ಉಳಿಯಬೇಕಾದರಸ್ವಾಮಿನಾಥ್‌ ವರದಿ ಕೂಡಲೆ ಜಾರಿಗೆತರಬೇಕು, ಆಗ ಮಾತ್ರ ಈ ದೇಶ ಕೃಷಿ ಪ್ರಧಾನದೇಶವಾಗಲು ಸಾಧ್ಯವೆಂದರು.ಇದೇ ವೇಳೆಯಲ್ಲಿ ರೈತ ಸಂಘದಕಾರ್ಯದರ್ಶಿ ಹಿರೇಬಿದನೂರು ರಾಜಣ್ಣ,ವೆಂಕಟರೆಡ್ಡಿ, ಶ್ರೀನಿವಾಸ್‌, ಅಶೋಕ್‌ ಮತ್ತಿತರುಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next