Advertisement
ನೆರೆಯ ತಮಿಳುನಾಡು ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಾಸ್ತಿ ಗ್ರಾಮದ ಪಶು ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇರುವುದರಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರಪಶುಗಳಿಗೆ ಸಮರ್ಪಕವಾದ ಪಶು ವೈದ್ಯಕೀಯ ಸೇವೆಸಿಗುತ್ತಿಲ್ಲ. ಪಶು ಪಾಲನಾ ಮತ್ತು ಪಶು ವೈದ್ಯಕೀಯಸೇವಾ ಇಲಾಖೆಯ ಮಾಸ್ತಿ ಪಶು ಆಸ್ಪತ್ರೆಯಲ್ಲಿವೈದ್ಯರು ಸೇರಿದಂತೆ 5 ಹುದ್ದೆಗಳ ಪೈಕಿ ಕೇವಲ ಡಿಗ್ರೂಫ್ ನೌಕರನೊಬ್ಬ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ವೈದ್ಯರು, ಜಾನುವಾರು ಅಧಿಕಾರಿ, ಪಶು ಸಹಾಯಕರು, ಡಿ.ಗ್ರೂಫ್ ನೌಕರ-1, 4 ಹುದ್ದೆ ಖಾಲಿ ಇದೆ. ಮಾಸ್ತಿ ಪಶು ಆಸ್ಪತ್ರೆಯಲ್ಲಿ ಈ ಹಿಂದೆಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕ ನಿರ್ದೇಶಕಶ್ರೀರಂಗ ರಾಜು 2019ನೇ ಜುಲೆ„ 16ರಂದು ಬೇರೆಕಡೆಗೆ ವರ್ಗಾವಣೆಯಾದರು. ಅಂದಿನಿಂದಇಂದಿನವರೆಗೂ ಡಿ.ಎನ್.ದೊಡ್ಡಿ ಪ್ರಾಥಮಿಕ ಪಶುಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ನಂದೀಶ್‌ಅವರು ಪ್ರಭಾರೆ ಯಾಗಿದ್ದು, ಎರಡೂ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Related Articles
Advertisement
ಶಾಸಕರೇ ಗಮನ ಹರಿಸಿ: ಕೋಚಿಮುಲ್ ಅಧ್ಯಕ್ಷರು ಮತ್ತು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರು ಸಭೆ-ಸಮಾರಂಭಗಳಲ್ಲಿ ಮಾತಾನಾಡುತ್ತಾ,ಬಹುತೇಕ ರೈತರು ಹೆ„ನುಗಾರಿಕೆಯಲ್ಲಿ ತೊಡಗಿಸಿಕೊಂಡು ನೆಮ್ಮದಿ ಜೀವನ ನಡೆಸುತ್ತಿದ್ದಾರೆ.ತಾಲೂಕಿನಲ್ಲಿ ಹೆಚ್ಚು ಹಾಲು ಪೂರೈಕೆ ಯಾಗುತ್ತಿದೆ.ಅದರಲ್ಲೂ ಮಾಸ್ತಿ ಹಾಲು ಉತ್ಪಾದಕರ ಸಂಘದಿಂದ ಹೆಚ್ಚು ಹಾಲು ಪೂರೈಕೆಯಾಗುತ್ತಿದೆ ಎಂದು ಪ್ರತೀಬಾರಿ ಹೇಳುತ್ತಾರೆ. ಆದರೆ, ಹೈನುಗಾರಿಕೆಯಲ್ಲಿತೊಡಗಿಸಿಕೊಂಡಿರುವ ರೈತರು ತಮ್ಮ ಹಸುಗಳಿಗೆ ಅನಾರೋಗ್ಯವಾದರೆ, ಸಮರ್ಪಕ ಚಿಕಿತ್ಸೆಗೆಪರದಾಡುವಂತಾಗಿದೆ. ಆದ್ದರಿಂದ ಶಾಸಕರು ಗಮನಹರಿಸಿ, ಪಶು ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರುಹಾಗೂ ಸಿಬ್ಬಂದಿ ನೇಮಿಸಲು ಸರ್ಕಾರದ ಗಮನಕ್ಕೆತಂದು ಅನುಕೂಲ ಕಲ್ಪಿಸಬೇಕಾಗಿದೆ ಎಂದು ರೈತರು ಆಗ್ರಹಿಸುತ್ತಿದ್ದಾರೆ.
ಮಾಸ್ತಿ ಪಶು ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿಕೊರತೆ ಇದೆ. ಇದರಿಂದಜಾನುವಾರುಗಳಿಗೆ ಸಮರ್ಪಕ,ಸಮಯಕ್ಕೆ ಸರಿ ಚಿಕಿತ್ಸೆ ಸಿಗದೆತೊಂದರೆಯಾಗಿದೆ. ಸಿಬ್ಬಂದಿ ಒಬ್ಬರೇಒಬ್ಬರು ಕೆಲಸ ಮಾಡುತ್ತಿದ್ದಾರೆ.ವೈದ್ಯರಿಲ್ಲದೆ ತೊಂದರೆಯಾಗುತ್ತಿದೆ.ಶಾಸಕರು ಇತ್ತ ಗಮನ ಹರಿಸಿ,ಸರ್ಕಾರ ಪಶು ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಿ. – ಜಿ.ಎಂ.ನಾರಾಯಣಗೌಡ, ರೈತ
ಮಾಸ್ತಿ ಪಶು ಆಸ್ಪತ್ರೆಯಲ್ಲಿ ಡಿ ಗ್ರೂಪ್ 1 ಹೊರತುಪಡಿಸಿದರೆ 4 ಹುದ್ದೆ ಖಾಲಿಇರುವುದು ನಿಜ. ಮಾಲೂರು ತಾಲೂಕಿನಲ್ಲಿ 82ಮಂಜೂರಾತಿಯಲ್ಲಿ 42 ಹುದ್ದೆ ಖಾಲಿಇರುವುದರಿಂದ ಸಿಬ್ಬಂದಿ ಕೊರತೆ ಇದೆ. ಇದರಿಂದರೈತರಿಗೆ ತೊಂದರೆಯಾಗಿದೆ. ವೈದ್ಯರು ಹಾಗೂಸಿಬ್ಬಂದಿ ಕೊರತೆ ನಿವಾರಣೆಯಾದರೆ ಹೈನುಗಾರಿಕೆ ರೈತರಿಗೆ ಅನುಕೂಲವಿದೆ. ಈ ಬಗ್ಗೆ ಪ್ರತಿ ವರ್ಷನೀಡುವ ವರದಿ ಪತ್ರದಲ್ಲಿ ದಾಖಲೆ ಮಾಡಿ, ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. – ನಾರಾಯಣ ಸ್ವಾಮಿ, ಸಹಾಯಕ ನಿರ್ದೇಶಕ, ಪಶು ಇಲಾಖೆ ಮಾಲೂರು
– ಮಾಸ್ತಿ ಎಂ.ಮೂರ್ತಿ